More

    ವಕೀಲ ಸಲ್ಲಿಸಿದ ಪಿಐಎಲ್​ ನೋಡಿ ಕೆಂಡಾಮಂಡಲವಾಯಿತು ಸುಪ್ರೀಂ !

    ನವದೆಹಲಿ: ಎಷ್ಟೋ ಸಲ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್​) ಗಳು ದುರ್ಬಳಕೆಯಾಗುವುದು ನಡೆದೇ ಇದೆ. ಈ ಬಗ್ಗೆ ಅರಿವಿದ್ದೋ ಇಲ್ಲದೆಯೋ ಕೆಲವು ವಕೀಲರು ಸಲ್ಲಿಸುವ ಪಿಐಎಲ್​ ಗಳು ನ್ಯಾಯಪೀಠದ ಅಸಮಾಧಾನಕ್ಕೆ ಕಾರಣವಾಗುತ್ತವೆ. ಅಂಥದ್ದೇ ಒಂದು ಪ್ರಕರಣ ಇದು.

    ದೇಶಾದ್ಯಂತ ಐಐಟಿಗಳಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿವೆ. ದೇಶದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ 50 ಐಐಟಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವಾಲಯ, ಐಐಟಿಗಳು ಸ್ಟೂಡೆಂಟ್ಸ್ ವೆಲ್​ನೆಸ್ ಪ್ರೋಗ್ರಾಂ ಅನ್ನು ಆರಂಭಿಸುವಂತೆ ನಿರ್ದೇಶನ ನೀಡಬೇಕು ಎಂದು ವಕೀಲ ಗೌರವ್ ಬನ್ಸಾಲ್ ಪಿಐಎಲ್ ಸಲ್ಲಿಸಿದ್ದರು.

    ಇದನ್ನೂ ಓದಿ: ಶಾಸಕ ನಾರಾಯಣರಾವ್ ಆರೋಗ್ಯ ಸ್ಥಿತಿ ಚಿಂತಾಜನಕ

    ನ್ಯಾಯಮೂರ್ತಿಗಳಾದ ಆರ್​ ಎಫ್ ನಾರಿಮನ್ , ನವೀನ್​ ಸಿನ್ಹಾ, ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ನ್ಯಾಯಪೀಠದ ಎದುರು ಈ ಅರ್ಜಿ ವಿಚಾರಣೆಗೆ ಬಂದಿತ್ತು. ಇದನ್ನು ನೋಡುತ್ತಲೇ, ನ್ಯಾಯಮೂರ್ತಿ ನಾರಿಮನ್ ಅವರು, ಇದೊಂದು ಕ್ಷುಲ್ಲಕ ಅರ್ಜಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಇದನ್ನು ಪಿಐಎಲ್ ಆಗಿ ಸಲ್ಲಿಸಿದ್ದಕ್ಕೆ ಎಷ್ಟು ದಂಡ ವಿಧಿಸಲಿ ನಿಮಗೆ ಎಂದು ವಕೀಲರನ್ನು ಕೇಳಿದರು. ಅಲ್ಲದೆ, ಅರ್ಜಿಯನ್ನು ವಜಾಗೊಳಿಸಿ ಪ್ರಕರಣದ ವೆಚ್ಚವಾಗಿ 10,000 ರೂಪಾಯಿಯನ್ನು ಪಾವತಿಸುವಂತೆ ವಕೀಲರಿಗೆ ತಾಕೀತು ಮಾಡಿದರು. (ಏಜೆನ್ಸೀಸ್)

    ಇಂದಿನಿಂದ ಕುಕ್ಕೆಯಲ್ಲಿ 3 ಪಾಳಿಯಲ್ಲಿ ಆಶ್ಲೇಷ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts