More

    ಸೆನ್ಸೆಕ್ಸ್ 282 ಅಂಶ ಏರಿಕೆ, 12,850ರ ಗಡಿ ದಾಟಿದ ನಿಫ್ಟಿ

    ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಇಂದು ಗರಿಷ್ಠ ಮಟ್ಟದ ಏರಿಳಿತ ಕಂಡುಬಂದಿತ್ತಾದರೂ, ದಿನದ ಆರಂಭದಂತೆ ಕೊನೆಯಲ್ಲೂ ಬಿಎಸ್​ಇ ಸೆನ್ಸೆಕ್ಸ್ 282 ಅಂಶ ಏರಿಕೆ ದಾಖಲಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಧನಾತ್ಮಕ ಅಂಶಗಳು ಹಾಗೂ ವಿದೇಶಿ ನಿಧಿಯ ಒಳಹರಿವಿನ ಕಾರಣ ಈ ಏರಿಕೆ ದಾಖಲಾಗಿದೆ.

    ಬಿಎಸ್​ಇ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನ ಕೊನೆಗೆ 282.29 ಅಂಶ ಹೆಚ್ಚಳವಾಗಿ 43, 882.25 ಅಂಶದಲ್ಲಿ ವಹಿವಾಟು ಮುಗಿಸಿದೆ. ಎನ್​ಎಸ್​ಇ ನಿಫ್ಟಿ 87.35 ಅಂಶ ಹೆಚ್ಚಳವಾಗಿದ್ದು, 12,859. 05 ಅಂಶದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಸೆನ್ಸೆಕ್ಸ್ ಪಟ್ಟಿಯಲ್ಲಿ ಬಜಾಜ್​ ಫಿನ್​ಸರ್ವ್ ಕಂಪನಿಯ ಷೇರು ಗರಿಷ್ಠ ಶೇಕಡ 9 ಏರಿಕೆ ದಾಖಲಿಸಿದ್ದು, ಟೈಟಾನ್​, ಬಜಾಜ್ ಫೈನಾನ್ಸ್​, ಕೊಟಾಕ್ ಬ್ಯಾಂಕ್​, ಭಾರ್ತಿ ಏರ್​​ಟೆಲ್​, ನೆಸ್ಟ್ಲೆ ಇಂಡಿಯಾ, ಎನ್​ಟಿಪಿಸಿ ಷೇರುಗಳು ಲಾಭಾಂಶ ಗಿಟ್ಟಿಸಿಕೊಂಡಿವೆ.

    ಇದನ್ನೂ ಓದಿ:  ಲೈಂಗಿಕ ಕಿರುಕುಳ ಕೇಸ್​ – ನಟ ದಿಲೀಪ್ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಕೇರಳ ಹೈಕೋರ್ಟ್

    ಇನ್ನೊಂದೆಡೆ, ರಿಲಯನ್ಸ್ ಇಂಡಸ್ಟ್ರೀಸ್​, ಇಂಡಸ್​ಇಂಡ್ ಬ್ಯಾಂಕ್​, ಸನ್​ ಫಾರ್ಮಾ, ಏಕ್ಸಿಸ್ ಬ್ಯಾಂಕ್​, ಒಎನ್​ಜಿಸಿ, ಎಚ್​ಯುಎಲ್​ ಷೇರುಗಳು ದಿನದ ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ. ದೀಪಾವಳಿ ವಾರದ ವಹಿವಾಟಿಗೆ ಹೋಲಿಸಿದರೆ ಸೆನ್ಸೆಕ್ಸ್ ಶೇಕಡ 1 ಏರಿಕೆ ದಾಖಲಿಸಿದೆ. (ಏಜೆನ್ಸೀಸ್)

    ಸೆನ್ಸೆಕ್ಸ್ 250 ಪಾಯಿಂಟ್ ಜಂಪ್​, ನಿಫ್ಟಿ 12,800ರ ಮೇಲಕ್ಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts