More

    ಶೋಷಿತ ಸಮಾಜದವರು ವಿದ್ಯಾವಂತರಾಗಲಿ

    ಸೇಡಂ: ಪ್ರತಿವರ್ಷ ಜಯಂತಿ ಆಚರಣೆ ಮಾಡಿದರೆ ಸಾಲದು, ಶೋಷಿತ, ತುಳಿತಕ್ಕೊಳಗಾದ ಸಮಾಜದವರಾದ ವಿದ್ಯಾವಂತರಾಗಿ ಸರ್ಕಾರದ ದೊಡ್ಡ ಹುದ್ದೆಗಳಲ್ಲಿ ಕೂತಾಗ ಮಾತ್ರ ಬಾಬಾ ಸಾಹೇಬ್ ಅವರ ಕನಸು ನನಸಾಗುತ್ತದೆ ಎಂದು ಮೈಸೂರಿನ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

    ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಸ್ವಾಭಿಮಾನಿ ಸರ್ವಧರ್ಮ ಸಮನ್ವಯ ಸಮಿತಿಯಿಂದ ಮಂಗಳವಾರ ರಾತ್ರಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೩ನೇ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ, ಇಡೀ ರಾಜ್ಯಕ್ಕೆ ಮಾದರಿ ಎನ್ನುವಂತೆ ಎಲ್ಲರೂ ಸೇರಿ ಬಾಬಾ ಸಾಹೇಬರ ಜಯಂತಿ ಮಾಡುತ್ತಿರುವದು ಶ್ಲಾಘನೀಯ. ಡಾ.ಅಂಬೇಡ್ಕರ್ ಅವರು ಅಸಮಾನತೆ, ಲಿಂಗಬೇಧ, ಜಾತಿವ್ಯವಸ್ಥೆ ವಿರುದ್ಧ ನಿರಂತರ ಹೋರಾಟ ನಡೆಸಿದ್ದವರು ಎಂದರು.

    ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ್ ತೆಲ್ಕೂರ (ಜಿಕೆ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಬಸವಣ್ಣನವರ ವಚನಗಳನ್ನು ಕಾಣುತ್ತೇವೆ. ಮೂಲಭೂತವಾದ, ಸಾಂಪ್ರದಾಯಿಕವಾದವನ್ನು ಬದಿಗೊತ್ತಿ ಸಮಾಜದಲ್ಲಿ ಪರಿವರ್ತನೆ, ಪ್ರಗತಿಪರ ಚಿಂತನೆಯ ಅವಶ್ಯಕತೆಯಿದೆ. ಅಂಬೇಡ್ಕರ್ ಅವರ ಬಗ್ಗೆ ಅಧ್ಯಯನ ಮಾಡಬೇಕು. ಅವರ ಆಶಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.

    ಬೆಳಮಗಿ ಬುದ್ಧ ವಿಹಾರದ ಭಂತೆ ಅಮರಜ್ಯೋತಿ, ರಾಜ್ಯ ತೋಟಗಾರಿಕೆ ಮಹಾಮಂಡಳಿ ನಿರ್ದೇಶಕ ಬಸವರಾಜ ಪಾಟೀಲ್ ಊಡಗಿ, ತೆಲಂಗಾಣದ ಚಿಂತಕ ರಂಜರ‍್ಲಾ ರಾಜೇಶ, ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಡಾ.ಕೆ.ಎಂ. ಸಂದೇಶ, ಸ್ವಾಭಿಮಾನಿ ಸರ್ವಧರ್ಮ ಸಮನ್ವಯ ಸಮಿತಿ ಅಧ್ಯಕ್ಷ ರೇವಣಸಿದ್ದ ಶಿಂಧೆ ಮಾತನಾಡಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ, ವಿಶ್ವ ಹಿಂದು ಪರಿಷತ್ ಪ್ರಾಂತ ಪ್ರಮುಖ ಶಿವಕುಮಾರ ಬೋಳಶೆಟ್ಟಿ, ಪ್ರಮುಖರಾದ ಸುನೀಲ್ ಹಳ್ಳಿ, ಮಾರುತಿ ಕೊಡಂಗಲಕರ್, ಶಿವಕುಮಾರ ತೊಟ್ನಳ್ಳಿ, ಸತೀಶ ಪೂಜಾರಿ, ಮಲ್ಲಿಕಾರ್ಜುನ ಮೆಕಾನಿಕ್, ಡಾ.ಶ್ರೀನಿವಾಸ ಮೊಕದಂ, ಕಾಶೀನಾಥ ಮಡಿವಾಳ, ಸಂಜುಕುಮಾರ ಠಾಕೂರ್, ಹಾಜಿ ನಾಡೇಪಲ್ಲಿ, ರಶೀದ್ ರಂಜೋಳ, ಶಂಭುಲಿಂಗ ನಾಟೀಕಾರ, ರಾಮು ಇಂಜಳ್ಳಿಕರ್, ಖಾದರ್, ಸಲೀಂ ಲಷ್ಕರಿ, ಸಾಗರ ಕಲಕಂಭ, ಅಶೋಕ ದುಖನದಾರ ಇತರರಿದ್ದರು.

    ಕೊತ್ತಲ ಬಸವೇಶ್ವರ ದೇವಾಲಯದಿಂದ ವೇದಿಕೆವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಸಿದ್ದಾರ್ಥ ಚಿಂತಪಳ್ಳಿ ಸ್ವಾಗತಿಸಿದರು. ಜಾನಕಿ ಹಂಗನಳ್ಳಿಕರ್ ನಿರೂಪಣೆ ಮಾಡಿದರು. ಗೌತಮ ಹಳ್ಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts