More

    ಥೈಲ್ಯಾಂಡ್​ ಪ್ರವಾಸಕ್ಕೆ ಭಾರತೀಯರಿಗೆ ಬೇಕಿಲ್ಲ ವೀಸಾ…

    ಕೃಂಗ್ ತೇಪ್ ಮಹಾ ನಖೋನ್ (ಬ್ಯಾಂಕಾಕ್): ಭಾರತೀಯರು ಮುಂದಿನ ಆರು ತಿಂಗಳವರೆಗೆ ವೀಸಾ ಇಲ್ಲದೆ ಥೈಲ್ಯಾಂಡ್‌ಗೆ ಭೇಟಿ ನೀಡಬಹುದು. ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆದಾಯದ ಮೂಲವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಥಾಯ್​ ಸರ್ಕಾರ ಈ ನಿರ್ದಾರ ತೆಗೆದುಕೊಂಡಿದೆ.

    ಇದನ್ನೂ ಓದಿ: ವರದಿ: ಹಬ್ಬದ ಸೀಸನ್‌ಗೆ ಮುನ್ನ ಮಹಿಳಾ ಅರ್ಜಿದಾರರಲ್ಲಿ 61% ಹೆಚ್ಚಳ

    2023ರ ನ.10 ರಿಂದ 2024ರ ಮೇ 10ರವರೆಗೆ ವೀಸಾ-ಮುಕ್ತವಾಗಿ ಥೈಲ್ಯಾಂಡ್‌ಗೆ ಭೇಟಿ ನೀಡಬಹುದಾಗಿದೆ. ಅಷ್ಟೇ ಅಲ್ಲದೆ, 30 ದಿನಗಳವರೆಗೆ ಅಲ್ಲಿಯೇ ಉಳಿದುಕೊಳ್ಳಬಹುದಾಗಿದೆ.

    ಸೆಪ್ಟೆಂಬರ್‌ನಲ್ಲಿ ಥೈಲ್ಯಾಂಡ್ ಚೀನಾದ ಪ್ರವಾಸಿಗರಿಗೆ ವೀಸಾ ಅವಶ್ಯಕತೆಗಳನ್ನು ರದ್ದುಗೊಳಿಸಿತ್ತು. 2019 ರಲ್ಲಿ ಪ್ರವಾಸಿಗರಿಗೆ ವೀಸಾ ರದ್ದುಗೊಳಿಸಿದ್ದರಿಂದ ದಾಖಲೆಯ 39 ಮಿಲಿಯನ್ ಪ್ರವಾಸಿಗರ ಆಗಮನವಾಗಿತ್ತು. ಇದರಲ್ಲಿ 11 ಮಿಲಿಯನ್‌ ಚೀನಾದ ಪ್ರವಾಸಿಗರಿದ್ದುದು ಗಮನಾರ್ಹ ಸಂಗತಿಯಾಗಿದೆ.

    ಶ್ರೀಲಂಕಾ ಇತ್ತೀಚೆಗೆ 2024ರ ಮಾರ್ಚ್ 31ರವರೆಗೆ ಭಾರತ, ಚೀನಾ ಮತ್ತು ರಷ್ಯಾ ಸೇರಿದಂತೆ ಏಳು ದೇಶಗಳ ಪ್ರವಾಸಿಗರಿಗೆ ವೀಸಾ-ಮುಕ್ತ ಪ್ರವೇಶವನ್ನು ಘೋಷಿಸಿತ್ತು. ಕರೋನಾ ನಂತರ, ಹಲವು ದೇಶಗಳ ಪ್ರವಾಸೋದ್ಯಮ ಇಲಾಖೆಗಳು ಭಾರತೀಯ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಇಂತಹ ಯೋಜನೆಗಳನ್ನು ಪ್ರಕಟಿಸುತ್ತಿವೆ.

    ಮಲೇಷ್ಯಾ, ಚೀನಾ ಮತ್ತು ದಕ್ಷಿಣ ಕೊರಿಯಾದ ನಂತರ ಭಾರತದ ಪ್ರವಾಸಿಗರು ಥೈಲ್ಯಾಂಡ್‌ಗೆ ಭೇಟಿ ನೀಡುತ್ತಾರೆ. ಈ ದೇಶಕ್ಕೆ ಭೇಟಿ ನೀಡುವವರ ಸಂಖ್ಯೆ ನೋಡಿದರೆ ಭಾರತವು ನಾಲ್ಕನೇ ದೇಶವಾಗಿದೆ. ಸುಮಾರು 12 ಲಕ್ಷ ಪ್ರವಾಸಿಗರು ಈ ವರ್ಷ ಥೈಲ್ಯಾಂಡ್​ಗೆ ಭೇಟಿ ನೀಡಿದ್ದಾರೆ.

    ಭಾರತೀಯ ಸರ್ಕಾರದ ಅಂಕಿಅಂಶದಂತೆ 2011 ರಲ್ಲಿ 1.4 ಕೋಟಿ, 2019 ರಲ್ಲಿ 2.7 ಕೋಟಿ ಪ್ರವಾಸಿಗರು ಥೈಲ್ಯಾಂಡ್​ ಪ್ರವಾಸ ಕೈಗೊಂಡಿದ್ದಾರೆ.

    INDIA ಒಕ್ಕೂಟದ ನಾಯಕರ ಐಫೋನ್ ಹ್ಯಾಕ್ ಯತ್ನ; ಕಂಪನಿಯ ಎಚ್ಚರಿಕೆಯ ಸಂದೇಶವನ್ನು ಹಂಚಿಕೊಂಡ ಪ್ರತಿಪಕ್ಷ ಸಂಸದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts