More

    ಮನೆಗಳಲ್ಲಿ ಮಕ್ಕಳಿಗೆ ಸಂಸ್ಕಾರ ಹೇಳಿಕೊಡಿ

    ಸೇಡಂ: ದೇಶದಲ್ಲಿ ದಿನ ಕಳೆದಂತೆ ನಮ್ಮ ನೆಲದ ಸಂಸ್ಕೃತಿ ನಶಿಸಿ ಹೋಗುತ್ತಿದ್ದು, ತಾಯಂದಿರು ಮನೆಗಳಲ್ಲಿಯೇ ಮಕ್ಕಳಲ್ಲಿ ಸಂಸ್ಕೃತಿ ಬಿತ್ತುವ ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ಶ್ರೀಯಾಂಕ ಧನಶ್ರೀ ಹೇಳಿದರು.

    ಮಾತೃಛಾಯಾ ಪ್ರೌಢ ಶಾಲಾ ಆವರಣದಲ್ಲಿ ವಿಶ್ವಹಿಂದು ಪರಿಷತ್‌ನಿಂದ ಶುಕ್ರವಾರ ಆಯೋಜಿಸಿದ್ದ ೮ನೇ ವರ್ಷದ ಸಾಮೂಹಿಕ ದೀಪಲಕ್ಷ್ಮೀ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಎಷ್ಟೆ ಎತ್ತರಕ್ಕೆ ಹೋದರೂ ನಮ್ಮ ಸಂಸ್ಕೃತಿ ಮರೆಯುವ ಕೆಲಸ ಆಗಬಾರದು. ಭಾರತ ಹಲವು ಸಂಸ್ಕೃತಿ, ಆಚರಣೆಗಳಿಂದ ಕೂಡಿದ ಸಮೃದ್ಧ ರಾಷ್ಟ್ರ. ಇಂದಿನ ಸಮಾಜದಲ್ಲಿ ಮಹಿಳೆಯರು ಹಿಂದುಳಿದಿಲ್ಲ. ಅಲ್ಲದೆ ಈ ಪ್ರದೇಶ ಹಿಂದುಳಿದಿದೆ ಎನ್ನುನ ಭಾವನೆಯೂ ನಮ್ಮಿಂದ ತೆಗೆದು ಹಾಕಿ, ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಸದೃಢ ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದರು.

    ಪ್ರಜ್ಞಾ ಪ್ರವಾಹದ ಅಖಿಲ ಭಾರತ ಸಹ ಸಂಯೋಜಕ ರಘುನಂದನ್ ಮಾತನಾಡಿ, ಪ್ರತಿಯೊಂದರಲ್ಲಿ ದೇವರನ್ನು ಕಾಣುವ ಧರ್ಮ ಹಿಂದು ಧರ್ಮವಾಗಿದೆ. ಇಲ್ಲಿ ಯಾವತ್ತಿಗೂ ಸ್ವಫಲ ನಿರೀಕ್ಷೆ ಮಾಡುವುದಿಲ್ಲ. ಪ್ರಕೃತಿಗೆ ಹಾನಿಯುಂಟು ಮಾಡುವ ಯಾವುದೇ ತರಹದ ವಸ್ತುಗಳನ್ನು ನಾವು ಬಳಸುವುದಿಲ್ಲ ಎನ್ನುವ ಸಂಕಲ್ಪ ಇಂದೇ ಮಾಡಬೇಕಾಗಿದೆ. ಅಂದಾಗ ಮಾತ್ರ ಮುಂದಿನ ಪೀಳಿಗೆಗೆ ಆರೋಗ್ಯಯುತ ಸಮಾಜ ನೀಡಲು ಸಾಧ್ಯವಾಗಲಿದೆ ಎಂದು ಹೇಳಿದರು.

    ವಿಶ್ವಹಿಂದು ಪರಿಷತ್‌ನ ಕೇಂದ್ರೀಯ ಮಹಾಮಂತ್ರಿ ಸ್ಥಾಣು ಮಲಯನ್ ಮಾತನಾಡಿದರು. ಶ್ರೀ ಶಿವಶಂಕರ ಶಿವಾಚಾರ್ಯರು, ಡಾ.ತ್ರಿಮೂರ್ತಿ ಶಿವಾಚಾರ್ಯರು, ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯರು, ಶ್ರೀ ಶಿವಸಿದ್ಧಸೋಮೇಶ್ವರ ಸ್ವಾಮೀಜಿ, ರವಿ ಸ್ವಾಮಿ ಸಾನ್ನಿಧ್ಯ, ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ರೇವಗೊಂಡ ಅಧ್ಯಕ್ಷತೆ ವಹಿಸಿದ್ದರು.
    ಪ್ರಮುಖರಾದ ಸುಭಾಷ ಕಾಂಬಳೆ, ಮೀರಾ ರಘುಪ್ರಸಾದ, ಭಾಗ್ಯಲಕ್ಷ್ಮಿ ನಾಯ್ಕೋಡಿ, ಅನೀಲ್‌ರೆಡ್ಡಿ ಸಂಗೇಂಪಲ್ಲಿ, ಶಿವಲಿಂಗರೆಡ್ಡಿ ಪಾಟೀಲ್, ಶಿಲಾ ನಿರ್ಣಿ, ಶಿವರಾಜ ಸಂಗಳಗಿ, ಅಂಬರೇಶ ಸುಲೆಗಾಂವ್ ಇದ್ದರು.

    ವಿಎಚ್‌ಪಿ ಜಿಲ್ಲಾಧ್ಯಕ್ಷ ಪ್ರದೀಪ್ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಶಿವಲೀಲಾ ಜೀವಣಗಿ ಪ್ರಾರ್ಥಿಸಿದರು. ಮಮತಾ ವಿಶ್ವಕರ್ಮ ಸ್ವಾಗತಿಸಿದರು. ಆಶಾಲತಾ ನಿರೂಪಣೆ ಮಾಡಿದರು. ಸತ್ಯನಾರಾಯಣ ಮಹಾರಾಜ ಸಿಂಧನಮಡು ದೀಪಲಕ್ಷ್ಮೀ ಪೂಜಾ ಕಾರ್ಯ ನಡೆಸಿಕೊಟ್ಟರು.

    ಧರ್ಮ ಸಂಕಷ್ಟದಲ್ಲಿದ್ದಾಗ ಹಿಂದು ಜಾಗೃತನಾಗುವುದು ಅವಶ್ಯ. ಶಾಂತಿ ಪ್ರೀಯರಾದ ನಾವು ಸಂದರ್ಭ ಬಂದಲ್ಲಿ ಪರಾಕ್ರಮಿಗಳಾಗಬೇಕು. ಹಿಂದು ಯುವತಿಯರನ್ನು ಸೆಳೆಯುವ ಹುನ್ನಾರ ವ್ಯವಸ್ಥಿತವಾಗಿ ರೂಪಿಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಕೆಲಸ ಮಾಡುವುದು ಅಗತ್ಯವಾಗಿದೆ ಎಂದರು.
    | ಸ್ಥಾಣು ಮಲಯನ್, ಕೇಂದ್ರೀಯ ಮಹಾಮಂತ್ರಿ, ವಿಶ್ವಹಿಂದು ಪರಿಷತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts