More

    ಮುಖ್ಯಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹ

    ಲಿಂಗಸುಗೂರು: ಶೀಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಂಗಪ್ಪ ಟಕ್ಕಳಕಿ ಅವರನ್ನು ಸೇವೆಯಿಂದ ಅಮಾನತು ಮಾಡಲು ಒತ್ತಾಯಿಸಿ ಕರ್ನಾಟಕ ಮಜ್ದೂರ್ ಸಂಘದ ನೇತೃತ್ವದಲ್ಲಿ ಪಟ್ಟಣದ ಬಿಇಒ ಕಚೇರಿ ವ್ಯವಸ್ಥಾಪಕ ಪ್ರಾಣೇಶಾಚಾರ್ಯಗೆ ಗುರುವಾರ ಮನವಿ ಸಲ್ಲಿಸಲಾಯಿತು.

    ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ

    ಶಾಲೆಯ ಮುಖ್ಯಶಿಕ್ಷಕ ಮುಖ್ಯ ಅಡುಗೆ ತಯಾರಿಕರಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ. ಜನಸಾಮಾನ್ಯರು ಶಾಲೆಗೆ ಹೋಗಲು ಭಯಭೀತರಾಗಿದ್ದಾರೆ. ಈ ಕುರಿತು ಮುಖ್ಯಶಿಕ್ಷಕ ವಿರುದ್ಧ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಿಆರ್‌ಪಿ, ಬಿಆರ್‌ಸಿ ಮತ್ತು ಇಸಿಒ ಮುಖ್ಯ ಶಿಕ್ಷಕರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಆರೋಪಿಸಿದರು.

    ಇದನ್ನೂ ಓದಿ: ‘ಗೃಹಲಕ್ಷ್ಮಿ’ಗೆ ತಾಂತ್ರಿಕ ಸಮಸ್ಯೆ ಎಲ್ಲವೂ ಸರಿಯಿದ್ದರೂ ನೋಂದಣಿ ಆಗುತ್ತಿಲ್ಲ ಈಗ ಸಮಸ್ಯೆ ಎಲ್ಲಿದೆ ಎನ್ನುವ ಗೊಂದಲ ಜನರದ್ದು

    ಕೂಡಲೇ ಮುಖ್ಯಶಿಕ್ಷಕರನ್ನು ಸೇವೆಯಿಂದ ಅಮಾನತ್ತು ಮಾಡಬೇಕು. ಶಾಲೆಗೆ ಒಳ್ಳೆಯ ಮುಖ್ಯ ಶಿಕ್ಷಕರನ್ನು ನಿಯೋಜಿಸಬೇಕು. ದಲಿತರಿಗೆ ಕೆಲಸ ಮಾಡಲು ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಗುವುದು ಎಚ್ಚರಿಸಿದರು.
    ಮಜ್ದೂರ್ ಸಂಘದ ಮುಖಂಡರಾದ ನಾಗರಾಜ ಮನ್ನಿಕೇರಿ, ಹುಲ್ಲಪ್ಪ ಅಂಟರ್‌ದಾನಿ, ಬಸವರಾಜ ಪತ್ರೋಟಿ, ಕೆಂಚಪ್ಪ ಕಂದಗಲ್, ಹನುಮಂತಪ್ಪ, ಗ್ಯಾನಪ್ಪ ಹಾದಿಮನಿ, ಬಸವರಾಜ, ಶರಣಪ್ಪ ಕಟಗಿ, ಹುಲಿಗೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts