More

    ಕಾಶ್ಮೀರದ ಶಾಲೆಯೊಂದರ ಕಟ್ಟಡಕ್ಕೆ ಅಕ್ಷಯ್​ ಕುಮಾರ್​ ತಂದೆ ಹೆಸರು!

    ಶ್ರೀನಗರ: ಕಳೆದ ತಿಂಗಳಷ್ಟೇ ಅಕ್ಷಯ್​ ಕುಮಾರ್​ ಕಾಶ್ಮೀರಕ್ಕೆ ಹೋಗಿ, ಅಲ್ಲಿ ಬಾರ್ಡ್​ರ್​ ಸೆಕ್ಯುರಿಟಿ ಯೋಧರ (ಬಿಎಸ್​ಎಫ್​) ಯೋಧರ ಜತೆಗೆ ಒಂದು ದಿನ ಕಳೆದು ಬಂದಿದ್ದು ಗೊತ್ತಿದೆಯಲ್ಲ? ಯೋಧರ ಜತೆಗಿನ ಹಲವು ಫೋಟೋಗಳನ್ನು ಅಕ್ಷಯ್​ ಕುಮಾರ್​, ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ಅಲ್ಲಿ ಶಾಲೆಯೊಂದರ ನಿರ್ಮಾಣಕ್ಕೆ ಒಂದು ಕೋಟಿ ದೇಣಿಗೆ ಕೊಟ್ಟಿದ್ದರು.

    ಇದನ್ನೂ ಓದಿ: ಲೀಕ್ ಆಯ್ತು ಕೃತಿ ಸನೋನ್ ಅಭಿನಯದ ಮಿಮಿ

    ಈಗ ಆ ಶಾಲೆಯ ಶಂಕುಸ್ಥಾಪನೆ ಮಂಗಳವಾರ ಸದ್ದಿಲ್ಲದೆ ಮುಗಿದಿದೆ. ಈ ಶಂಕುಸ್ಥಾಪನೆ ಕಾರ್ಯಕ್ರಮವು ವರ್ಚ್ಯುಯಲ್​ ಆಗಿ ನಡೆದಿದ್ದು, ಈ ಸಂದರ್ಭದಲ್ಲಿ ಅಕ್ಷಯ್​ ಕುಮಾರ್​ ಸಹ ಭಾಗವಹಿಸಿದ್ದಾರೆ. ವಿಶೇಷವೆಂದರೆ, ಸರ್ಕಾರಿ ಶಾಲೆಯಲ್ಲಿ ಒಂದು ಪ್ರತ್ಯೇಕ್​ ಬ್ಲಾಕ್​ ನಿರ್ಮಿಸಲಾಗುತ್ತಿದ್ದು, ಅದಕ್ಕೆ ಅಕ್ಷಯ್​ ಕುಮಾರ್​ ಅವರ ತಂದೆಯ ಹೆಸರನ್ನು ಇಡಲಾಗಿದೆ. ಆ ವಿಭಾಗಕ್ಕೆ ಹರಿ ಓಂ ಭಾಟಿಯ ಎಜುಕೇಶನ್​ ಬ್ಲಾಕ್​ ಎಂದು ನಾಮಕರಣ ಮಾಡಲಾಗಿದೆ.

    ಇದನ್ನೂ ಓದಿ: ರಜನಿಕಾಂತ್​-ದೀಪಿಕಾ ಪಡುಕೋಣೆ ರೊಮ್ಯಾನ್ಸ್

    ಈ ಕುರಿತು ಕಾಶ್ಮೀರದ ಬಿಎಸ್​ಎಫ್​ ಘಟಕವು ಟ್ವೀಟ್​ ಮಾಡಿದ್ದು, ಇಂದು ಕಾಶ್ಮೀರದ ಸರ್ಕಾರಿ ಶಾಲೆಯಲ್ಲಿ ಹರಿ ಓಂ ಭಾಟಿಯಾ ಎಚುಕೇಶನ್​ ಬ್ಲಾಕ್​ಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಸಂದರ್ಭದಲ್ಲಿ ಅಕ್ಷಯ್​ ಕುಮಾರ್​, ಬಿಎಸ್​ಎಫ್​ನ ಡಿಜಿ ರಾಕೇಶ್ ಅಸ್ತಾನಾ ಸೇರಿದಂತೆ ಹಲವರು ಹಾಜರಿದ್ದರು ಎಂದು ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡಿದೆ.

    ‘ವಿಶಿಂಗ್​ ಯೂ ದಿ ಬೆಸ್ಟ್​ ಮಾಮಾ …’ ಎಂದು ಅಭಿನಂದಿಸಿದ ಸುದೀಪ್​

    ಶಚಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts