More

    ಬೆನ್ ಸ್ಟೋಕ್ಸ್ ಈಗ ವಿಶ್ವ ನಂ. 1 ಆಲ್ರೌಂಡರ್

    ದುಬೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಬೆನ್ ಸ್ಟೋಕ್ಸ್ ಈಗ ವಿಶ್ವ ನಂ. 1 ಆಲ್ರೌಂಡರ್ ಎನಿಸಿದ್ದಾರೆ. ಐಸಿಸಿ ಟೆಸ್ಟ್ ಆಲ್ರೌಂಡರ್ ರ‌್ಯಾಂಕಿಂಗ್‌ನಲ್ಲಿ ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಅವರನ್ನು ಹಿಂದಿಕ್ಕಿ ಸ್ಟೋಕ್ಸ್ ಇದೇ ಮೊದಲ ಬಾರಿಗೆ ನಂ. 1 ಪಟ್ಟಕ್ಕೇರಿದ್ದಾರೆ. ಜತೆಗೆ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 3ನೇ ಸ್ಥಾನ ಸಂಪಾದಿಸಿದ್ದಾರೆ.

    ಮ್ಯಾಂಚೆಸ್ಟರ್ ಟೆಸ್ಟ್‌ಗೆ ಮುನ್ನ ಹೋಲ್ಡರ್‌ಗಿಂತ 54 ಅಂಕ ಹಿಂದಿದ್ದ ಸ್ಟೋಕ್ಸ್, ಈಗ 38 ಅಂಕಗಳ ಮುನ್ನಡೆ ಸಾಧಿಸಿದ್ದಾರೆ. 2ನೇ ಟೆಸ್ಟ್‌ನಲ್ಲಿ ಅವರು 178 ಮತ್ತು ಅಜೇಯ 78 ರನ್ ಜತೆಗೆ 3 ವಿಕೆಟ್ ಕಬಳಿಸಿ ಸರ್ವಾಂಗೀಣ ನಿರ್ವಹಣೆ ತೋರುವ ಮೂಲಕ ಇಂಗ್ಲೆಂಡ್‌ಗೆ ಸರಣಿಯಲ್ಲಿ 1-1 ಸಮಬಲ ಸಾಧಿಸಲು ನೆರವಾಗಿದ್ದರು. ಹೋಲ್ಡರ್ 18 ತಿಂಗಳು ನಂ. 1 ಪಟ್ಟ ಕಾಯ್ದುಕೊಂಡ ಬಳಿಕ ಈಗ 2ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಭಾರತದ ರವೀಂದ್ರ ಜಡೇಜಾ 3ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 4 ಮತ್ತು ಭಾರತದ ಆರ್. ಅಶ್ವಿನ್ 5ನೇ ಸ್ಥಾನದಲ್ಲಿದ್ದಾರೆ.

    ಇದನ್ನೂ ಓದಿ: ಯುಎಇಯಲ್ಲಿ ಐಪಿಎಲ್​ ನಡೆದರೆ ಆರ್​ಸಿಬಿಗೆ ಟ್ರೋಫಿ ಗೆಲ್ಲುವ ಅದೃಷ್ಟ ಇದೆಯಂತೆ..!

    ಫ್ಲಿಂಟಾಫ್​ , ಕಾಲಿಸ್ ಬಳಿಕ ಅತ್ಯುತ್ತಮ
    ಆಂಡ್ರ್ಯೋ ಫ್ಲಿಂಟಾಫ್​ ಬಳಿಕ ವಿಶ್ವ ನಂ. 1 ಪಟ್ಟವೇರಿದ ಇಂಗ್ಲೆಂಡ್‌ನ ಮೊದಲ ಆಲ್ರೌಂಡರ್ ಎಂಬ ಹೆಗ್ಗಳಿಕೆ ಸ್ಟೋಕ್ಸ್ ಅವರದಾಗಿದೆ. ಫ್ಲಿಂಟ್ಾ 2006ರ ಮೇನಲ್ಲಿ ಕೊನೆಯದಾಗಿ ಈ ಸ್ಥಾನ ಅಲಂಕರಿಸಿದ್ದರು. ಸ್ಟೋಕ್ಸ್ ಈಗ ಒಟ್ಟು 497 ಅಂಕ ಕಲೆಹಾಕಿದ್ದು, ಜಾಕ್ಸ್ ಕಾಲಿಸ್ 2008ರ ಮೇನಲ್ಲಿ 517 ಅಂಕ ಕಲೆಹಾಕಿದ್ದ ಬಳಿಕ ಗರಿಷ್ಠ ಅಂಕ ಗಳಿಸಿದ ಆಲ್ರೌಂಡರ್ ಎನಿಸಿದ್ದಾರೆ.

    ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಮತ್ತು ಭಾರತದ ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನದಲ್ಲಿದ್ದರೆ, ಸ್ಟೋಕ್ಸ್ ಆಸ್ಟ್ರೇಲಿಯಾದ ಬ್ಯಾಟಿಂಗ್ ಸೆನ್ಸೇಶನ್ ಮಾರ್ನಸ್ ಲಬುಶೇನ್ ಜತೆಗೆ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಪಂದ್ಯಕ್ಕೆ ಮುನ್ನ ಸ್ಟೋಕ್ಸ್ 10ನೇ ಸ್ಥಾನದಲ್ಲಿದ್ದರು. ಭಾರತದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ತಲಾ 1 ಸ್ಥಾನ ಕುಸಿದು ಕ್ರಮವಾಗಿ 8, 10ನೇ ಸ್ಥಾನದಲ್ಲಿದ್ದಾರೆ.

    ಮ್ಯಾಂಚೆಸ್ಟರ್ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ತಲಾ 3 ವಿಕೆಟ್ ಕಬಳಿಸಿದ ಇಂಗ್ಲೆಂಡ್‌ನ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಅಗ್ರ 10ರೊಳಗೆ ಮರಳಿದ್ದು, 10ನೇ ಸ್ಥಾನದಲ್ಲಿದ್ದಾರೆ. ಹೋಲ್ಡರ್ 3ನೇ ಸ್ಥಾನಕ್ಕೆ ಕುಸಿದಿದ್ದರೆ, ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್ 2ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತದ ಜಸ್‌ಪ್ರೀತ್ ಬುಮ್ರಾ 7ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

    ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಇಂಗ್ಲೆಂಡ್ ಪ್ರಗತಿ

    ಗೆಲುವಿನಿಂದ 40 ಅಂಕ ಕಲೆಹಾಕಿದ ಇಂಗ್ಲೆಂಡ್ ಈಗ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಇಂಗ್ಲೆಂಡ್ 186 ಅಂಕ ಕಲೆಹಾಕಿದ್ದರೆ, ನ್ಯೂಜಿಲೆಂಡ್ (180) 4ನೇ ಸ್ಥಾನಕ್ಕಿಳಿದಿದೆ. ಭಾರತ (360) ಮತ್ತು ಆಸ್ಟ್ರೇಲಿಯಾ (296) ಮೊದಲೆರಡು ಸ್ಥಾನದಲ್ಲಿದೆ.

    ದೀಪಾವಳಿವರೆಗೆ ನಡೆಯುತ್ತಾ ಐಪಿಎಲ್ ಹಬ್ಬ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts