More

    ಮತಾಂತರ ನಿಷೇಧ ಜಾರಿ ಸನ್ನಿಹಿತ: ವಿರೋಧ, ಸಭಾತ್ಯಾಗದ ಮಧ್ಯೆ ಮಸೂದೆಗೆ ಮೇಲ್ಮನೆ ಅಸ್ತು, ರಾಜ್ಯಪಾಲರ ಸಹಿ ಬಾಕಿ

    ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಸಂಪೂರ್ಣ ಅನುಷ್ಠಾನಕ್ಕೆ ಕಾಲ ಸನ್ನಿಹಿತವಾಗಿದೆ. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ವಿಧಾನಸಭೆಯ ಅಂಗೀಕಾರ ಪಡೆದಿದ್ದ ಮಸೂದೆಗೆ ಒಂಭತ್ತು ತಿಂಗಳ ಬಳಿಕ ಗುರುವಾರ ವಿಧಾನ ಪರಿಷತ್ತಿನಲ್ಲೂ ಅನುಮೋದನೆ ದೊರೆತಿದ್ದು, ಇನ್ನು ರಾಜ್ಯಪಾಲರ ಅಂಕಿತವೊಂದೇ ಬಾಕಿ ಉಳಿದಿದೆ.

    ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದು, ಮತಾಂತರ ನಿಷೇಧವೂ ಜಾರಿಗೆ ಬರಬೇಕೆಂಬ ಬಿಜೆಪಿ ಮತ್ತು ಸಂಘ-ಪರಿವಾರ ಪ್ರಣೀತ ಸೂತ್ರದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆದುಕೊಂಡಿದ್ದಾರೆ. ವಿಧಾನ ಪರಿಷತ್​ನಲ್ಲಿ ಬೆಳಗಾವಿ ಅಧಿವೇಶನದಲ್ಲೇ ಮಂಡನೆಯಾಗಿದ್ದ ಮಸೂದೆ ಆರು ತಿಂಗಳೊಳಗೆ ಅಂಗೀಕಾರವಾಗದ ಕಾರಣ ಮೇಲ್ಮನೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸುವ ತನಕ ಸುಗ್ರೀವಾಜ್ಞೆಯ ರಕ್ಷಣೆ ನೀಡಲಾಗಿತ್ತು.

    ಮಸೂದೆ ಪ್ರತಿ ಚಿಂದಿ ಚಿಂದಿ: ‘ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, 2022’ವೆಂಬ ಶಾಸನಾತ್ಮಕ ಹೆಸರಿನಲ್ಲಿ ಮಂಡನೆಯಾಗಿದ್ದ ವಿಧೇಯಕ ಅಂಗೀಕಾರಕ್ಕೆ ಮುನ್ನ ಪ್ರತಿಪಕ್ಷಗಳ ತೀವ್ರ ವಿರೋಧ, ಧರಣಿ, ಧಿಕ್ಕಾರದ ಮೊಳಗು, ಕೋಲಾಹಲ ಸೃಷ್ಟಿಯಾದರೂ ಆಡಳಿತ ಪಕ್ಷದ ಸದಸ್ಯರು ಪ್ರತಿರೋಧವೊಡ್ಡಿದರು.

    ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಧಿಕ್ಕಾರ ಮೊಳಗಿಸಿದರೆ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮಸೂದೆ ಪ್ರತಿಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಕೂಡ ವಿರೋಧಕ್ಕೆ ಸಾಥ್ ನೀಡಿತು. ಮಸೂದೆ ಬಗೆಗಿನ ಆತಂಕ, ಆಕ್ಷೇಪವನ್ನು ಪರಿಗಣಿಸಲಿಲ್ಲವೆಂದು ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದರೆ, ಆಡಳಿತ ಪಕ್ಷ ತನಗಿರುವ ಬಹುಮತದ ಬಲದಿಂದ ವಿಧೇಯಕಕ್ಕೆ ಅಸ್ತು ಎಂದಿತು. ಮಸೂದೆ ಅಂಗೀಕಾರವಾಗುವುದನ್ನು ಕಾದಿದ್ದ ಬಿಜೆಪಿ ಸದಸ್ಯರು ಕೂಡ ಇಟಲಿ ಕಾಂಗ್ರೆಸ್, ಗುಲಾಮಗಿರಿ ಎಂದು ಧಿಕ್ಕಾರದ ತಿರುಗೇಟು ನೀಡಿದರು. ಉಭಯ ಸದನಗಳಲ್ಲಿ ಅಂಗೀಕರಿಸಿ ಕಳುಹಿಸಿದ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿ, ಅಧಿಸೂಚನೆ ಹೊರಬೀಳುತ್ತಿದ್ದಂತೆಯೇ ಕಾಯ್ದೆ ಜಾರಿಯಾಗಲಿದೆ.

    ಏಟು-ಎದಿರೇಟು: ಇದಕ್ಕೂ ಮೊದಲು ಆರಗ ಜ್ಞಾನೇಂದ್ರ, ಬಲವಂತದ ಹಾಗೂ ದುರ್ವರ್ಗದ ಮತಾಂತರ ಹೆಚ್ಚುತ್ತಿದ್ದು, ಅಶಾಂತಿ, ಅಪನಂಬಿಕೆ ಜತೆಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಕಾರಣ ಈ ಬೆಳವಣಿಗೆ ನಿಯಂತ್ರಿಸುವುದು ಮಸೂದೆ ಉದ್ದೇಶ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಇಂಥದ್ದೇ ಪ್ರಯತ್ನ ಮಾಡಲಾಗಿತ್ತು.

    ಈ ನಿಯಮ ಜಾರಿಗೆ ಬಂದು 57 ವರ್ಷ ಕಳೆದಿದ್ದು, ಕೆಲವರು ಮೃತಪಟ್ಟಿದ್ದಾರೆ. ಅದೇ ರೀತಿ ಹೊರರಾಜ್ಯ ಹಾಗೂ ವಿದೇಶಕ್ಕೆ ಹೋದವರ ಹೆಸರಿನಲ್ಲಿ ವೈದ್ಯ ಪ್ರಮಾಣಪತ್ರಗಳನ್ನು ಕೊಡುವ ಅವ್ಯವಹಾರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ ಎನ್ನುವುದು ವೈದ್ಯರ ಆರೋಪ.

    ಸದುದ್ದೇಶದ ಮಸೂದೆಯನ್ನು ಪರ್ಯಾಲೋಚಿಸಿ, ಅಂಗೀಕರಿಸಬೇಕು ಎಂದು ಸದನವನ್ನು ಕೋರಿದರು. ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಚರ್ಚೆ ಪ್ರಾರಂಭಿಸಿ, ಮುಸ್ಲಿಮರು ಹಾಗೂ ಕ್ರೖೆಸ್ತರನ್ನು ಭಯದಲ್ಲಿಡಲು ವಿಧೇಯಕ ತರಲಾಗುತ್ತಿದ್ದು, ಸಂವಿಧಾನದ 25ನೇ ಪರಿಚ್ಛೇದಕ್ಕೆ ವಿರುದ್ಧವಾಗಿದೆ. ಸಂವಿಧಾನದ ತಿದ್ದುಪಡಿ ಅಧಿಕಾರ ಸಂಸತ್ತಿಗಿದೆ. ರಾಜ್ಯಕ್ಕೆ ಈ ಅಧಿಕಾರವಿಲ್ಲ. ಮುಂದೆ ಸುಪ್ರೀಂ ಕೋರ್ಟ್​ನಲ್ಲಿ ಸಿಂಧುವಾಗುವುದು ಅನುಮಾನ. ಒಡಿಶಾ ಸೇರಿ 9 ರಾಜ್ಯಗಳಲ್ಲಿ ಇಂತಹ ಕಾಯ್ದೆ ಜಾರಿಗೆ ಬಂದಿದ್ದು, ದುಷ್ಪರಿಣಾಮಗಳೇ ಹೆಚ್ಚಾಗಿವೆ ಎಂದರು.

    ಜನಗಣತಿ ವರದಿ ಪ್ರಕಾರ ಕ್ರೖೆಸ್ತರ ಜನಸಂಖ್ಯೆ ಶೇ.2.34ರಷ್ಟಿದ್ದದ್ದು 2011ರಲ್ಲಿ 2.30ಕ್ಕೆ ಇಳಿದಿದೆ. ಕರ್ನಾಟಕದಲ್ಲಿ 2001ರಲ್ಲಿ ಶೇ.1.91ರಷ್ಟಿದ್ದರು. 2011ರಲ್ಲಿ ಶೇ.1.87ಕ್ಕೆ ಇಳಿದಿದೆ. ಮತಾಂತರ ಆಗಿದ್ದರೆ ಜನಸಂಖ್ಯೆ ಹೆಚ್ಚಾಗಬೇಕಿತ್ತು. ಬಲವಂತದ ಮತಾಂತರ ಪ್ರಕರಣಗಳು ಎಷ್ಟಿವೆ ಎಂಬ ವಿವರವಿಲ್ಲ. ಸ್ವಾಭಿಮಾನದ ಬದುಕು, ಸಮಾನತೆಗೆ ಮತಾಂತರವಾದರೆ ತಪ್ಪಲ್ಲ. ದಲಿತರು, ದುರ್ಬಲರನ್ನು ಹೇಗೆ ಶೋಷಿಸಲಾಗಿದೆ ಎನ್ನುವುದು ಇತಿಹಾಸ ತಿಳಿಸುತ್ತದೆ. ಇದೊಂದು ಸಂವಿಧಾನ ವಿರೋಧಿ ಮಸೂದೆ ಎಂದರೆ, ಜೆಡಿಎಸ್​ನ ಮರಿತಿಬ್ಬೇಗೌಡ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪಿತೂರಿಯಿದು ಎಂದು ಗುಡುಗಿದರು.

    ಬೊಮ್ಮಾಯಿ ಸಮರ್ಥನೆ: ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಿ, ಎಲ್ಲ ಧರ್ಮಗಳು ತಮ್ಮದೇ ಕಟ್ಟುಪಾಡುಗಳನ್ನು ಹೊಂದಿವೆ. ಯಾವ್ಯಾವ ಧರ್ಮಗಳು ಯಾವ ರೀತಿ ಬಿಗಿ ಹಿಡಿತ ಸಾಧಿಸಿವೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಸೇರಿ ಏನೆಲ್ಲ ನಡೆಯುತ್ತಿದೆ ಎಂದು ವಿಸ್ತರಿಸಲು ಬಯಸುವುದಿಲ್ಲ ಎಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದರು.

    ಚರ್ಚೆಯಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ, ಆಡಳಿತ ಪಕ್ಷದ ಭಾರತಿ ಶೆಟ್ಟಿ, ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ಪ್ರತಿಪಕ್ಷ ಕಾಂಗ್ರೆಸ್​ನ ಸಲೀಂ ಅಹ್ಮದ್, ನಾಗರಾಜ್ ಯಾದವ್ ಭಾಗವಹಿಸಿದ್ದರು. ಎರಡೂ ಕಡೆಯವರು ಪೈಪೋಟಿಗೆ ಬಿದ್ದವರಂತೆ ಪರಸ್ಪರ ಹೀಗಳೆಯುವ, ಕಾಲೆಳೆಯುವ, ಪಕ್ಷದ ನಿಲುವಿಗೆ ಅನುಗುಣವಾಗಿ ನಡೆಸಿದ ವಾಗ್ದಾಳಿಗೆ ‘ಚಿಂತಕರ ಚಾವಡಿ’ ಸಾಕ್ಷಿಯಾಯಿತು.

    ಸಂವಿಧಾನದ ಆರ್ಟಿಕಲ್ 25ನ್ನು ಉಲ್ಲಂಘಿಸುವ ಯಾವುದೇ ಅಂಶಗಳು ವಿಧೇಯಕದಲ್ಲಿಲ್ಲ. ಸುಪ್ರೀಂ ಕೋರ್ಟ್ 1977ರಲ್ಲಿ ನೀಡಿದ ತೀರ್ಪು ಕೂಡ ಮರೆಯುವಂತಿಲ್ಲ. ಸಂವಿಧಾನಬದ್ಧವಾಗಿ ಎಲ್ಲ ಧರ್ವಿುಯರ ಸ್ವಾತಂತ್ರ್ಯ, ಹಕ್ಕು ರಕ್ಷಿಸಲಾಗುತ್ತಿದೆ. ಮತಾಂತರವನ್ನು ನಿಷೇಧಿಸಿಲ್ಲ. ಆದರೆ ಬಲವಂತದ, ಆಸೆ-ಆಮಿಷವೊಡ್ಡಿ ಮಾಡುವ ಮತಾಂತರಗಳು ಸಾಮಾಜಿಕ, ಕಾನೂನು ಮತ್ತು ಸುವ್ಯವಸ್ಥೆಗೆ ಕಂಟಕವಾಗಿದ್ದು, ಇಂತಹ ಚಟುವಟಿಕೆ ನಿಬಂಧಿಸುವುದಷ್ಟೇ ವಿಧೇಯಕದ ಉದ್ದೇಶ.

    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    ಮುಸ್ಲಿಮರು ಹಾಗೂ ಕ್ರೖೆಸ್ತರನ್ನು ಭಯದಲ್ಲಿಡಲು ವಿಧೇಯಕ ತರಲಾಗುತ್ತಿದ್ದು, ಸಂವಿಧಾನದ 25ನೇ ಪರಿಚ್ಛೇದಕ್ಕೆ ವಿರುದ್ಧವಾಗಿದೆ.

    | ಬಿ.ಕೆ.ಹರಿಪ್ರಸಾದ್ ಮೇಲ್ಮನೆ ಪ್ರತಿಪಕ್ಷ ನಾಯಕ

    ಸೌಲಭ್ಯಗಳು ಇರುವುದಿಲ್ಲ: ಮತ್ತೊಂದು ಧರ್ಮಕ್ಕೆ ಮತಾಂತರವಾದ ವ್ಯಕ್ತಿಯು ಮೂಲ ಧರ್ಮದ ಜಾತಿಯಲ್ಲಿ ಪಡೆಯುತ್ತಿದ್ದ ಸವಲತ್ತುಗಳು ಕಡಿತವಾಗಲಿವೆ. ಮತಾಂತರವಾದ ಧರ್ಮದ ಸವಲತ್ತು ಪಡೆಯಲು ಅವಕಾಶವಿದೆ.

    ಉದ್ದೇಶ ಸಾಧನೆಗೆ ಮತಾಂತರ ಸಲ್ಲ: ರಾಜ್ಯದಲ್ಲಿ ಇನ್ನು ಮುಂದೆ ನಡೆಯಲಿರುವ ಮತಾಂತರಗಳು ಕಾಯ್ದೆ ಮಸೂರದಲ್ಲಿ ವಿಚಕ್ಷಣೆಗೆ ಒಳಪಡಲಿದ್ದು, ಮನಸೋಇಚ್ಛೆ ಅಥವಾ ಯಾವುದೋ ಉದ್ದಿಶ್ಯ ಸಾಧನೆಗೆ ಈ ಪ್ರಯತ್ನ ಫಲಿಸದು.

    ಪ್ರಸ್ತಾವಿತ ಕಾಯ್ದೆಯಲ್ಲೇನಿದೆ?

    • ಬಲವಂತ, ಆಸೆ-ಆಮಿಷ, ಪ್ರಭಾವ, ಒತ್ತಾಯ, ವಂಚನೆ ವಿಧಾನದ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ನಿಷೇಧ
    • ಬಲವಂತದಿಂದ ಮತಾಂತರವಾದ ವ್ಯಕ್ತಿಯ ಪಾಲಕರು, ಒಡಹುಟ್ಟಿದವರು, ಸಂಬಂಧಿಕರು, ಸಹವರ್ತಿ, ಸಹೋದ್ಯೋಗಿಗಳಿಗೆ ದೂರು ದಾಖಲಿಸಲು ಅವಕಾಶ.
    • ಕಾನೂನು ಉಲ್ಲಂಘಿಸಿದರೆ 3 ವರ್ಷಗಳ ಅವಧಿಯ ಆದರೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಜತೆಗೆ 25 ಸಾವಿರ ರೂ. ದಂಡ
    • ಅಪ್ರಾಪ್ತ ಅಥವಾ ಅಸ್ವಸ್ಥಚಿತ್ತ ವ್ಯಕ್ತಿ, ಮಹಿಳೆ ಅಥವಾ ಅನುಸೂಚಿತ ಜಾತಿ, ಅನುಸೂಚಿತ ಪಂಗಡಕ್ಕೆ ಸೇರಿದ ವ್ಯಕ್ತಿಯ ಸಂದರ್ಭದಲ್ಲಿ ಮೂರು ವರ್ಷಗಳ ಅವಧಿಯ ಆದರೆ 10 ವರ್ಷಗಳ ವರೆಗೆ ವಿಸ್ತರಿಸಬಹುದಾದ ಜೈಲು ಹಾಗೂ 50 ಸಾವಿರ ಜುಲ್ಮಾನೆ.
    • ಸಾಮೂಹಿಕ ಮತಾಂತರ ಸಂದರ್ಭದಲ್ಲಿ 3 ವರ್ಷಗಳ ಅವಧಿಯ ಆದರೆ ಹತ್ತು ವರ್ಷಗಳಿಗೆ ವಿಸ್ತರಿಸಬಹುದಾದ ಜೈಲು, ಒಂದು ಲಕ್ಷ ರೂ. ದಂಡ
    • ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ ಐದು ಲಕ್ಷ ರೂ.ವರೆಗೆ ವಿಸ್ತರಿಬಹುದಾದ ಯುಕ್ತ ಪರಿಹಾರವನ್ನು ನ್ಯಾಯಾಲಯವು ಮಂಜೂರು ಮಾಡಬಹುದು
    • ಅಪರಾಧ ಪುನರಾವರ್ತನೆ ಸಾಬೀತಾದರೆ ಐದು ವರ್ಷಗಳಿಗೆ ಕಡಿಮೆ ಇರದ ಅವಧಿಗೆ ಜೈಲುವಾಸ, 2 ಲಕ್ಷ ರೂ. ಜುಲ್ಮಾನೆ
    • ಈ ಅಧಿನಿಯಮದ ಅಡಿಯಲ್ಲಿ ಎಸಗಲಾದ ಪ್ರತಿಯೊಂದು ಅಪರಾಧವು ಜಾಮೀನುರಹಿತ
    • ಸ್ವಇಚ್ಛೆಯ ಮತಾಂತರಕ್ಕೂ ಅವಕಾಶವಿದೆ. ಇಚ್ಛಿಸಿದ ವ್ಯಕ್ತಿ ಕನಿಷ್ಠ 30 ದಿನಗಳ ಮುಂಚಿತವಾಗಿ ಆಯಾ ಜಿಲ್ಲಾಧಿಕಾರಿ ಅಥವಾ ವಿಶೇಷವಾಗಿ ಅಧಿಕಾರ ನೀಡಿದ ಅಪರ ದಂಡಾಧಿಕಾರಿಗೆ ನಿಗದಿತ ಪ್ರತ್ಯೇಕ ನಮೂನೆಯಲ್ಲಿ ಘೋಷಣೆ ಸಲ್ಲಿಸಬೇಕು
    • 30 ದಿನಗಳೊಳಗೆ ತಹಸೀಲ್ ಕಚೇರಿಯಲ್ಲಿ ಆಕ್ಷೇಪಣೆಗೆ ಆಹ್ವಾನ, ಕಂದಾಯ ಮತ್ತು ಸಮಾಜ ಕಲ್ಯಾಣ ಅಧಿಕಾರಿಗಳ ಮೂಲಕ ವಿಚಾರಣೆ ಮುಂತಾದ ಪ್ರಕ್ರಿಯೆಗಳಿವೆ.

    ಕೆಜಿಎಫ್​-2 ಚಿತ್ರದ ಪ್ರೇರಣೆ; 72 ಗಂಟೆಗಳಲ್ಲಿ 3 ಸೆಕ್ಯುರಿಟಿ ಗಾರ್ಡ್​ಗಳ ಕೊಲೆ: ನಿದ್ರೆಗೆಟ್ಟ ಕೈದಿಗಳು..

    ಪುನೀತ್ ರಾಜಕುಮಾರ್​ ಜನ್ಮದಿನ ಇನ್ಮುಂದೆ ಸ್ಫೂರ್ತಿ ದಿನ: ಸರ್ಕಾರದ ವತಿಯಿಂದಲೇ ಆಚರಣೆ ಎಂದು ಸಿಎಂ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts