ಸ್ವೀಪ್ ಸಮಿತಿಯಿಂದ ಹಾಟ್ ಏರ್ ಬಲೂನ್ ಹಾರಾಟ

1 Min Read
sweep committe
ಶಿವಮೊಗ್ಗದಲ್ಲಿ ಹಾಟ್ ಏರ್ ಬಲೂನ್ ಹಾರಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ಸ್ನೇಹಲ್ ಲೋಖಂಡೆ, ಗಾಯತ್ರಿ, ರಂಗನಾಥ್, ಆರ್.ರಾಜು, ಡಾ. ಶುಭ್ರತಾ, ಜ್ಯೋತಿ, ನವೀದ್ ಅಹಮದ್ ಪರ್ವೇಜ್ ಇದ್ದರು.

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ಮತದಾನ ಪ್ರಮಾಣ ಏರ್ ಬಲೂನ್ ರೀತಿಯಲ್ಲಿ ಆಕಾಶದ ಎತ್ತರಕ್ಕೆ ಏರಲಿ, ಕ್ಷೇತ್ರದಲ್ಲಿ ಶೇ.100 ಮತದಾನವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಲೋಖಂಡೆ ಹೇಳಿದರು.

ನಗರದ ಫ್ರೀಡಂಪಾರ್ಕ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿಗಾಗಿ ಶನಿವಾರ ಹಾಟ್ ಏರ್ ಬಲೂನ್ ಹಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಈ ಬಾರಿ ಶೇ.100 ಮತದಾನ ಆಗಬೇಕೆನ್ನುವ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿ ಅನೇಕ ಕಾರ್ಯಕ್ರಮ ಹಾಗೂ ವಿಶಿಷ್ಟ, ವಿಭಿನ್ನವಾದ ಚಟುವಟಿಕೆಗಳ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿದೆ. ಮತದಾರರು ತಪ್ಪದೇ ಮತದಾನದಲ್ಲಿ ಭಾಗವಹಿಸಿ ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮತದಾನ ಜಾಗೃತಿ ಕುರಿತು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ವಿಶೇಷವಾಗಿ ಏರ್ಪಡಿಸಿದ್ದ ಹಾಟ್ ಏರ್ ಬಲೂನ್ ಹಾರಾಟದಲ್ಲಿ ಅವಕಾಶ ನೀಡಿ ಅಭಿನಂದಿಸಲಾಯಿತು. ಕ್ವಿಜ್ ವಿಜೇತರು, ರೇಡಿಯೋ ಕ್ವಿಜ್ ವಿಜೇತರು, ರಾಷ್ಟ್ರ ಮಟ್ಟದ ಕ್ವಿಜ್ ವಿಜೇತರು, ಕ್ರಿಕೆಟ್ ಪಂದ್ಯಾವಳಿ ವಿಜೇತರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು, ಮಾಧ್ಯಮ ತಂಡದವರಿಗೆ ಹಾಗೂ ಸಾರ್ವಜನಿಕರಿಗೆ ಏರ್ ಬಲೂನ್‌ನಲ್ಲಿ ಹಾರಾಟಕ್ಕೆ ಅವಕಾಶ ನಡೆಸುವ ಮೂಲಕ ಮತದಾನ ಜಾಗೃತಿ ನಡೆಸಲಾಯಿತು.
ಜಿಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಜಿಪಂ ಯೋಜನಾ ನಿರ್ದೇಶಕ ರಂಗನಾಥ್, ವಾರ್ತಾಧಿಕಾರಿ ಆರ್.ರಾಜು, ಚುನಾವಣಾ ಐಕಾನ್ ಡಾ. ಶುಭ್ರತಾ, ಜ್ಯೋತಿ, ರಾಜ್ಯಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮದ್ ಪರ್ವೇಜ್, ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

See also  ಜನರಲ್ಲಿ ಮತದಾನದ ಅರಿವು ಮೂಡಿಸಿ
Share This Article