More

    ಚೇತರಿಸಿದ ಸೆನ್ಸೆಕ್ಸ್​ ಆರಂಭಿಕ ವಹಿವಾಟಿನಲ್ಲಿ 400ಕ್ಕೂ ಹೆಚ್ಚು ಅಂಶ ಏರಿಕೆ

    ಮುಂಬೈ: ಸತತ ಕುಸಿತದ ಬಳಿಕ ಭಾರತೀಯ ಷೇರುಪೇಟೆ ಸೂಚ್ಯಂಕಗಳು ಬುಧವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಲೇ ಚೇತರಿಕೆ ತೋರಿಸಿಕೊಂಡು ಲಾಭಗಳಿಕೆಯತ್ತ ಮುನ್ನುಗ್ಗಿವೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ 400ಕ್ಕೂ ಹೆಚ್ಚು ಅಂಶ ಏರಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್(ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 120ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಿಸಿವೆ.

    ಷೇರುಪೇಟೆಯಲ್ಲಿ ಬುಧವಾರ ವಹಿವಾಟು ಆರಂಭವಾಗುತ್ತಲೇ ಸೆನ್ಸೆಕ್ಸ್​ 408.42 ಅಂಶ ಏರಿಕೆ ದಾಖಲಿಸಿ 41,302.80ಯಲ್ಲೂ ನಿಫ್ಟಿ 123.80 ಅಂಶ ಏರಿಕೆ ದಾಖಲಿಸಿ 12,116.30ಯಲ್ಲೂ ವಹಿವಾಟು ನಡೆಸಿದ್ದವು. ಮಂಗಳವಾರ ವಹಿವಾಟು ಕೊನೆಗೊಂಡಾಗ ಸೆನ್ಸೆಕ್ಸ್​ 40,894.38ರಲ್ಲೂ, ನಿಫ್ಟಿ 11,992.50ಯಲ್ಲೂ ದಿನದ ವಹಿವಾಟು ಮುಗಿಸಿದ್ದವು.

    ಕೊರೊನಾ ವೈರಸ್ ಆತಂಕದ ನಡುವೆಯೂ ಮಾರುಕಟ್ಟೆ ಚೇತರಿಸಿಕೊಂಡಿದ್ದು, ಪೇಟೆಯ ವಹಿವಾಟಿನಲ್ಲೂ ಲವಲವಿಕೆ ಮೂಡಿದೆ. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರಣಕ್ಕೆ ಇಂದು ಫಾರೆಕ್ಸ್ ಮಾರುಕಟ್ಟೆಗೆ ರಜೆ ಇದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts