More

    ಸೆಲ್ಕೊ ಸೌರಶಕ್ತಿ ಕಮಾಲ್​: ಕುಂಬಾರಿಕೆ, ನೀರಿನ ಘಟಕ, ಹಾಲು ಕರೆಯುವ ಯಂತ್ರಕ್ಕೆ ಬಳಕೆ

    ನೆಕ್ಟ್
    
    

    ರಾಮನಗರ: ಸೌರವಿದ್ಯುತ್​ ಬಳಕೆ ಮೂಲಕ ಸಮಾಜ ವಿವಿಧ ಸ್ಥರಗಳ ಬದುಕನ್ನು ಉತ್ತಮಗೊಳಿಸುವಲ್ಲಿ ಯಶಸ್ವಿಯಾಗಿರುವ ಸೆಲ್ಕೊ ಸೋಲಾರ್​ ಸಂಸ್ಥೆ ಜಿಲ್ಲೆಯಲ್ಲಿ ಹಲವಾರು ವಿಭಾಗಗಳಲ್ಲಿ ವಿನೂತನ ಪ್ರಯೋಗಗಳನ್ನು ಮಾಡುವ ಮೂಲಕ ಗಮನ ಸೆಳೆದಿದೆ.

    ಶುದ್ಧ ನೀರಿನ ಟಕ, ಕುಂಬಾರಿಕೆ, ಕಮ್ಮಾರಿಕೆ, ಹೊಲಿಗೆ ಯಂತ್ರಗಳು, ಹೈನುಗಾರಿಕೆಗಾಗಿ ಹಾಲು ಕರೆಯುವ ಯಂತ್ರಗಳು, ಸ್ಮಾರ್ಟ್​ ಕ್ಲಾಸ್​, ಹೀಗೆ ವಿವಿಧ ವಲಯಗಳಲ್ಲಿ ಸೌರಶಕ್ತಿ ಬಳಕೆ ಮಾಡಿಕೊಳ್ಳುತ್ತಿರುವುದು ವಿಶೇಷ.

    ಹೀಗೆ ವಿವಿಧ ಕ್ಷೇತ್ರಗಳ ಸಾಧನೆಯನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಸೆಲ್ಕೊ ಫೌಂಡೇಷನ್​ ಮಾಧ್ಯಮ ಪ್ರತಿನಿಧಿಗಳಿಗಾಗಿ ಎರಡು ದಿನಗಳ ಕಾರ್ಯಾಗಾರ ಹಮ್ಮಿಕೊಂಡಿದ್ದು, ಮಂಗಳವಾರ ಕ್ಷೇತ್ರ ದರ್ಶನ ಆಯೋಜಿಸಿತ್ತು.

    ಇದರ ಅಂಗವಾಗಿ ಮೊದಲು ರಾಮನಗರ ತಾಲೂಕಿನ ಚೌಡೇಶ್ವರಿ ಪುರದಲ್ಲಿ ವಿದ್ಯುತ್​ರಹಿತ ಸೌರಶಕ್ತಿ ಚಾಲಿತ ಶುದ್ಧ ನೀರಿನ ಘಟಕಕ್ಕೆ ವಿವಿಧ ಜಿಲ್ಲೆಗಳ ಪತ್ರಕರ್ತರು ಭೇಟಿ ನೀಡಿದ್ದರು. ಗ್ರಾಮದಲ್ಲಿ ಸುಮಾರು 100 ಕುಟುಂಬಗಳು ವಾಸವಿದ್ದು, ಇಲ್ಲಿನ ಜನರಿಗೆ ಅಂದಾಜು 500 ಲೀಟರ್​ ನೀರು ಕುಡಿಯಲು ಬೇಕು. ಈ ಸೌಲಭ್ಯವನ್ನು ಸೌರಶಕ್ತಿ ಚಾಲಿತ ಆರ್​ಒ ಪ್ಲಾಂಟ್​ ಒದಗಿಸುತ್ತಿದೆ. 8.5 ಲಕ್ಷ ರೂ. ವೆಚ್ಚ ಮಾಡಿ ಸೆಲ್ಕೋ ಸಂಸ್ಥೆ ನಿರ್ಮಾಣ ಮಾಡಿದೆ. 5 ವರ್ಷ ಇದರ ನಿರ್ವಹಣೆ ಹೊಣೆಯನ್ನು ಸಂಸ್ಥೆ ವಹಿಸಿಕೊಂಡಿದೆ.

    ಚನ್ನಪಟ್ಟಣದಲ್ಲಿನ ಬೇವೂರಿನಲ್ಲಿನ ಸೌರ ಆಧಾರಿತ ಮಡಕೆ ತಯಾರಿಕೆಗೆ ಟಕಕ್ಕೆ ಭೇಟಿ ನೀಡಲಾಯಿತು. ಮಡಕೆ, ಕುಡಿಕೆ ಸಿದ್ಧಪಡಿಸುವ ಮುನ್ನಾ ಕೆರೆಯಿಂದ ತಂದ ಮಣ್ಣನ್ನು ಹದ ಮಾಡಬೇಕು. ನಂತರ ಚಕ್ರ ತಿರುಗಿಸಿ ಮಣ್ಣಿನಿಂದ ಮಡಕೆ, ಕುಡಿಕೆ ತಯಾರಿಸಲಾಗುತ್ತದೆ. ಸೆಲ್ಕೊ ಕಂಡು ಹಿಡಿದಿರುವ ಸೌರಚಾಲಿತ ಮಣ್ಣು ಮಿಶ್ರಣ ಮಾಡುವ ಯಂತ್ರ, ತಿರುಗುವ ಚಕ್ರ ಕುಂಬಾರರ ಶ್ರಮ ಕಡಿಮೆ ಮಾಡಿದೆ. ತಿರುಗುವ ಚಕ್ರದ ಯಂತ್ರಕ್ಕೆ 67 ಸಾವಿರ ರೂ. ವೆಚ್ಚ ತಗುಲಲಿದೆ. ಸೆಲ್ಕೊ ಫೌಂಡೇಷನ್​ 20 ಸಾವಿರ ರೂ. ಸಬ್ಸಿಡಿ ನೀಡಿದೆ. ಉಳಿಕೆ ಹಣವನ್ನು ಬ್ಯಾಂಕ್​ನಿಂದ ಸಾಲ ರೂಪದಲ್ಲಿ ಹೊಂದಿಸಿ ಯಂತ್ರ ಖರೀದಿ ಮಾಡಿದ್ದೇನೆ ಎಂದು ಗ್ರಾಮದ ಕುಂಬಾರ ನಟರಾಜು ತಿಳಿಸಿದರು.

    ಸೌರ ಸ್ಮಾರ್ಟ್​ಕ್ಲಾಸ್​: ಚಕ್ಕರೆ ಗ್ರಾಮದಲ್ಲಿರುವ ನವೋದಯ/ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ಸೌರಶಕ್ತಿ ಮೂಲಕವೇ ಸ್ಮಾರ್ಟ್​ ಕ್ಲಾಸ್​ ನಡೆಸಲಾಗುತ್ತಿದೆ. ಸೆಲ್ಕೋ ಫೌಂಡೇಷನ್​ ಮತ್ತು ವಸತಿ ಶಾಲೆ ಎರಡೂ ಜತೆಗೂಡಿ ಶಾಲೆಯಲ್ಲಿ ಸ್ಮಾರ್ಟ್​ಕ್ಲಾಸ್​ ಸ್ಥಾಪನೆ ಮಾಡಿದ್ದಾರೆ. ಸ್ಮಾರ್ಟ್​ಕ್ಲಾಸ್​ ಸ್ಥಾಪನೆಗೆ 1.75 ಲ ರೂ. ವೆಚ್ಚ ತಗುಲಿದ್ದು, ಸೆಲ್ಕೊ ಫೌಂಡೇಷನ್​ ಮತ್ತು ವಸತಿ ಶಾಲೆ ಅರ್ಧ ವೆಚ್ಚ ಭರಿಸಿವೆ.

    ಶಾಲೆಯ ಒಂದು ತರಗತಿಯಲ್ಲಿ ಎಲ್​ಇಡಿ ಟಿವಿ ಅಳವಡಿಸಲಾಗಿದೆ. ನೆಕ್ಟ್  ಎಜುಕೇಷನ್​ ಯೋಜನೆ ಮೂಲಕ ರಾಜ್ಯ (1ರಿಂದ 10ನೇ ತರಗತಿ) ಮತ್ತು ಸಿಬಿಎಸ್​ಇ (6ರಿಂದ 10ನೇ ತರಗತಿ) ಪಠ್ಯವನ್ನು ತಂತ್ರಾನಕ್ಕೆ ಅಳವಡಿಸಲಾಗಿದೆ. ಇದು ಟಿವಿಯಲ್ಲಿ ಪ್ರಸಾರವಾಗಲಿದ್ದು, ಮಕ್ಕಳಿಗೆ ತರಗತಿವಾರು ಪಾಠ ಪ್ರವಚನ ನಡೆಸಿದಾಗ ಟಿವಿ ಪಠ್ಯವನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಮಕ್ಕಳ ಕಲಿಕಾ ಪ್ರಕ್ರಿಯೆ ಚುರುಕುಗೊಳಿಸಿದೆ ಎಂದು ಶಾಲೆಯ ಪ್ರಾಂಶುಪಾಲ ಹನುಮಂತಯ್ಯ ತಿಳಿಸಿದ್ದಾರೆ.

    ಎಲ್ಲೆಲ್ಲಿ ಸೌಲಭ್ಯ?: ಇದೇ ವೇಳೆ, ಎಚ್​. ಬ್ಯಾಡರಹಳ್ಳಿಯ ದೇವರಾಜಾರ್ಚಾ ಅವರಿಗೆ ಸೆಲ್ಕೋ ಸಂಸ್ಥೆಯಿಂದ ಒದಗಿಸಿರುವ ಸೌರಚಾಲಿತ ಕುಲುಮೆ ಟಕ, ಸುಳ್ಳೇರಿ ಗ್ರಾಮದ ಮಹಿಳೆಗೆ ನೀಡಲಾಗಿರುವ ಸೌರಚಾಲಿತ ಹೊಲಿಗೆ ಯಂತ್ರ, ಸೋಗಲಪಾಳ್ಯದ ಭಾಗ್ಯಮ್ಮ ಬೋರೇಗೌಡ ಅವರಿಗೆ ಸಂಸ್ಥೆಯಿಂದ ಒದಗಿಸಿರುವ ಸೌರಚಾಲಿತ ಹಾಲು ಕರೆಯುವ ಯಂತ್ರ, ಕನಕಪುರ ತಾಲೂಕಿನ ಕ್ವಾಟಳ್ಳಿಯ ಅಣ್ಣಯ್ಯಾಚಾರ್​ ಅವರಿಗೆ ಒದಗಿಸಿರುವ ಸೌರಚಾಲಿತ ಕಮ್ಮಾರಿಕೆಯ ಕುಲುಮೆ ಯಂತ್ರ, ಅಚ್ಚಲು ಗ್ರಾಮದ ರೇಣುಕಮ್ಮ ಅವರಿಗೆ ಸೆಲ್ಕೋ ಸಂಸ್ಥೆಯಿಂದ ಒದಗಿಸಿರುವ ಸೌರಚಾಲಿತ ನೆರಳಚ್ಚು (ಜೆರಾಕ್ಸ್​) ಯಂತ್ರದ ಸೌಲಭ್ಯಗಳನ್ನು ಪರಿಚಯಿಸಲಾಯಿತು.

    ಸೆಲ್ಕೊ ಸಂಸ್ಥೆಯ ಎಜಿಎಂ ಕೆ.ಕರಿಸ್ವಾಮಿ, ಮೈಸೂರು ವಿಭಾಗದ ವ್ಯವಸ್ಥಾಪಕ ಸುಕುಮಾರ್​, ರಾಮನಗರ ಶಾಖೆಯ ವ್ಯವಸ್ಥಾಪಕ ಶಂಕರ್​ ಇತರರಿದ್ದರು.

    ಸ್ಮಾರ್ಟ್​ ಕ್ಲಾಸ್​ನಿಂದಾಗಿ ನಮ್ಮ ಕಲಿಕಾ ಚಿತ್ರಣವೇ ಬೇರೆ ಆಗಿದೆ. ಪಾಠಗಳನ್ನು ಕೇಳುವ ಜತೆಗೆ ಸ್ಮಾರ್ಟ್​ಕ್ಲಾಸ್​ ಮೂಲಕ ದೃಶ್ಯಗಳನ್ನು ನೋಡುವುದರಿಂದ ಅನುಕೂಲವಾಗಿದೆ.
    | ಎಂ.ಎಸ್​.ಇಂಪನಾ ವಿದ್ಯಾರ್ಥಿನಿ

    ಕುಂಬಾರಿಕೆ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಸೌರ ಚಾಲಿತ ಯಂತ್ರಗಳ ಸಹಾಯದಿಂದ ಕುಂಬಾರಿಕೆ ವೃತ್ತಿ ಸುಲಭಗೊಂಡಿದೆ. ಸಮಯ ಉಳಿತಾಯ, ಉತ್ಪಾದನೆಯೂ ಹೆಚ್ಚಳವಾಗಿದೆ. ನಮ್ಮ ಗ್ರಾಮ ಕುಂಬಾರಿಕೆಗೆ ಪ್ರಸಿದ್ಧಿ. ನಾವು ಟೀ, ಕಾಫಿ ಕುಡಿಯುವ ಮತ್ತು ದೇವಸ್ಥಾನಗಳಲ್ಲಿ ತಡೆ ಹೊಡೆಯುವ (ದೃಷ್ಟಿ ತೆಗೆಯುವ) ಕುಡಿಕೆಗಳನ್ನು ತಯಾರಿಸುತ್ತಿದ್ದೇವೆ.
    | ತಿಮ್ಮಪ್ಪ ರಾಜು ಕುಂಬಾರ, ಕುಡಿಕೆ ಬೇವೂರು

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts