More

    ಶಾಲೆಗಳ ಮರು ಆರಂಭ ಆಗಸ್ಟ್​ಗೆ?: ಎರಡು ತಿಂಗಳು ಮುಂದೂಡಲು ಆಡಳಿತ ಮಂಡಳಿಗಳ ಮನವಿ

    ಬೆಂಗಳೂರು: ಶೈಕ್ಷಣಿಕ ಸಂಸ್ಥೆಗಳ ಪುನಾರಂಭ ಲಾಕ್​ಡೌನ್​ ಅವಧಿಯನ್ನು ಅವಲಂಬಿಸಿರೋದಂತೂ ಸತ್ಯ. ಸದ್ಯ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಲಾಗಿದೆ. ಅಲ್ಲಿಗೆ ಜೂನ್​ 1ರವರೆಗೆ ರಜೆ ಅನ್ನೊಂದಂತೂ ಪಕ್ಕಾ. ಆದರೆ, ಅದಕ್ಕೂ ಮುನ್ನ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆ ನಡೆಸುವ ಸಾಧ್ಯತೆಗಳಂತೂ ಇಲ್ಲ. ಏಕೆಂದರೆ, ಮೇ 15ರವರೆಗೆ ಶೈಕ್ಷಣಿಕ ಸಂಸ್ಥೆಗಳನ್ನು  ತೆರೆಯದಿರುವಂತೆ ಕೇಂದ್ರ ಸಚಿವರು ಶಿಫಾರಸು ಮಾಡಿದ್ದಾರೆ. ಆ ನಂತರ ಪರಿಸ್ಥಿತಿ ಸುಧಾರಿಸಿ ಪರೀಕ್ಷೆ ವೇಳಾಪಟ್ಟಿ ಘೋಷಣೆಯಾದರೂ, ಜೂನ್​ನಲ್ಲಿಯೇ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ.

    ಪ್ರವೇಶ ಪ್ರಕ್ರಿಯೆಗೆ ಸಮಯ ಬೇಕು: ಬಹುತೇಕ ಶಾಲಾಡಳಿತ ಮಂಡಳಿಗಳು ಎತ್ತಿರುವ ಪ್ರಶ್ನೆಯೇ ಇದು. ಪರೀಕ್ಷೆ ಬಳಿಕ ಅದರ ಮೌಲ್ಯಮಾಪನಕ್ಕೆ ಶಿಕ್ಷಕರನ್ನು ನಿಯೋಜಿಸಬೇಕು. ಅದರೊಂದಿಗೆ ಪ್ರವೇಶ ಪ್ರಕ್ರಿಯೆಗಳನ್ನು ನಡೆಸಬೇಕು, ಸಮವಸ್ತ್ರ, ಪಠ್ಯಪುಸ್ತಕಗಳನ್ನು ಲಭ್ಯತೆಗೆ ಅನುಗುಣವಾಗಿ ಹೊಂದಿಸಿಕೊಳ್ಳಬೇಕು. ಇವೆಲ್ಲ ಪ್ರಕ್ರಿಯೆಗಳಿಗೆ ಕಾಲಾವಕಾಶ ಬೇಕಾಗಿರುವುದರಿಂದ ಶಾಲಾರಂಭ ದಿನಾಂಕವನ್ನು ಕನಿಷ್ಠ ಎರಡು ತಿಂಗಳು ಮುಂದೂಡಿ ಎಂಬುದು ಅವರ ಬೇಡಿಕೆ. ಹೀಗಾಗಿ ಜುಲೈ ಅಥವಾ ಆಗಸ್ಟ್​ನಲ್ಲಷ್ಟೇ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಸಾಧ್ಯ ಎಂದು ಮಂಡಳಿಗಳು ಸ್ಪಷ್ಟಪಡಿಸಿವೆ.

    ಪಾಲಕರಿಂದಲೂ ಹಿಂಜರಿಕೆ: ಒಂದು ವೇಳೆ ಜೂನ್​ ಅಂತ್ಯಕ್ಕೆ ಪರಿಸ್ಥಿತಿ ಹತೋಟಿಗೆ ಬಂದರೂ ಚಿಕ್ಕಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂಜರಿಯುವುದು ಸಾಮಾನ್ಯ. ಅಲ್ಲದೆ ಮಕ್ಕಳು ರೋಗಬಾಧೆಗೆ ಒಳಗಾಗುವ ಸಂಭಾವ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಕೆಲಕಾಲ ಮಕ್ಕಳಿಗೆ ಶಾಲೆಗೆ ಬರುವುದರಿಂದ ವಿನಾಯ್ತಿ ನೀಡಬೇಕಾಗುತ್ತದೆ. ಹೀಗಾಗಿ ಆಗಸ್ಟ್​ನಿಂದಲೇ ಆರಂಭವಾಗುವಂತೆ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಬೇಕೆಂದು ಖಾಸಗಿ ಶಾಲಾಡಳಿತ ಮಂಡಳಿಗಳ ಒಕ್ಕೂಟ ಒತ್ತಾಯಿಸಿದೆ.

    ಶಾಲೆಗಳಲ್ಲಿ ಸಾಮಾಜಿಕ ಅಂತರ ಅಸಾಧ್ಯ: ಶಾಲೆಗಳ ಆರಂಭಕ್ಕೂ ಮುನ್ನ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲೇಬೇಕು. ಹೀಗಿದ್ದರೂ, ತರಗತಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗದು. ಅಂತೆಯೇ ಶಾಲಾ ವಾಹನಗಳನ್ನು ಪ್ರತ್ಯೇಕವಾಗಿ ಕೂರಿಸಿ ವ್ಯವಸ್ಥೆ ಮಾಡಲಾಗದು. ಈ ಎಲ್ಲ ಕಾರಣಗಳಿಂದ ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬಂದ ಮೇಲೆ, ವಾತಾವರಣ ಪೂರ್ಣಪ್ರಮಾನದಲ್ಲಿ ಸುರಕ್ಷಿತ ಎನಿಸಿದ ಮೇಲೆಯೇ ತರಗತಿಗಳನ್ನು ಆರಂಭಿಸಬಹುದು ಎನ್ನುತ್ತಾರೆ ಖಾಸಗಿ ಶಾಲೆಯೊಂದರ ಮುಖ್ಯಶಿಕ್ಷಕರು.

    ಈಗಾಗಲೇ ಎಸ್​ಎಸ್​ಎಲ್​ಸಿ ಪರೀಕ್ಷೆ ವಿಳಂಬವಾಗಿದೆ. ಇದರಿಮದ ಪ್ರಥಮ ವರ್ಷದ ಪಿಯು ಹಾಗೂ ಡಿಪ್ಲೊಮಾ ಪ್ರವೇಶದ ಮೇಲೆ ಪರಿಣಾಮ ಬೀರುತ್ತದೆ. ಅಂತೆಯೇ ದ್ವಿತೀಯು ಫಲಿತಾಂಶ ಪ್ರಕಟವಾಗದೆ, ಸಿಇಟಿ, ನೀಟ್​ ನಡೆದರೂ ಪ್ರಯೋಜನವಿಲ್ಲ. ಜತೆಗೆ, ಪದವಿ ಪ್ರವೇಶವೂ ಆರಂಭವಾಘುವಂತಿಲ್ಲ. ಹೀಗಾಗಿ ಎಲ್ಲ ಶೈಕ್ಷಣಿಕ ವೇಳಾಪಟ್ಟಿ ಅಸ್ತವ್ಯಸ್ತವಾಗುತ್ತದೆ. ಹೀಗಾಗಿ ಎಲ್ಲ ಶಿಕ್ಷಣ ಮಂಡಳಿಗಳು (ಸಿಬಿಎಸ್​ಇ, ಐಸಿಎಸ್​ಇ, ರಾಜ್ಯ ಹಾಗೂ ಇತರೆ)ಅನ್ವಯವಾಗುವಂತೆ ಏಕರೂಪದ ವೇಳಾಪಟ್ಟಿ ಪ್ರಕಟಿಸುವುದು ಅನಿವಾರ್ಯವಾಗಿದೆ ಎಂಬದು ಶಾಲಾಡಳಿತ ಮಂಡಳಿಗಳ ಅಭಿಪ್ರಾಯವಾಗಿದೆ.

    ಈ ವ್ಯಕ್ತಿಯ ದುರಾದೃಷ್ಟ ನೋಡಿ! – ಒಂದಿಲ್ಲೊಂದು ಕಾರಣಕ್ಕೆ ಕ್ವಾರಂಟೈನ್ ಅವಧಿ ವಿಸ್ತರಣೆಯಾಗ್ತಾ ಹೋಯಿತು..

    ಕ್ವಾರಂಟೈನ್ ನಿಯಮ ಪಾಲಿಸದವರಿಗೆ ಮಧ್ಯಪ್ರದೇಶ ಪೊಲೀಸರೊಂದು ಪಾಠ ಕಲಿಸಿದ್ರು: ಅದು ದೇಶಕ್ಕೇ ಮಾದರಿಯಾಗದಿದ್ದರೆ ಸಾಕು- ಅನ್ನಬಹುದೇನೋ ನಿಯಮ ಉಲ್ಲಂಘಕರು!

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂಗನವಾಡಿ ಹುದ್ದೆ ಅರ್ಜಿ ಸಲ್ಲಿಕೆಗೆ ಮೇ 13 ರವರೆಗೆ ಅವಕಾಶ, ಒಂದು ತಿಂಗಳು ಅವಧಿ ವಿಸ್ತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts