More

    ದ್ವಿತೀಯ ಪಿಯು ರಿಸಲ್ಟ್ ಬಗ್ಗೆ ಸಮಾಧಾನವಿಲ್ಲವೇ? ಇಲ್ಲಿದೆ ನಿಮಗೊಂದು ಅವಕಾಶ

    ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಇಂದು ಹೊರಬಿದ್ದಿದೆ. ಪರೀಕ್ಷೆ ನಡೆಸದೆಯೇ ವಿದ್ಯಾರ್ಥಿಗಳ ಈ ಹಿಂದಿನ ಫಲಿತಾಂಶವನ್ನೇ ಆಧರಿಸಿ ಫಲಿತಾಂಶ ಕೊಡಲಾಗಿದೆ. ಆದರೆ ಅನೇಕ ವಿದ್ಯಾರ್ಥಿಗಳಿಗೆ ಫಲಿತಾಂಶದ ಬಗ್ಗೆ ಅಸಮಾಧಾನವಿದ್ದು, ಅಂತವರಿಗಾಗಿ ಮತ್ತೊಂದು ಅವಕಾಶ ನೀಡಲಾಗಿದೆ.

    ಒಂದು ವೇಳೆ ಈ ವರ್ಷದ ದ್ವಿತೀಯ ಪಿಯು ಫಲಿತಾಂಶ ಪಡೆದ ಯಾವುದೇ ವಿದ್ಯಾರ್ಥಿಗೆ ಯಾವುದೇ ವಿಷಯದಲ್ಲಿ ಪರೀಕ್ಷೆ ಬರೆದಿದ್ದರೆ ಈಗ ಬಂದಿರುವ ಅಂಕಗಳಿಗಿಂತ ಹೆಚ್ಚಿನ ಅಂಕ ಬರುತ್ತಿತ್ತು ಎನ್ನುವ ನಂಬಿಕೆಯಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶವಿದೆ. ಆ ಪರೀಕ್ಷೆಯ ಇದೇ ಆಗಸ್ಟ್ ತಿಂಗಳಲ್ಲಿ ಅದರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

    ಫಲಿತಾಂಶದ ಬಗ್ಗೆ ಅಸಮಾಧಾನ ಹೊಂದಿರುವ ಹೊಸ ವಿದ್ಯಾರ್ಥಿಗಳು, ಪುನರಾವರ್ತಿತರು ಹಾಗೂ ಖಾಸಗಿ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದು. ಪರೀಕ್ಷೆ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಪ್ರಾಂಶುಪಾಲರಿಗೆ ವಿಷಯ ಮುಟ್ಟಿಸಬೇಕು. ಆ ಪ್ರಾಂಶುಪಾಲರು ಜುಲೈ 30ರೊಳಗೆ ಪರೀಕ್ಷೆ ಬರೆಯಲಿಚ್ಛಿಸುವ ಮಾಹಿತಿಯನ್ನು SATS portalನಲ್ಲಿ ಅಪ್​ಡೇಟ್ ಮಾಡಬೇಕು. ನಂತರ ಡಿಡಿಪಿಯು ಮಟ್ಟದಲ್ಲಿ ಅರ್ಜಿ ಪರಿಶೀಲನೆಗೆ ಜು.31 ಹಾಗೂ ಕೇಂದ್ರ ಕಚೇರಿಗೆ ತಲುಪಿಸಲು ಆಗಸ್ಟ್ 2 ಕೊನೆಯ ದಿನಾಂಕವೆಂದು ತಿಳಿಸಿದ್ದಾರೆ.

    ಆಗಸ್ಟ್​ನಲ್ಲಿ ನಡೆಯುವ ಪರೀಕ್ಷೆಯ ವೇಳಾಪಟ್ಟಿ ಈ ಕೆಳಗಿನಂತಿದೆ.
    ಆ.19 – ಐಚ್ಛಿಕ ಕನ್ನಡ, ಗಣಿತ, ಬೇಸಕ್ ಮ್ಯಾಥ್ಸ್
    ಆ.21 – ಕನ್ನಡ, ತಮಿಳು, ತೆಲಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
    ಆ.23 – ಭೂಗೋಳಶಾಸ, ಮನಃಶಾಸ, ಭೌತಶಾಸ
    ಆ.24 – ಇಂಗ್ಲಿಷ್
    ಆ.25 – ಲೆಕ್ಕಶಾಸ, ಭೂಗರ್ಭಶಾಸ, ಶಿಕ್ಷಣ, ಗೃಹ ವಿಜ್ಞಾನ
    ಆ.26 – ರಾಜ್ಯಶಾಸ
    ಆ.27 – ಇತಿಹಾಸ, ಲೆಕ್ಕಶಾಸ
    ಆ.30 – ಅರ್ಥಶಾಸ,
    ಆ.31 – ಉರ್ದು, ಸಂಸ್ಕೃತ
    ಸೆ.1 – ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಸಮಾಜಶಾಸ, ಜೀವವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
    ಸೆ.2 – ತರ್ಕಶಾಸ, ವ್ಯವಹಾರ ಅಧ್ಯಯನ, ರಸಾಯನಶಾಸ
    ಸೆ.3 – ಹಿಂದಿ

    ದ್ವಿತೀಯ ಪಿಯು ರಿಸಲ್ಟ್ ಬಗ್ಗೆ ಸಮಾಧಾನವಿಲ್ಲವೇ? ಇಲ್ಲಿದೆ ನಿಮಗೊಂದು ಅವಕಾಶ

    ಕರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಒಂದೂ ಸಾವು ಸಂಭವಿಸಿಲ್ಲ! ಮಾಹಿತಿ ನೀಡಿದ ಸರ್ಕಾರ

    ಚಿನ್ನದ ಫೆರಾರಿ ಕಾರನ್ನ ಎಲ್ಲಾದರು ಕಂಡಿರಾ? ಆನಂದ್ ಮಹೀಂದ್ರಾ ಸಿಟ್ಟಿಗೆ ಕಾರಣವಾಯ್ತು ಈ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts