More

    ಛೇ… ವಯಸ್ಸಾಗೋಯ್ತು ಅಂತ ಮರುಗುವವರಿಗೆ ವಿಜ್ಞಾನಿಗಳು ಕೊಟ್ಟಿದ್ದಾರೆ ಸಿಹಿಸುದ್ದಿ

    ನವದೆಹಲಿ: ವಯಸ್ಸಾಗುತ್ತಿದ್ದಂತೆಯೇ ಸಾಮಾನ್ಯವಾಗಿ ಎಲ್ಲರಿಗೂ ಏನೋ ಕಸಿವಿಸಿ. ಅಯ್ಯೋ ಇಷ್ಟು ಬೇಗ ವಯಸ್ಸಾಗಿ ಹೋಯ್ತಲ್ಲ ಎನ್ನುವ ಬೇಸರ. ಇನ್ನು ಕೆಲವರಿಗೆ ವಯಸ್ಸಾದರೂ ತಮ್ಮ ನಿಜವಾದ ವಯಸ್ಸನ್ನು ಬಹಿರಂಗಪಡಿಸುವುದು ಕಷ್ಟ.

    ಏನೇ ಆದರೂ ಕೆಲವರನ್ನು ಬಿಟ್ಟರೆ ಹೆಚ್ಚಿನವರಿಗೆ ದೇಹದಲ್ಲಾಗುವ ಬದಲಾವಣೆ ಮೂಲಕವೇ ವಯಸ್ಸಾಗಿರುವುದನ್ನು ಪತ್ತೆ ಮಾಡಲು ಸಾಧ್ಯ. ಇಂಥವರಿಗೆಲ್ಲರಿಗೂ ಇದೀಗ ವಿಜ್ಞಾನಿಗಳ ಒಂದು ಸಂತಸದ ಸುದ್ದಿಯನ್ನು ಕೊಟ್ಟಿದ್ದಾರೆ.

    ಸಹಜವಾಗಿ ವಯಸ್ಸಾಗುತ್ತಿದ್ದಂತೆಯೇ ಮೂಳೆಗಳು ದುರ್ಬಲಗೊಳ್ಳುತ್ತವೆ. ಚರ್ಮ ಸುಕ್ಕುಗಟ್ಟುತ್ತದೆ. ದೃಷ್ಟಿ ಕುಂದುತ್ತದೆ ಹಾಗೂ ಸ್ಮರಣ ಶಕ್ತಿ ಕೂಡ ಕುಂಠಿತಗೊಳ್ಳುತ್ತದೆ. ಇವ್ಯಾವುವೂ ಆಗದಂಥ ಒಂದು ಅದ್ಭುತ ಸಂಶೋಧನೆಯನ್ನು ವಿಜ್ಞಾನಿಗಳು ಮಾಡಿದ್ದಾರೆ. ಇದು ಬಹುತೇಕ ಯಶಸ್ವಿಯಾಗಿದ್ದು, ಇನ್ನಷ್ಟು ಅಧ್ಯಯನ ನಡೆಯುತ್ತಿದೆ.

    ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸ್ಯಾನ್‌ಡಿಯಾಗೊದ ವಿಜ್ಞಾನಿಗಳು ಮುಪ್ಪಾಗುವುದು (ಏಜಿಂಗ್‌) ಪರಿಣಾಮವನ್ನು ತಿಳಿದುಕೊಳ್ಳಲು ಅಧ್ಯಯನವೊಂದನ್ನು ನಡೆಸಿದ್ದಾರೆ. ದೇಹದಲ್ಲಿರುವ ಈಸ್ಟ್ ಕೋಶಗಳಲ್ಲಿ ಆಗುವ ಬದಲಾವಣೆಗಳಿಂದ ವಯಸ್ಸಾಗುವುದನ್ನು ಗುರುತಿಸಬಹುದಾಗಿರುವ ಕಾರಣ, ಇವುಗಳ ಮೇಲೆ ಅಧ್ಯಯನ ನಡೆಸಲಾಗಿದೆ.

    ಇದನ್ನೂ ಓದಿ:  ಶಿಲುಬೆ, ಏಸುಪ್ರತಿಮೆ ಕಿತ್ತೆಸೆಯಲು ಚೀನಾದಲ್ಲಿ ಕಮ್ಯುನಿಸ್ಟರ ಒತ್ತಡ!

    ‘ಏಜಿಂಗ್ ಲ್ಯಾಂಡ್ ಸ್ಕೇಪ್’ವನ್ನು ಸ್ಥಾಪಿಸುವ ಮೂಲಕ ವಯಸ್ಸಾದ ಪ್ರಕ್ರಿಯೆಯನ್ನು ಕುಶಲತೆಯಿಂದ ನಿರ್ವಹಿಸುವ ಮೂಲಕ ಇಡೀ ಪ್ರಕ್ರಿಯೆಯನ್ನೇ ಇದೀಗ ಬದಲಾಯಿಸಿದ್ದಾರೆ. ಜೀವಕೋಶಗಳ ಡಿಎನ್‌ಎಗಳನ್ನು ಬದಲಾಯಿಸುವ ಮೂಲಕ ಈ ಯಶಸ್ಸನ್ನು ಸಾಧಿಸಲಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ಈ ಅಧ್ಯಯನದ ಹಿರಿಯ ಲೇಖಕ ನ್ಯಾನ್ ಹಾವೋ ಸಿಎನ್‌ಎನ್‌, ‘ನಾವು ಏಜಿಂಗ್ ರೂಟ್‌ನ ಮಾಲಿಕ್ಯುಲರ್ ಪ್ರೊಸೆಸ್ ಹಾಗೂ ಅವುಗಳ ನಡುವಿನ ಸಂಪರ್ಕಗಳನ್ನು ಪತ್ತೆಹಚ್ಚಿದ್ದೇವೆ. ಅಷ್ಟೇ ಅಲ್ಲ ವಯಸ್ಸಾದ ಕೋಶಗಳನ್ನು ನಿಯಂತ್ರಿಸುವ ಮಾಲಿಕ್ಯೂಲರ್ ಸರ್ಕಿಟ್‌ಗಳನ್ನೂ ಕೂಡ ಕಂಡುಕೊಂಡಿದ್ದೇವೆ’ ಎಂದು ಹೇಳಿದ್ದಾರೆ.

    ಈ ಅಧ್ಯಯನದಿಂದ, ವಿಜ್ಞಾನಿಗಳು ಜೀವಕೋಶಗಳ ಜೀವಿತಾವಧಿಯನ್ನು ಹೆಚ್ಚಿಸುವ ‘ಅನನ್ಯ ಏಜಿಂಗ್ ರೂಟ್ ಅನ್ನು ರಚಿಸಲು ಸಾಧ್ಯವಾಗಲಿದೆ. ಈ ಬದಲಾವಣೆಗಳನ್ನು ಮಾಡುವ ಮೂಲಕ ವಯಸ್ಸಾಗುವಿಕೆಯ ಪ್ರಕ್ರಿಯೆನ್ನು ವಿಳಂಬಗೊಳಿಸಬಹುದಾಗಿದೆ ಎನ್ನಲಾಗಿದೆ.

    ಆದರೆ, ಪ್ರಸ್ತುತ, ಈ ಪರೀಕ್ಷೆಯನ್ನು ಈಸ್ಟ್ ಕೋಶಗಳ ಮೇಲೆ ಮಾಡಲಾಗಿದೆ. ಇದನ್ನು ಮಾನವರ ಮೇಲೆ ಪರೀಕ್ಷಿಸುವ ಮೊದಲು, ವಿಜ್ಞಾನಿಗಳು ಹೆಚ್ಚು ಸಂಕೀರ್ಣ ಕೋಶಗಳ ಮೇಲೆ ಈ ಪರೀಕ್ಷೆಗಳನ್ನು ಮಾಡಲು ಬಯಸಿದ್ದಾರೆ. ನಂತರ, ಕೆಲವು ಜೀವಿಗಳ ಮೇಲೆ ಪರೀಕ್ಷೆಗಳನ್ನು ನಡೆಸಲಾಗುವುದು ಎಂದಿದ್ದಾರೆ.

    ಮಹಿಳೆ ಬೆಂಕಿಗಾಹುತಿ: ರಾಜಕೀಯ ವಿಷದ ಬೀಜಕ್ಕೆ ಬಲಿಯಾಯಿತೇ ಜೀವ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts