More

    ವಿಕೃತಿ ಕಾಮಿ ಪ್ರಜ್ವಲ್ ದಾರಿ ತಪ್ಪಲು ರೇವಣ್ಣನೇ ಪ್ರಮುಖ ಕಾರಣ: ಎಂ.ಎ. ಗೋಪಾಲಸ್ವಾಮಿ

    ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕೃತಕಾಮಿ ಪ್ರಜ್ವಲ್ ರೇವಣ್ಣ ಅವರು ದಾರಿ ತಪ್ಪಲು ಅವರ ತಂದೆಯೇ ಪ್ರಮುಖ ಕಾರಣ, ಆದರೂ ಈಗ ಅವರ ಕುಟುಂಬದವರು ಇದನ್ನ ಸಮರ್ಥಿಸಿಕೊಳ್ಳುತ್ತಿರುವುದು ನಿಜಕ್ಕೂ ಖಂಡನೀಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು
    ರಾಜ್ಯದಲ್ಲಿ ನಾವು ಉಮೇಶ್ ರೆಡ್ಡಿ ಕೃತ್ಯವನ್ನು ಕೇಳಿದ್ದೆವು. ಆದರೆ, ಇದು ರಾಜ್ಯ ಮತ್ತು ಇಡೀ ಪ್ರಪಂಚವನ್ನು ಬೆಚ್ಚಿ ಬೆಳಿಸುವ ಘಟನೆ ಯಾಗಿದ್ದು, ತಲೆಮರಿಸಿಕೊಂಡಿರುವ ಆರೋಪಿ ಪ್ರಜ್ವಲ್ ರೇವಣ್ಣನ್ನು ತಕ್ಷಣವೇ ಬಂಧಿಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ಪ್ರಜ್ವಲ್ ರೇವಣ್ಣ ಈ ರೀತಿ ದಾರಿ ತಪ್ಪಲು ಅವರ ತಂದೆ ರೇವಣ್ಣ ಅವರೇ ಪ್ರಮುಖ ಕಾರಣ. ಇವರು ಸಂಸದರಾಗಿ ಆಯ್ಕೆಯಾದ ಮೇಲೆ ಸಂಸದರ ಕೆಲಸವನ್ನ ಇವರೇ ಮಾಡುತ್ತಿದ್ದರು. ರಸ್ತೆ ಕಾಮಗಾರಿ, ಸಭೆ ಹಾಗೂ ಇನ್ನಿತರ ಕೆಲಸಗಳನ್ನು ಇವರೇ ಮಾಡುತ್ತಿದ್ದರಿಂದ ಈತ ದಾರಿ ತಪ್ಪಿದ್ದ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ನಿಗಚಹಿಸಬೇಕು ಇಲ್ಲವಾದರೆ ಇಂತಹ ಘಟನೆ ಜಿಲ್ಲೆಯಲ್ಲಿ ಸಂಭವಿಸುತ್ತಿರಲಿಲ್ಲ ಎಂದು ದೂರಿದರು.
    ದೇವೇಗೌಡರು ಮುತ್ಸದ್ದಿ ರಾಜಕಾರಣಿ, ಇಂತಹ ಇಳಿ ವಯಸ್ಸಿನಲ್ಲಿ ಅವರ ಮನಸ್ಸಿಗೆ ಎಷ್ಟು ನೋವಾಗಿರಬಾರದು. ಅವರು ಹೋರಾಟದ ಮೂಲಕ ರಾಜಕಾರಣವನ್ನ ಆರಂಭಿಸಿ ಪ್ರಧಾನಿ ಹುದ್ದೆ ವರಗೂ ಕೂಡ ತಲುಪಿ ಜಿಲ್ಲೆಯ ಕೀರ್ತಿಯನ್ನು ಹಾರಿಸಿದ್ದರು. ಆದರೆ ಮೊಮ್ಮಗ ಇಂತಹ ಕೃತ್ಯ ಎಸಗಿ ಜಿಲ್ಲೆಯ ಮಾನ ಹರಾಜು ಹಾಕಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಐಟಿ ತಂಡ ತನಿಖೆ ನಡೆಯುತ್ತಿದ್ದು ,ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿಸಸ್ಥರಿಗೆ ನಿರ್ಧಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
    ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡುತ್ತಿದ್ದಾರೆ.ಆದರೆ ಅವರ ಹೇಳಿಕೆ ದ್ವಂದ್ವವಾಗಿದೆ. ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ನನ್ನ ಮಗ, ಆತ ಸಣ್ಣಪುಟ್ಟ ತಪ್ಪು ಮಾಡಿರಬಹುದು ಆತನನ್ನು ಕ್ಷಮಿಸಿ ಎಂದರು. ಈಗ ಪ್ರಕರಣ ಬಯಲಿಗೆ ಬಂದ ಮೇಲೆ ಅವರ ಕುಟುಂಬವೇ ಬೇರೆ ನಮ್ಮ ಕುಟುಂಬವೇ ಬೇರೆ ಎಂದು ಹೇಳಿಕೆ ನೀಡುತ್ತಾರೆ. ಜಿಲ್ಲೆಯ ಮತ್ತು ಹೆಣ್ಣು ಮಕ್ಕಳ ಮಾನ- ಹರಾಜು ಹಾಕುವುದು ಸಣ್ಣ ವಿಚಾರವೇ ಪ್ರಶ್ನಿಸಿದರು.
    ಜೆಡಿಎಸ್ ಪಕ್ಷದ ಚಿಹ್ನೆಯಾಗಿರುವ ಹೊರಹೊತ್ತ ಮಹಿಳೆಯ ಚಿಹ್ನೆಯನ್ನ ಹಾಕಿಕೊಂಡಿದ್ದಾರೆ.ಇಂತಹ ಘಟನೆಯಿಂದ ಇಡೀ ಮಹಿಳೆಯರನ್ನೇ ಅಪಮಾನಿಸಿ, ಅವಮಾನಿಸಿದ್ದಾರೆ ಆದ್ದರಿಂದ ಚುನಾವಣಾ ಆಯೋಗ ಮಹಿಳೆಯ ಚಿಹ್ನೆಯನ್ನ ರದ್ದುಪಡಿಸಬೇಕು ಎಂದು ಈ ಮೂಲಕ ಒತ್ತಾಯಿಸಲಾಗುವುದು ಎಂದು ಹೇಳಿದರು.
    ಎಸ್‌ಐಟಿ ತಂಡ ರಚನೆಯಾಗಿದ್ದು, ಸಂತ್ರಸ್ತ ಮಹಿಳೆಯರು ದೂರು ನೀಡಲು ಮುಂದೆ ಬರಬೇಕು ಮತ್ತು ಎಲ್ಲಾ ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು. ಜಿಲ್ಲೆಯ ಹೆಣ್ಣು ಮಕ್ಕಳ ಬಗ್ಗೆ ಅನುಮಾನಿಸುವುದು ಸರಿಯಲ್ಲ. ಈ ಪ್ರಕರಣದಲ್ಲಿ ಅಧಿಕಾರಿಗಳು ಹಾಗೂ ಸಾಮಾನ್ಯ ಮಹಿಳೆಯರಿದ್ದು, ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು. ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವುದನ್ನ ತಕ್ಷಣವೇ ಮತ್ತು ಅವರ ಮೇಲೆ ಕ್ರಮಕೈಗೊಳ್ಳ ಬೇಕು ಎಂದು ಆಗ್ರಹಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts