More

    ಒಲಂಪಿಕ್ಸ್​ಗೆ ಹೊರಟಿತು ಆಟಗಾರರ ತಂಡ; ಇಂದು ದೆಹಲಿಯಲ್ಲಿ ಬೀಳ್ಕೊಡುಗೆ

    ನವದೆಹಲಿ : ಒಲಂಪಿಕ್ಸ್​ಗೆ ಒಂದು ವಾರ ಉಳಿದಿರುವಂತೆ, ಇಂದು ಮೊದಲ ಕಂತಿನ ಭಾರತೀಯ ಒಲಂಪಿಕ್​​ ಸ್ಪರ್ಧಿಗಳು ಜಪಾನಿನ ಟೋಕಿಯೋಗಾಗಿ ತೆರಳಲಿದ್ದಾರೆ. ಇವರಿಗೆ ಔಪಚಾರಿಕವಾದ ಬೀಳ್ಕೊಡುಗೆ​ ಸಮಾರಂಭವೊಂದು ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ನಡೆಯಲಿದೆ.

    ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕುರ್​ ಹಾಗೂ ಕ್ರೀಡಾ ರಾಜ್ಯ ಸಚಿವ ನಿಶಿತ್​ ಪ್ರಮಾಣಿಕ್​ ಅವರು, 54 ಅಥ್ಲೀಟ್​ಗಳೊಂದಿಗೆ ಇಂಡಿಯನ್​ ಒಲಂಪಿಕ್​ ಅಸೋಸಿಯೇಷನ್(ಐಒಎ)ನ ಪ್ರತಿನಿಧಿಗಳು ಮತ್ತು ಸಹಾಯಕ ಸಿಬ್ಬಂದಿಯನ್ನೊಳಗೊಂಡ 88 ಜನರ ತಂಡಕ್ಕೆ, ಶುಭ ಕೋರಿ ಬೀಳ್ಕೊಡಲಿದ್ದಾರೆ. ಐಒಎ ಮತ್ತು ಸ್ಪೋರ್ಟ್ಸ್​ ಅಥಾರಿಟಿ ಆಫ್​ ಇಂಡಿಯಾದ ಪದಾಧಿಕಾರಿಗಳು ಉಪಸ್ಥಿತರಿರುವರು.

    ಇದನ್ನೂ ಓದಿ: ಟೋಕಿಯೋ ಒಲಂಪಿಕ್ಸ್​ ಸಮಾರಂಭಗಳಿಗೆ ಫ್ಲ್ಯಾಗ್​ಬೇರರ್ಸ್ ಆಯ್ಕೆ

    ಆರ್ಚರಿ, ಹಾಕಿ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಜಿಮ್ನಾಸ್ಟಿಕ್ಸ್, ವೈಟ್ ಲಿಫ್ಟಿಂಗ್​ ಸೇರಿದಂತೆ ಎಂಟು ಕ್ರೀಡಾ ಕ್ಷೇತ್ರಗಳ ಆಟಗಾರರು ಟೋಕಿಯೋಗೆ ಹೊರಟಿರುವ ತಂಡದಲ್ಲಿದ್ದಾರೆ. ಈ ಬಾರಿ 127 ಭಾರತೀಯ ಅಥ್ಲೀಟ್​ಗಳು ಒಲಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್)

    ಒಲಂಪಿಕ್ಸ್​​​ಗೆ ಸಿದ್ಧವಾಯ್ತು ಹಾಕಿ ಮಹಿಳಾ ತಂಡ; ಕ್ಯಾಪ್ಟನ್​ ಆಗಿ ರಾಣಿ ರಾಂಪಾಲ್

    ಮತ್ತೆ ಏರಿದ ಪೆಟ್ರೋಲ್​ ಬೆಲೆ! ಡೀಸೆಲ್ ಬೆಲೆ ತಟಸ್ಥ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts