More

    ಶುಭ-ಲಾಭ ತರುವ ನವೆಂಬರ್ ನಲ್ಲಿ ಸೆನ್ಸೆಕ್ಸ್​ ಜಿಗಿಯುವುದೇ?

    ಮುಂಬೈ: ಭಾರತೀಯ ಇಕ್ವಿಟಿ ಮಾರುಕಟ್ಟೆ ಸೆನ್ಸೆಕ್ಸ್ ಕಳೆದ ಅಕ್ಟೋಬರ್‌ನಲ್ಲಿ ಶೇ.3 ರಷ್ಟು ಕುಸಿತ ಕಂಡಿದ್ದು, ಕಳೆದ ಐದು ವರ್ಷಕ್ಕೆ ಹೋಲಿಸಿದರೆ ನಾಲ್ಕು ವರ್ಷ ನವೆಂಬರ್‌ನಲ್ಲಿ ಸರಾಸರಿ ಲಾಭಾಂಶ ಶೇ.6 ವೃದ್ಧಿಯಾಗಿದ್ದು, ಬ್ಯಾಂಕಿಂಗ್ ವಲಯಕ್ಕೆ ಈ ಮಾಸ ಅತಿದೊಡ್ಡ ಲಾಭದಾಯಕವಾಗಿ ಗೋಚರವಾಗುತ್ತಿದೆ.

    ಇದನ್ನೂ ಓದಿ: Aadhaar Data Leak: 81.5 ಕೋಟಿ ಭಾರತೀಯರ ಆಧಾರ್​ ವಿವರ ಹರಾಜಿಗಿಟ್ಟ ಹ್ಯಾಕರ್​!
    ನವೆಂಬರ್​ನಲ್ಲಿ ದಲಾಲ್ ಸ್ಟ್ರೀಟ್ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದರ ಮೇಲೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ. ಈ ತಿಂಗಳಲ್ಲಿ ದೀಪಾವಳಿ ಮತ್ತು ಧನ್ತೇರಸ್ ಹಬ್ಬಗಳು ಬರುವುದರಿಂದ ಹೂಡಿಕೆದಾರರು ಇದನ್ನು ಶುಭ-ಲಾಭವೆಂದು ಪರಿಗಣಿಸುತ್ತಾರೆ.

    ಎಸಿಇ ಇಕ್ವಿಟಿಯಿಂದ ಲಭ್ಯವಿರುವ ಮಾಹಿತಿಯಂತೆ ನವೆಂಬರ್ ಹೂಡಿಕೆದಾರರಿಗೆ ಧನಾತ್ಮಕ ಆದಾಯವನ್ನು ನೀಡಿದೆ, 2022ರಲ್ಲಿ ಸೆನ್ಸೆಕ್ಸ್ ಶೇಕಡಾ 3.9 ರಷ್ಟು ಜಿಗಿದಿದ್ದರೆ, ಅದು 2021 ರಲ್ಲಿ -3.8 ಶೇಕಡಾ, 2020 ರಲ್ಲಿ 11.4 ಶೇಕಡಾ, 2019 ರಲ್ಲಿ 1.7 ಶೇಕಡಾ ಮತ್ತು 2018 ರಲ್ಲಿ 5.1 ಶೇಕಡಾ ಆದಾಯ ಬಂದಿತ್ತು.

    ವಲಯದ ಸಾಧನೆ: ಇನ್ನು ಕಳೆದ 5ವರ್ಷಗಳಲ್ಲಿ ವಲಯದ ಸೂಚ್ಯಂಕಗಳು ನವೆಂಬರ್‌ನಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಬಿಎಸ್‌ಇ ಬ್ಯಾಂಕೆಕ್ಸ್ ಸೂಚ್ಯಂಕವು 4 ವರ್ಷ ನವೆಂಬರ್‌ನಲ್ಲಿ ಆದಾಯವು ಶೇ.6 ರಷ್ಟಿರುವ ಕಾರಣ ಬ್ಯಾಂಕಿಂಗ್ ವಲಯಕ್ಕೆ ಅತಿದೊಡ್ಡ ಲಾಭದಾಯಕವಾಗಿದೆ. ಆದರೆ ಬಿಎಸ್‌ಇ ಐಟಿ ಮತ್ತು ಬಿಎಸ್‌ಇ ತೈಲ ಮತ್ತು ಅನಿಲ ಸೂಚ್ಯಂಕಗಳು ಮಾತ್ರ ಶೇ.1 ಕಡಿಮೆ ಆದಾಯಗಳಿಸಿದ್ದವು.

    ಸ್ಟಾಕ್ ಕಾರ್ಯಕ್ಷಮತೆ: ಟೆಲಿಕಾಂ ಮೇಜರ್ ಭಾರ್ತಿ ಏರ್‌ಟೆಲ್ ಐದು ನವೆಂಬರ್​ಗಳಲ್ಲಿ ಧನಾತ್ಮಕ ಆದಾಯ ನೀಡಿದ ಏಕೈಕ ಸ್ಟಾಕ್ ಆಗಿದೆ, ಇದರ ಸರಾಸರಿ ಮಾಸಿಕ ಆದಾಯವು ಶೇ.8 ರಷ್ಟಿದೆ. ಇನ್ನು ಬಜಾಜ್ ಫಿನ್‌ಸರ್ವ್ (ಶೇ. 15), ಇಂಡಸ್‌ಇಂಡ್ ಬ್ಯಾಂಕ್ (ಶೇ. 12), ಅಪೊಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ (ಶೇ. 11), ಬಜಾಜ್ ಫೈನಾನ್ಸ್ (ಶೇ. 9) ಮತ್ತು ಹಿಂಡಾಲ್ಕೊ ಇಂಡಸ್ಟ್ರೀಸ್ (ಶೇ. 8) ಧನಾತ್ಮಕ ಆದಾಯಹೊಂದಿವೆ.

    ಮತ್ತೊಂದೆಡೆ, ಕೋಲ್ ಇಂಡಿಯಾ (-3 ಶೇಕಡಾ), NTPC (-3 ಶೇಕಡಾ), ಮತ್ತು ಸಿಪ್ಲಾ (-2 ಶೇಕಡಾ) ನಷ್ಟು ದೊಡ್ಡ ನಷ್ಟವನ್ನು ಹೊಂದಿವೆ. ಏಕೆಂದರೆ ಈ ಷೇರುಗಳು ನವೆಂಬರ್‌ನಲ್ಲಿ 2018 ರಿಂದ 2022 ರವರೆಗೆ ಸರಾಸರಿ ಋಣಾತ್ಮಕ ಮಾಸಿಕ ಆದಾಯವನ್ನು ಹೊಂದಿವೆ.

    ಥೈಲ್ಯಾಂಡ್​ ಪ್ರವಾಸಕ್ಕೆ ಭಾರತೀಯರಿಗೆ ಬೇಕಿಲ್ಲ ವೀಸಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts