More

    ಜೈವಿಕ ಇಂಧನದ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಳ್ಳಿ

    ನಂದಪುರ: ಜೈವಿಕ ಇಂಧನ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಯುತ್ತಿದ್ದು, ಈಗಾಗಲೇ ಹಲವು ಜೈವಿಕ ಇಂಧನ ಬಳಕೆಯಲ್ಲಿದೆ. ಈ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ತಿಳುವಳಿಕೆ ಅಗತ್ಯವಿದೆ ಎಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಷಯಗಳ ವಿವಿ ಹಿರಿಯ ಉಪನ್ಯಾಸಕ ಡಾ. ಹೊನ್ನಪ್ಪ ತಿಳಿಸಿದರು.

    ವಿವಿ ಆವರಣದಲ್ಲಿ ಹಮ್ಮಿಕೊಂಡಿದ್ದ ಜೈವಿಕ ಇಂಧನ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ, ಜೈವಿಕ ಇಂಧನ ಸ್ವರೂಪ, ಜೈವಿಕ ಇಂಧನ ಪಡೆಯಬಹುದಾದ ವೃಕ್ಷಗಳು, ಜೈವಿಕ ಇಂಧನ ಉತ್ಪದಾನೆ ಹಂತಗಳ ಬಗ್ಗೆ ವಿವರಿಸಿದರು. ಜೈವಿಕ ಇಂಧನ ಉಪ ಉತ್ಪನ್ನಗಳ ತಯಾರಿಕೆ ಮತ್ತು ನಿರ್ವಹಣೆ, ಜೈವಿಕ ಇಂಧನ ಉದ್ಯಾನದ ಕಾರ್ಯ ಚಟುವಟಿಕೆಗಳನ್ನು ಮತ್ತು ಜೈವಿಕ ಇಂಧನದಿಂದ ಪರಿಸರಕ್ಕೆ, ರೈತರಿಗೆ ಹಾಗೂ ವಾಹನ ಬಳಕೆ ಮಾಡುವವರಿಗೆ ಆಗುವ ಉಪಯೋಗಗಳ ಕುರಿತು ವಿವರಿಸಿದರು.
    ವಿವಿಯ ಉಪನ್ಯಾಸಕರು, ಸ್ಥಳೀಯ ರೈತರು ಮತ್ತು ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts