More

    29ರಿಂದ ಹಜ್ ಯಾತ್ರೆ ಶುರು- 1,000 ಯಾತ್ರಿಗಳಿಗಷ್ಟೇ ಅವಕಾಶ

    ರಿಯಾದ್: ಕರೊನಾ ವೈರಸ್​ ಸೋಂಕಿ ಕಾರಣ ಈ ವರ್ಷ ಹಜ್​ ಯಾತ್ರೆ ಕಟ್ಟುನಿಟ್ಟಿನ ನಿಯಮಾವಳಿಯೊಂದಿಗೆ ಇದೇ ತಿಂಗಳ 29ರಿಂದ ಶುರುವಾಗಲಿದೆ. ಆದರೆ, ಈ ಬಾರಿ 65 ವರ್ಷದ ಒಳಗಿನವರಿಗಷ್ಟೇ ಅವಕಾಶ. ಸಂಖ್ಯಾ ಮಿತಿಯನ್ನೂ ಹೇರಲಾಗಿದ್ದು 1,000 ಯಾತ್ರಿಗಳಿಗೆ ಮಾತ್ರವೇ ಈ ಬಾರಿ ಅವಕಾಶ ಸಿಗಲಿದೆ ಎಂದು ಹಜ್ ಸಚಿವಾಲಯ ಘೋಷಿಸಿದೆ.

    ಈಗಾಗಲೇ ಪವಿತ್ರ ಯಾತ್ರ ಸ್ಥಳವನ್ನು ಶುಚಿಗೊಳಿಸುವ ಕಾರ್ಯ ನಡೆದಿದ್ದು, ಹಬ್ಬದ ಮೊದಲ ದಿನವಾದ ಗುರುವಾರ ಮೌಂಟ್ ಅರಾಫತ್ ಸಂದರ್ಭದಲ್ಲಿ ಹಜ್ ವಿಧಿ ವಿಧಾನಗಳನ್ನು ಪೂರೈಸುವ ಸಂದರ್ಭದಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾಗದಂತೆ ಮುಂಜಾಗ್ರತಾ ಕ್ರಮವನ್ನೂ ತೆಗೆದುಕೊಳ್ಳಲಾಗಿದೆ. ಈ ಸಲ ವೈದ್ಯಕೀಯ ಮತ್ತು ಭದ್ರತಾ ಕ್ಷೇತ್ರದವರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಸರ್ಕಾರ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ಮಾಹಿತಿಯನ್ನು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

    ಇದನ್ನೂ ಓದಿ: ಮೊದಲ ಬ್ಯಾಚ್​ನ 5 ರಫೆಲ್​ ಜೆಟ್​ಗಳು ಜುಲೈ ಅಂತ್ಯಕ್ಕೆ ಸೇನೆ ಸೇರ್ಪಡೆ

    ಅರಬ್ ಗಲ್ಫ್ ರಾಜ್ಯಗಳಲ್ಲಿ ಪೈಕಿ ಇಲ್ಲಿಯೇ ಗರಿಷ್ಠ 2,523 ಮರಣ ಪ್ರಮಾಣವೂ ಸೇರಿ 2,53,349 ಕೋವಿಡ್ ಪ್ರಕರಣ ದಾಖಲಾಗಿವೆ. ಈಗಾಗಲೇ ರಾಜ್ಯಕ್ಕೆ ಆಗಮಿಸಿರುವ 1,000 ಯಾತ್ರಿಕರಿಗಷ್ಟೇ ಹಜ್ ಕೈಗೊಳ್ಳುವುದಕ್ಕೆ ಅವಕಾಶ ನೀಡಲಾಗುವುದು. ಈ ಪೈಕಿ ಶೇಕಡ 70 ವಿದೇಶೀಯರು ಮತ್ತು ಶೇಕಡ 30 ಸೌದಿಗಳಿದ್ದಾರೆ ಎಂದು ಸಚಿವಾಲಯ ಘೋಷಿಸಿದೆ. ಈ ನಡುವೆ, ಕೆಲವು ಮಾಧ್ಯಮ ವರದಿಗಳ ಪ್ರಕಾರ 10,000 ಯಾತ್ರಿಗಳು ಹಜ್​ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. (ಏಜೆನ್ಸೀಸ್)

    ಹಿಂದು ಮಹಾಸಾಗರ ಗಸ್ತಿಗೆ ಅಗತ್ಯ ಕಿಲ್ಲರ್​ P-8I ಏರ್​ಕ್ರಾಫ್ಟ್​ಗಳು ಶೀಘ್ರ ಭಾರತಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts