More

    ಪರೀಕ್ಷೆ ಬರೆಯಲು ಹೆಚ್ಚಿನ ಸಮಯ ಬೇಡಿದ ಮಕ್ಕಳಿಂದ ಕಲ್ಲು ತೂರಾಟ!

    ಇಂಪಾಲ್: ಮಣಿಪುರದ ರಾಜ್ಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದ 12ನೇ ತರಗತಿ ವಿದ್ಯಾರ್ಥಿಗಳು ಮಣಿಪುರಿ ಭಾಷಾ ಪರೀಕ್ಷೆಗೆ ಹೆಚ್ಚುವರಿ ಸಮಯವನ್ನು ಕೇಳಿದ್ದಾರೆ. ಆದರೆ ಅದನ್ನು ಶಿಕ್ಷಕರು ನಿರಾಕರಿಸಿದ್ದಕ್ಕೆ ಶಾಲಾ ಕಟ್ಟಡದಲ್ಲಿ ಕಲ್ಲು ತೂರಾಟ ಮಾಡಿ ಧ್ವಂಸಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರದ ತೌಬಲ್ ಜಿಲ್ಲೆಯ ಯೈರಿಪೋಕ್‌ನ ಎಸಿಎಂಇ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

    ಇದನ್ನೂ ಓದಿ: ನಾಳೆ ಬೆಳಗಾವಿಗೆ ಪ್ರಧಾನಿ ಮೋದಿ; ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಮುಂದೂಡಿಕೆ

    ಕೌನ್ಸಿಲ್ ಆಫ್ ಹೈಯರ್ ಸೆಕೆಂಡರಿ ಎಜುಕೇಶನ್ ಮಣಿಪುರ (COHSEM) ನಡೆಸುತ್ತಿರುವ ಪರೀಕ್ಷೆಯ ಮಣಿಪುರಿ ಪತ್ರಿಕೆಗೆ ಐದು ನಿಮಿಷಗಳು ಉಳಿದಿರುವಾಗ, ವಿದ್ಯಾರ್ಥಿಗಳು ಹೆಚ್ಚುವರಿ ಸಮಯವನ್ನು ನೀಡಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    “ಪರೀಕ್ಷೆಯ ಗಂಟೆ ಬಾರಿಸುತ್ತಿದ್ದಂತೆ, ಹಲವಾರು ವಿದ್ಯಾರ್ಥಿಗಳು ಹಿಂಸಾಚಾರಕ್ಕೆ ಇಳಿದರು. ವಿದ್ಯಾರ್ಥಿಗಳು ವಿವಿಧ ಕಾರಣಗಳಿಗಾಗಿ ಹೆಚ್ಚುವರಿ ಸಮಯವನ್ನು ಕೇಳಿದ್ದರು. ಈ ಸಂದರ್ಭ ಕಲ್ಲು ತೂರಾಟ ನಡೆಸಲಾಗಿದ್ದು, ಕಂಪ್ಯೂಟರ್, ಪೀಠೋಪಕರಣ ಸೇರಿದಂತೆ ಶಾಲೆಯ ಸ್ವತ್ತು ಧ್ವಂಸವಾಗಿದೆ ಎಂದು ಅಧಿಕಾರಿ ಹೇಳಿದರು.

    ಇದನ್ನೂ ಓದಿ: ಗದಗ: ವಿಶಾಸ್ವದಿಂದ ಪರೀಕ್ಷೆಯನ್ನು ಎದುರಿಸಬೇಕು: ನಿವೃತ್ತ ಮುಖ್ಯೋಪಾಧ್ಯಯ ಸಿ.ಸಿ.ಕುರಹಟ್ಟಿ

    ಈ ಅವ್ಯವಸ್ಥೆಯ ನಡುವೆ ಒಬ್ಬ ಮಹಿಳಾ ಶಿಕ್ಷಕಿ ಮತ್ತು 15 ವಿದ್ಯಾರ್ಥಿಗಳು ಮೂರ್ಛೆ ಹೋಗಿದ್ದು ಅವರನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಕೇಂದ್ರದಲ್ಲಿ ಒಟ್ಟು 405 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಹಿಂಸಾಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಎಂಟು ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.  (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts