More

    ಕಳುವು ಮಾಡಿದನೆಂದು ಸಂಶಯಿಸಿ ಸಾಯುವಂತೆ ಥಳಿಸಿದ

    ನವದೆಹಲಿ: ಇಲ್ಲಿಯ ಸರಾಯ್ ಕಾಳೆ ಖಾನ್‌ನಲ್ಲಿ ಕ್ಲಸ್ಟರ್ ಬಸ್‌ಗಳ ಪಾರ್ಕಿಂಗ್ ಪ್ರದೇಶದಲ್ಲಿ ಕಳುವು ಮಾಡಿದ ಸಂಶಯದ ಮೇಲೆ ವ್ಯಕ್ತಿಯೋರ್ವನನ್ನು ಭದ್ರತಾ ಸಿಬ್ಬಂದಿ ಥಳಿಸಿ, ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.
    ಆರೋಪಿ ಭದ್ರತಾ ಸಿಬ್ಬಂದಿ ಬ್ರಜೇಂದ್ರ ಕುಮಾರ್ ಸಿಂಗ್ (59)ನನ್ನು ಬಂಧಿಸಲಾಗಿದೆ.
    ಮೃತನನ್ನು ಖುರ್ಷೀದ್ ಆಲಂ (34) ಎಂದು ಗುರುತಿಸಲಾಗಿದೆ. ಆಲಂ ತನ್ನ ಸ್ನೇಹಿತರೊಂದಿಗೆ ಜೂನ್ 13 ರಂದು ಕಳ್ಳತನ ಮಾಡಲು ಪಾರ್ಕಿಂಗ್ ಸ್ಥಳಕ್ಕೆ ಹೋಗಿದ್ದ ಎಂದು ಆರೋಪಿಸಲಾಗಿದೆ.

    ಇದನ್ನೂ ಓದಿ: ಮೆಲ್ಬೋರ್ನ್​ನಲ್ಲಿ ಒಂದು ಬಟರ್​​ ಚಿಕನ್​ ತಿಂದಿದ್ದಕ್ಕೆ 1.23 ಲಕ್ಷ ರೂ. ಜುಲ್ಮಾನೆ!

    ಅಲ್ಲಿ ಅವರನ್ನು ಭದ್ರತಾ ಸಿಬ್ಬಂದಿಯನ್ನು ತಡೆದಿದ್ದಾನೆ. ಆಲಂನನ್ನು ಭದ್ರತಾ ಸಿಬ್ಬಂದಿ ಕೋಲಿನಿಂದ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಆಲಂನನ್ನು ಸಫ್ದರ್​​ಜಂಗ್ ಆಸ್ಪತ್ರೆಗೆ ಸೇರಿಸಿದಾಗ ಅಲ್ಲಿಯೇ ಆತ ಸಾವಿಗೀಡಾಗಿದ್ದು, ಈ ಕುರಿತು ಅಲ್ಲಿಂದ ಮಾಹಿತಿ ದೊರೆತಿದೆ ಎಂದು ಡಿಸಿಪಿ  (ಆಗ್ನೇಯ) ಆರ್.ಪಿ.ಮೀನಾ ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.  ಆರೋಪಿ ಭದ್ರತಾ ಸಿಬ್ಬಂದಿ ವಿರುದ್ಧ ಐಪಿಸಿ ಸೆಕ್ಷನ್ 304 ರ ಅಡಿ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ.

    ಇದನ್ನೂ ಓದಿ:  ಪಿಎಂಸಿ ಬ್ಯಾಂಕ್ ಹಗರಣದ ಆರೋಪಿ ರಾಕೇಶ್​​ಗೆ ಕೋವಿಡ್ ದೃಢ; ಸಂಬಂಧಿಕರು ಗದ್ದಲ ಸೃಷ್ಟಿಸಿದ್ದೇಕೆ?

    ಆಲಂ, ತನ್ನ ಸ್ನೇಹಿತರೊಂದಿಗೆ ಜುಲೈ 13 ರಂದು ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಹೊರಟಿದ್ದ. ಬೆಳಿಗ್ಗೆ 11 ಗಂಟೆಗೆ ಸಾರಾಯ್ ಕಾಳೆ ಖಾನ್ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆತ ಪಾದಚಾರಿ ಮಾರ್ಗದಲ್ಲಿ ಮಲಗಿದ್ದಾನೆ ಎಂದು ತಮಗೆ ಮಾಹಿತಿ ಸಿಕ್ಕಿತ್ತು ಎಂದು ಆತನ ತಂದೆ ತಿಳಿಸಿದ್ದಾರೆ.
    ಆಲಂನನ್ನು ಮೂವರು ಭದ್ರತಾ ಸಿಬ್ಬಂದಿ ಕ್ರೂರವಾಗಿ ಥಳಿಸಿದ್ದಾರೆ ಎಂದು ಆತನ ಸಹೋದರ ಸುಲ್ತಾನ್ ಆರೋಪಿಸಿದ್ದಾನೆ. “ ಕಳುವು ಮಾಡಿದ್ದು ನಿಜವಾಗಿದ್ದರೆ ಆತನನ್ನು ಪೊಲೀಸರಿಗೆ ಒಪ್ಪಿಸಬಹುದಿತ್ತು. ಆತನಿಗೆ ಹೊಡೆಯಲು ಮತ್ತು ಕೊಲ್ಲಲು ಯಾರಿಗೆ ಹಕ್ಕಿದೆ? ಎಂದು ಸುಲ್ತಾನ್ ಪ್ರಶ್ನಿಸಿದ್ದಾನೆ. ಆಲಂಗೆ ಪತ್ನಿ ಹಾಗೂ ಎಂಟು ವರ್ಷ ವಯಸ್ಸಿನ ಮಗಳು ಇದ್ದಾರೆ.

    ಷಾ ಆಪ್ತನೆಂದು ಹೇಳಿಕೊಂಡು ಗಡ್ಕರಿ ಕಚೇರಿಗೆ ಹೋಯಿತೊಂದು ಫೋನ್‌ ಕಾಲ್‌: ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts