More

    ಸಾಮಾಜಿಕವಾಗಿ ಮಣೂರು ಫ್ರೆಂಡ್ಸ್ ಮುಂಚೂಣಿ

    ವಿಜಯವಾಣಿ ಸುದ್ದಿಜಾಲ ಕೋಟ

    ಸ್ಥಳೀಯ ದೇಗುಲಗಳ ಜಾತ್ರೋತ್ಸವದಲ್ಲಿ ಸಂಘಸಂಸ್ಥೆಗಳ ಕೊಡುಗೆ ಅನನ್ಯವಾಗಿದೆ. ಸಾಮಾಜಿಕ ಕಾರ್ಯಗಳಲ್ಲಿ ಮಣೂರು ಫ್ರೆಂಡ್ಸ್ ಮುಂಚೂಣಿಯಲ್ಲಿದೆ ಎಂದು ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಮಣೂರು ವಿಷ್ಣುಮೂರ್ತಿ ಮಯ್ಯ ಹೇಳಿದರು.

    ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಎರಡನೆ ದಿನದ ಸಾಂಸ್ಕೃತಿಕ ಪರ್ವದ ಅಂಗವಾಗಿ ಮಣೂರು ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ 23ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಇತ್ತೀಚಿಗೆ ಅಗಲಿದ ದೇಗುಲದ ಪರಿಚಾರಕಿ ಕಾವೇರಿ ದೇವಾಡಿಗ, ಸ್ಥಳೀಯ ಕ್ರಿಕೆಟಿಗ ಸಾಗರ್ ಪೂಜಾರಿಗೆ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು. ವಿಶೇಷಚೇತನರಿಗೆ ಸಹಾಯಹಸ್ತ ನೀಡಲಾಯಿತು.

    ಮಣೂರು ಫ್ರೆಂಡ್ಸ್ ಗೌರವ ಸಲಹೆಗಾರ ಎಂ.ಸುಬ್ರಾಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಎಚ್.ಕುಂದರ್, ಉದ್ಯಮಿ ಸಂತೋಷ್ ಸುವರ್ಣ, ಉಮೇಶ್ ಆಚಾರ್, ಮಣೂರು ಫ್ರೆಂಡ್ಸ್ ಗೌರವಾಧ್ಯಕ್ಷ ಸುರೇಶ್ ಆಚಾರ್, ಅಧ್ಯಕ್ಷ ರಾಘವೇಂದ್ರ ಆಚಾರ್, ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಅಜಿತ್ ಆಚಾರ್ ಸ್ವಾಗತಿಸಿದರು. ಸುಧಾಕರ್ ಆಚಾರ್ ಪ್ರಸ್ತಾವನೆಗೈದರು. ಸುಜಾತಾ ಬಾಯರಿ ನಿರೂಪಿಸಿದರು. ದಿನೇಶ್ ಆಚಾರ್ ಸಹಕರಿಸಿದರು.

    ಸಾಧಕರಿಗೆ ಸನ್ಮಾನ

    ಸ್ಥಳೀಯ ಸಾಧಕ ಹರ್ತಟ್ಟು ನಾರಾಯಣ ಆಚಾರ್, ದೇಗುಲದ ಪರಿಚಾರಕರಾದ ಬಾಬಿ ದೇವಾಡಿಗ, ಕಮಲ ದೇವಾಡಿಗ, ಗಂಗಾ ದೇವಾಡಿಗ, ಚಿತ್ರಕಲಾವಿದ ನಾಗೇಶ್ ಆಚಾರ್, ಮಾಸ್ಟರ್ ಅಥ್ಲೀಟ್ ದಿನೇಶ್ ಗಾಣಿಗ, ಶೈಕ್ಷಣಿಕ ಸಾಧಕಿ ನಂದಿತಾ ಪೈ, ಕುಸ್ತಿಪಟು ಪ್ರೇರಣಾ ದಿನಕರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts