More

    ಕವುಚಿ ಬಿದ್ದ ಸೆನ್ಸೆಕ್ಸ್​- ಆರಂಭಿಕ ವಹಿವಾಟಿನಲ್ಲಿ 1,500ಕ್ಕೂ ಹೆಚ್ಚು ಅಂಶ ಕುಸಿತ, ನಿಫ್ಟಿ 9,500ರ ಕೆಳಕ್ಕೆ…

    ಮುಂಬೈ: ಕರೊನಾ ಸೋಂಕು ತಡೆಯುವ ಲಾಕ್​ ಡೌನ್​ 3ನೇ ಹಂತ ಚಾಲ್ತಿಯಲ್ಲಿದ್ದರೂ, ಹಂತ ಹಂತವಾಗಿ ವಹಿವಾಟುಗಳನ್ನು ತೆರೆಯುವ ಸರ್ಕಾರಗಳ ಪ್ರಯತ್ನದ ನಡುವೆಯೇ ಭಾರತೀಯ ಷೇರುಪೇಟೆ ಸೋಮವಾರ ಬೆಳಗ್ಗೆ ಆರಂಭಿಕ ಆಘಾತ ಅನುಭವಿಸಿದೆ. ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲೇ 1,500ಕ್ಕೂ ಹೆಚ್ಚು ಅಂಶ ಕುಸಿದಿದೆ. ಇದೇ ವೇಳೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಕೂಡ 9,500ರ ಕೆಳಕ್ಕೆ ಕುಸಿದಿದೆ.

    ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಲೇ ಸೆನ್ಸೆಕ್ಸ್​ ಶೇಕಡ 4.49 ಅಥವಾ 1,513.68 ಅಂಶ ಕುಸಿದು 32,203.94 ರಲ್ಲೂ, ನಿಫ್ಟಿ ಶೇಕಡ 4.32 ಅಥವಾ 9.434.20 ಅಂಶಕ್ಕೆ ಕುಸಿದು ವಹಿವಾಟು ಮುಂದುವರಿಸಿವೆ. ಸೆನ್ಸೆಕ್ಸ್​ ಪಟ್ಟಿಯಲ್ಲಿ ಐಸಿಐಸಿಐ ಬ್ಯಾಂಕ್​ ಷೇರುಗಳು ಶೇಕಡ 8 ನಷ್ಟ ಅನುಭವಿಸಿದೆ. ಇದರ ಬೆನ್ನಿಗೆ ಇಂಡಸ್​ಇಂಡ್ ಬ್ಯಾಂಕ್​, ಟಾಟಾ ಸ್ಟೀಲ್​, ಬಜಾಜ್ ಫೈನಾನ್ಸ್​, ಟೆಕ್​ ಮಹೀಂದ್ರಾ, ಎಚ್​ಡಿಎಫ್​ಸಿ, ಎಚ್​ಡಿಎಫ್​ಸಿ ಬ್ಯಾಂಕ್​ ಷೇರುಗಳು ಕೂಡ ನಷ್ಟ ಅನುಭವಿಸಿವೆ.

    ಇದನ್ನೂ ಓದಿ: ವಲಸೆ ಕಾರ್ಮಿಕರಿಗೊಂದು ಗುಡ್​ನ್ಯೂಸ್​: ಉಚಿತ ಬಸ್​ ಪ್ರಯಾಣದ ಸೌಲಭ್ಯ ಇನ್ನೂ ಎರಡು ದಿನ ವಿಸ್ತರಣೆ

    ರಿಲಯನ್ಸ್ ಇಂಡಸ್ಟ್ರೀಸ್​ನ ಷೇರುಗಳು ಶೇಕಡ 1ಕ್ಕೂ ಹೆಚ್ಚು ನಷ್ಟ ಅನುಭವಿಸಿದ್ದು, ಇದರ ಕಾಲುವಾರ್ಷಿಕ ನಿವ್ವಳ ಲಾಭ ಜನವರಿ-ಮಾರ್ಚ್​ ನಲ್ಲಿ ಶೇಕಡ 37 ಕುಸಿದು 6,5465 ಕೋಟಿ ರೂಪಾಯಿ ತಲುಪಿದೆ. ಇದು ಇತ್ತೀಚಿನ ಮೂರು ವರ್ಷಗಳ ಅವಧಿಯಲ್ಲಿ ಕನಿಷ್ಠ ಮಟ್ಟವಾಗಿದೆ. ಇದೇ ವೇಳೆ, ಈ ದಿನದ ಆರಂಭದಲ್ಲಿ ಜಗತ್ತಿನ ಅತಿದೊಡ್ಡ ಟೆಕ್​ ಹೂಡಿಕೆದಾರರು ಜಿಯೋ ಪ್ಲಾಟ್​​ಫಾರ್ಮ್ಸ್​ನಲ್ಲಿ ಶೇಕಡ 1.15 ಪಾಲನ್ನು ಖರೀದಿಸಿ 5,655.75 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಸೆನ್ಸೆಕ್ಸ್​ ಪಟ್ಟಿಯಲ್ಲಿ ಸನ್​ ಫಾರ್ಮಾ ಕಂಪನಿಯ ಷೇರುಗಳಷ್ಟೇ ಲಾಭ ಗಿಟ್ಟಿಸಿಕೊಂಡಿವೆ.

    ಈ ಹಿಂದಿನ ದಿನದ ವಹಿವಾಟಿನಲ್ಲಿ ಬಿಎಸ್​ಇ ಸೂಚ್ಯಂಕ ಸೆನ್ಸೆಕ್ಸ್​ 997.46 ಅಂಶ ಏರಿಕೆ ತೋರಿ 33,717.62ರಲ್ಲೂ ನಿಫ್ಟಿ 306.55 ಅಂಶ ಏರಿಕೆ ತೋರಿ 9,859.90 ಅಂಶದಲ್ಲೂ ವಹಿವಾಟು ಕೊನೆಗೊಳಿಸಿದ್ದವು. ಶುಕ್ರವಾರ ಮಹಾರಾಷ್ಟ್ರ ದಿನಾಚರಣೆ ಕಾರಣ ಷೇರುಪೇಟೆಗೆ ರಜೆ ಇತ್ತು. ಗುರುವಾರದ ವಹಿವಾಟಿನ ವೇಳೆ ಫಾರಿನ್ ಪೋರ್ಟ್​ಫೋಲಿಯೋ ಇನ್​ವೆಸ್ಟರ್​ಗಳು 1,968.80 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಬಂಡವಾಳ ಮಾರುಕಟ್ಟೆಯಲ್ಲಿ ಖರೀದಿಸಿದ್ದಾರೆ. (ಏಜೆನ್ಸೀಸ್)

    VIDEO: ಹನುಮ ದೇವರಿಗೆ ಮದ್ಯಪ್ರಿಯ ಸಲ್ಲಿಸಿದ ಪೂಜೆ ಇದೀಗ ವೈರಲ್​

    ಮದ್ಯದ ಹೊರತು ಬೇರೇನೂ ಕಾಣುತ್ತಿಲ್ಲ ಮದ್ಯಪ್ರಿಯರಿಗೆ- ಸಾಮಾಜಿಕ ಅಂತರವೂ ಕಾಣಿಸದಾಯಿತು ಹೀಗಾಗಿ!: ಬಾಗಿಲಿಗೆ ಪೂಜೆ ಮಾಡಿ ಅಂಗಡಿ ತೆರೆದ್ರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts