More

    ಒಲಂಪಿಕ್ಸ್​​​ಗೆ ಸಿದ್ಧವಾಯ್ತು ಹಾಕಿ ಮಹಿಳಾ ತಂಡ; ಕ್ಯಾಪ್ಟನ್​ ಆಗಿ ರಾಣಿ ರಾಂಪಾಲ್

    ನವದೆಹಲಿ : ಜುಲೈ 23 ರಿಂದ ಆಗಸ್ಟ್​ 8 ರವರೆಗೆ ಜಪಾನ್​ ದೇಶದ ರಾಜಧಾನಿ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್​ನಲ್ಲಿ ಪಾಲ್ಗೊಳ್ಳಲು ಭಾರತದ ಮಹಿಳಾ ಹಾಕಿ ತಂಡ ಸಿದ್ಧವಾಗಿದೆ. ಎಂಟು ಜನ ಹೊಸ ಆಟಗಾರರು ಮತ್ತು ಎಂಟು ಜನ ಅನುಭವಿ ಆಟಗಾರರನ್ನು ಒಳಗೊಂಡ 16 ಜನರ ಸಮತೋಲಿತ ತಂಡವನ್ನು ರಚಿಸಲಾಗಿದ್ದು, ಸ್ಟಾರ್​ ಸ್ಟ್ರೈಕರ್​ ರಾಣಿ ರಾಂಪಾಲ್​ ಅವರು ನಾಯಕತ್ವ ವಹಿಸಲಿದ್ದಾರೆ.

    ಎಂಟು ಮಂದಿ ಅನುಭವಿ ಆಟಗಾರರು ಈ ಮುಂಚೆ 2016ರ ರಿಯೋ ಒಲಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರೆಂದರೆ ಕ್ಯಾಪ್ಟನ್​ ಆಗಿರುವ ರಾಣಿ, ಗೋಲ್‌ಕೀಪರ್ ಸವಿತಾ, ದೀಪ್ ಗ್ರೇಸ್ ಎಕ್ಕಾ, ಸುಶೀಲಾ ಚಾನು ಪುಖ್ರಾಂಬಮ್, ಮೋನಿಕಾ, ನಿಕ್ಕಿ ಪ್ರಧಾನ್, ನವಜೋತ್ ಕೌರ್ ಮತ್ತು ವಂದನಾ ಕಟಾರಿಯ.

    ಇದನ್ನೂ ಓದಿ: ಮಕ್ಕಳ ಮೇಲೆ ಸೀರಮ್​ ಇನ್ಸ್​ಟಿಟ್ಯೂಟ್​ನ ಕರೊನಾ ಲಸಿಕೆಯ ಪ್ರಯೋಗ

    ಒಲಂಪಿಕ್ಸ್​ನಲ್ಲಿ ಮೊದಲ ಬಾರಿ ಭಾಗವಹಿಸಲಿರುವ ಯುವ ಆಟಗಾರರೆಂದರೆ ಗುರ್​ಜಿತ್​ ಕೌರ್, ಸಲೀಮಾ ಟೇಟೆ, ಉದಿತಾ, ನಿಶಾ, ನೇಹ, ನವ್​ನೀತ್​ ಕೌರ್​, ಶರ್ಮಿಳಾ ದೇವಿ ಮತ್ತು ಲಾಲ್​ರೆಮ್ಸಿಯಾಮಿ. ಇವರಲ್ಲಿ ಸಲೀಮಾ ಟೇಟೆ, 2018ರ ಯೂತ್​ ಒಲಂಪಿಕ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ತಂಡದ ನಾಯಕತ್ವ ವಹಿಸಿದ್ದರು ಎನ್ನಲಾಗಿದೆ.

    ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯಾಗಿದ್ದರೂ, ಭಾರತದ ಮಹಿಳಾ ಹಾಕಿ ತಂಡ ಸ್ಪರ್ಧಿಸುತ್ತಿರುವ ಮೂರನೇ ಒಲಂಪಿಕ್ಸ್​ ಪಂದ್ಯಾವಳಿ ಇದಾಗಿದೆ. ಕಳೆದ 2016 ರ ಒಲಂಪಿಕ್ಸ್​ ಬಿಟ್ಟರೆ, 1980 ರ ಒಲಂಪಿಕ್ಸ್​ನಲ್ಲೇ ಭಾರತ ತಂಡ ಪಾಲ್ಗೊಂಡಿದ್ದುದು.

    ಎರಡನೇ ಅಲೆಯಿಂದ ಆರ್ಥಿಕ ವ್ಯವಸ್ಥೆಗೆ 2 ಲಕ್ಷ ಕೋಟಿ ರೂ. ನಷ್ಟ : ಆರ್​ಬಿಐ

    VIDEO | ಕ್ರಿಕೆಟಿಗ ಯಜ್ವೇಂದ್ರ ಚಹಲ್​ ಡ್ಯಾನ್ಸ್​ ಸ್ಟೆಪ್ಸ್​ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts