More

    ‘ಪ್ರೀತಂ ರಾಜಕೀಯವಾಗಿ ಪ್ರಬುದ್ಧನಲ್ಲ, ಇನ್ನೂ ಚಿಕ್ಕ ಹುಡುಗ’: ಸೋಮಣ್ಣ

    ದೆಹಲಿ: ಮಾಜಿ ಶಾಸಕ ಪ್ರೀತಂ ಗೌಡ ಚಿಕ್ಕ ಹುಡುಗ, ರಾಜಕಾರಣದ ಬಗ್ಗೆ ಅಷ್ಟೆಲ್ಲ ಜ್ಞಾನ ಇಲ್ಲ, ಆವೇಶದಲ್ಲಿ ಮಾತಾಡುತ್ತಾನೆ. ಮಾತಾಡುವ ಭಾಷೆ ಮತ್ತು ಹೇಳಿಕೆಗಳ ಮೇಲೆ ಎಚ್ಚರ ಸಾಧಿಸಬೇಕಿದೆ ಎಂದು ಮಾಜಿ ಸಚಿವ ವಿ ಸೋಮಣ್ಣ ರಾಜಕೀಯ ಸಲಹೆ ನೀಡಿದರು.

    ಇದನ್ನೂ ಓದಿ:‘ವಿಶ್ವಂಭರ’ಕ್ಕೆ ಹೀರೋಯಿನ್​ ಫಿಕ್ಸ್​: 18 ವರ್ಷದ ಬಳಿಕ ಚಿರು ಜೊತೆ ಸ್ಟೆಪ್ಸ್​ ಹಾಕ್ತಾರೆ ದಕ್ಷಿಣದ ಖ್ಯಾತ ನಟಿ?!

    ಇಂದು ಬೆಳಗ್ಗೆ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದದ ಅವರು, ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಅವರಿಗೆ ಕೆಲ ಹಿತವಚನಗಳನ್ನು ಹೇಳಿದರು.

    ಕನ್ನಡಿಗರಿಗೆಲ್ಲ ಗೊತ್ತಿರುವ ಹಾಗೆ, ಪ್ರೀತಂ ಗೌಡ ಅವರು ಲೋಕಸಭಾ ಚುನಾವಣೆಗಾಗಿ ಜೆಡಿಎಸ್-ಬಿಜೆಪಿ ಹೊಂದಾಣಿಕೆಯನ್ನು ನಖಶಿಖಾಂತ ದ್ವೇಷಿಸುತ್ತಿದ್ದಾರೆ. ಹಾಸನದಿಂದ ಪ್ರಜ್ವಲ್ ಗೌಡ ಮತ್ತು ಮಂಡ್ಯದಿಂದ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆಗೆ ಬಿಜೆಪಿ ವರಿಷ್ಠರು ಅವಕಾಶ ನೀಡಲ್ಲ ಅಂತಲೂ ಅವರು ಹೇಳಿದ್ದಾರೆ.

    ಮಾಜಿ ಶಾಸಕ ಪ್ರೀತಂ ಧೋರಣೆಯನ್ನು ಸೋಮಣ್ಣ ಅವರ ಗಮನಕ್ಕೆ ತಂದಾಗ, ಅವನು ತಾನಾಡುವ ಭಾಷೆ ಮತ್ತು ಹೇಳಿಕೆಗಳ ಮೇಲೆ ಎಚ್ಚರ ಸಾಧಿಸಬೇಕಿದೆ, ರಾಜಕಾರಣದಲ್ಲಿ ಬೆಳೆಯಬೇಕಾದರೆ ಅದಕ್ಕೆ ಪೂರಕವಾದ ಭಾಷೆಯನ್ನು ಅಳವಡಿಸಿಕೊಳ್ಳಬೇಕು, ಮುಂಬರುವ ದಿನಗಳಲ್ಲಿ ಅದನ್ನು ಪ್ರೀತಂ ಗೌಡ ಅರ್ಥಮಾಡಿಕೊಳ್ಳುತ್ತಾನೆ ಎಂಬ ನಂಬಿಕೆ ತನಗಿದೆ ಎಂದು ಸೋಮಣ್ಣ ಹೇಳಿದರು.

    ಮಾಜಿ ಶಾಸಕ ಪ್ರೀತಂ ಗೌಡ ಏನ್​ ಹೇಳಿದ್ರು: ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗಿಯಾಗಿ ಮಾತನಾಡಿದ ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಅವರು, ಜೆಡಿಎಸ್‌ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಕೊಟ್ಟಿದೆ ಅಷ್ಟೇ, ಆದರೆ ಹಾಸನ ಮತ್ತು ಮಂಡ್ಯ ಕ್ಷೇತ್ರಗಳ ಕುರಿತು ಟಿಕೆಟ್ ಹಂಚಿಕೆಯಾಗಿಲ್ಲ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯಾದ್ರೂ ಆಗಬಹುದು. ಬಿಜೆಪಿ ಅಭ್ಯರ್ಥಿಗಳೇ ಗೆಲ್ತಾರೆ ಅಂತ ಹೇಳಿದ್ರು.

    ಹಾಗೊಂದು ವೇಳೆ ಕ್ಷೇತ್ರವನ್ನ ಜೆಡಿಎಸ್‌ಗೆ ಬಿಟ್ಟುಕೊಡುವ ಸಂದರ್ಭ ಬಂದ್ರೆ ಅಭ್ಯರ್ಥಿ ಯಾರಾಗಬೇಕು ಎಂಬುದನ್ನ ಬಿಜೆಪಿ ಕಾರ್ಯಕರ್ತರನ್ನೇ ಕೇಳಿ ಕೇಳಿ ನಿರ್ಧಾರ ಮಾಡ್ತೀವಿ. ಹೊಂದಾಣಿಕೆಯಾಗಿ ಬಿಟ್ಟಿದೆ ನಾವು ಏನ್ ಮಾಡೋದು ಎಂಬ ಬಗೆಗೆ ಕಾರ್ಯಕರ್ತರು ಚಿಂತೆಗೊಳಗಾಗಬಾರದು ಅಂತ ಪ್ರೀತಂ ಗೌಡ ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts