More

    ಯುವ ಪೀಳಿಗೆಗೆ ತಾತಯ್ಯ ಮಾದರಿ ಅವಶ್ಯ

    ವಿಜಯವಾಣಿ ಸುದ್ದಿಜಾಲ ನಂದಗುಡಿ
    ಕಾಲಜ್ಞಾನಿಯಾಗಿದ್ದ ಕೈವಾರ ತಾತಯ್ಯ ಅವರ ಆದರ್ಶಗಳು ಯುವ ಪೀಳಿಗೆಗೆ ಮಾದರಿಯಾಗಿದ್ದು, ಅವರ ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು ಎಂದು ಹಾಪ್‌ಕಾಮ್ಸ್ ನಿರ್ದೇಶಕ ವೆಂಕಟೇಶಪ್ಪ ಹೇಳಿದರು.
    ತಾಲೂಕಿನ ಗೊಟ್ಟಿಪುರ ಕೈವಾರ ತಾತಯ್ಯನವರ ಮಠದಲ್ಲಿ ಹಮ್ಮಿಕೊಂಡಿದ್ದ 43ನೇ ವಾರ್ಷಿಕೋತ್ಸವ ಹಾಗೂ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು.
    ಕೈವಾರ ತಾತಯ್ಯನವರು ಯೋಗ ದೃಷ್ಟಿಯಿಂದ ಕಲಿಯುಗದಲ್ಲಿ ಕಟ್ಟಕಡೆಯ ಕಾಲಜ್ಞಾನ ನೀಡಿದ್ದಾರೆ. ಆ ಕಾಲಜ್ಞಾನದ ಅರಿವನ್ನು ಪ್ರತಿಯೊಬ್ಬರು ಪಡೆದು ಜಾಗೃತರಾಗಬೇಕು ಎಂದರು.
    ಮಠದ ಧರ್ಮಾಧಿಕಾರಿ ಮುನಿಸ್ವಾಮಿ ಮಾತನಾಡಿ, ಗ್ರಾಮದಲ್ಲಿಯೇ ಮಠ ಸ್ಥಾಪನೆ ಮಾಡುವ ಉದ್ದೇಶ ಹೊಂದಿ, ಹಲವು ಮಹನೀಯರ ಸಹಾಯದಿಂದ ಮಠವನ್ನು ಸ್ಥಾಪನೆ ಮಾಡಿದ್ದು, ಇಂದಿಗೆ 43 ವರ್ಷಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ಮಠದಲ್ಲಿ ಹೋಮ-ಹವನ, ಭಜನೆ, ಕೀರ್ತನೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ತಾತಯ್ಯನವರ ಆರಾಧನೆ ಮಾಡಲಾಗುತ್ತಿದೆ ಎಂದರು.
    ಮಠದ ಟ್ರಸ್ಟಿ ಬಾಲಕೃಷ್ಣ ಭಾಗವತ ಮಾತನಾಡಿ, ಅಹಂಕಾರ ಬಿಟ್ಟ ಭಕ್ತನಿಗೆ ಮಾತ್ರ ಪರಮ ಪದವಿ ದೊರೆಯುತ್ತದೆ. ಗುರುಗಳಲ್ಲಿ ಅನನ್ಯ ಭಕ್ತಿಯಿಂದ ಶರಣಾಗತಿಯಾದರೆ, ನಮ್ಮ ಮುಂದಿನ ಬದುಕನ್ನು ಅವರೇ ರೂಪಿಸುತ್ತಾರೆ. ಮಾನವ ಜನ್ಮವನ್ನು ವ್ಯರ್ಥ ಮಾಡಿಕೊಳ್ಳದೆ, ಸದುಪಯೋಗ ಮಾಡಿಕೊಳ್ಳಬೇಕಾದರೆ, ಗುರುವಿನ ಅನುಗ್ರಹ ಬೇಕು. ನಮ್ಮಲ್ಲಿರುವ ಅವಿದ್ಯೆಗಳನ್ನು ತೆಗೆದುಹಾಕುವ ಶಕ್ತಿ ಗುರುವಿಗೆ ಮಾತ್ರವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts