More

    ನಕಲಿ ನಂಬರ್ ಪ್ಲೇಟ್ ದಂಧೆ; ರೋಚಕ ಟ್ವಿಸ್ಟ್ ಕೊಟ್ಟ ಹೈಗ್ರೌಂಡ್ ಪೊಲೀಸರು

    ಬೆಂಗಳೂರು: ನಕಲಿ ನಂಬರ್ ಪ್ಲೇಟ್ ದಂಧೆ ಹಿಂದೆ ಜೆಡಿಎಸ್ ಮುಖಂಡನೋರ್ವ ಇರುವ ಬಗ್ಗೆ ಹೈಗ್ರೌಂಡ್​ ಪೊಲೀಸರು ಭಾರೀ ಟ್ವಿಸ್ಟ್​ ನೀಡಿದ್ದಾರೆ. ಅದಲ್ಲದೇ ಬಂಧನಕ್ಕೆ ಒಳಗಾದ ವ್ಯಕ್ತಿ ಟಿಕೆಟ್​ ಆಕಾಂಕ್ಷಿಯೂ ಆಗಿದ್ದ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಕಾರಿನ ನಂಬರ್ ಪ್ಲೇಟ್​​ ಮೇಲೆ ‘ಪಪ್ಪಾ’ ಎಂದು ಬರೆಸಿದವನಿಗೆ ಬಿತ್ತು ದಂಡ

    ಎಂಎಲ್​ಸಿ ಬೋಜೆಗೌಡ ಕಾರು ನಂಬರ್ ಪ್ಲೇಟ್ ನಕಲಿ ಮಾಡಿದ ಪ್ರಕರಣಕ್ಕೆ ಹೈಗ್ರೌಂಡ್ ಪೊಲೀಸರು ರೋಚಕ ಟ್ವಿಸ್ಟ್ ಕೊಟ್ಟಿದ್ದು ಜೆಡಿಎಸ್ ಎಂಎಲ್​ಸಿ ಕಾರ್ ಕೇಸ್​ನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈಗ ವಿಧಾನಸಭಾ ಟಿಕೆಟ್​ಗಾಗಿ ಓಡುಡುತ್ತಿದ್ದ ಈತ ಕಂಬಿ ಹಿಂದೆ ಇದ್ದಾನೆ.

    ನಕಲಿ ನಂಬರ್ ಪ್ಲೇಟ್ ದಂಧೆ; ರೋಚಕ ಟ್ವಿಸ್ಟ್ ಕೊಟ್ಟ ಹೈಗ್ರೌಂಡ್ ಪೊಲೀಸರು

    ಅಸಲಿಗೆ ಕಾರ್ ನಂಬರ್ ಪ್ಲೇಟ್ ಚೇಂಜ್ ಮಾಡಿದ್ದು ಶೋ ರೂಮ್ ಮಾಲೀಕನಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಇಮ್ರಾನ್​ನನ್ನು ವಿಚಾರಿಸಿ ಮಂಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜು ಕೊಟ್ಟ ಹೇಳಿಕೆ ಆಧಾರದ ಮೇಲೆ ಶಬಾಜ್ ಎಂಬಾತನ ಬಂಧನವಾಗಿದೆ. ಹಲವು ಜೆಡಿಎಸ್ ನಾಯಕರೊಂದಿಗೆ ಕಾಣಿಸಿಕೊಂಡಿರುವ ಶಬಾಜ್, ಈ ನಕಲಿ ಕಾರನ್ನ ಮಾರಾಟ ಮಾಡಲು ಮಂಜು ಎನ್ನುವವರಿಗೆ ಕೊಟ್ಟಿದ್ದ.

    ಮಂಜು ಸೆಕೆಂಡ್ ಹ್ಯಾಂಡ್ ಕಾರ್ ಶೋ ರೂಮ್ ಮಾಲೀಕ ಇಮ್ರಾನ್​ಗೆ ಕೊಟ್ಟಿದ್ದ. ಸದ್ಯ ಮಂಜ ಹಾಗೂ ಶಬಾಜ್​ನನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ.

    ನಕಲಿ ನಂಬರ್ ಪ್ಲೇಟ್ ದಂಧೆ; ರೋಚಕ ಟ್ವಿಸ್ಟ್ ಕೊಟ್ಟ ಹೈಗ್ರೌಂಡ್ ಪೊಲೀಸರು

    ಇದನ್ನೂ ಓದಿ: ಬ್ಯಾಂಕ್ ಸಾಲದಿಂದ ತಪ್ಪಿಸಿಕೊಳ್ಳಲು ನಕಲಿ ನಂಬರ್ ಪ್ಲೇಟ್ ಬಳಕೆ​; ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ!

    ತನಿಖೆ ವೇಳೆ ಮೂಡಿದೆ ಶಬಾಜ್ ಮೇಲೆ ಅನುಮಾನ ಮೂಡಿದ್ದು ಇದೇ ರೀತಿ ಹಲವು ಕಾರ್ ಗಳ ನಂಬರ್ ನಕಲಿ ಪ್ಲೇಟ್ ಮಾಡಿ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿಯ ತನಕ ಕಾರು ಮಾಲೀಕ ಯಾರು ಎನ್ನುವುದು ತಿಳಿದಿಲ್ಲ. ಒಂದೇ ಕಲರ್ ಹಾಗೂ ಮಾಡೆಲ್​ನ ಕಾರ್ ನೋಡಿ ಆರೋಪಿ ನಂಬರ್ ಪ್ಲೇಟ್ ನಕಲಿ ಮಾಡಿದ್ದ. ಸದ್ಯ ಕಾರಿನ ಅಸಲಿಯತ್ತು ಪತ್ತೆ ಕಾರ್ಯಕ್ಕೆ ಮುಂದಾಗಿರುವ ಪೊಲೀಸರು ಚಾರ್ಸಿ ನಂಬರ್ ಮೂಲಕ ಕಾರು ಮಾಲೀಕನ ಪತ್ತೆಗೆ ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts