More

    ಎಸ್​ಎಂಎಸ್​, ವಾಟ್ಸ್​ಆ್ಯಪ್​, ಇಮೇಲ್​ ಮೂಲಕ ಸಮನ್ಸ್ – ಸುಪ್ರೀಂ ಕೋರ್ಟ್​ ಒಲವು

    ನವದೆಹಲಿ: ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಕೆಲಸ ಎಲ್ಲ ಕ್ಷೇತ್ರಗಳಲ್ಲೂ ಆಗುತ್ತಿದೆ. ಸುಪ್ರೀಂ ಕೋರ್ಟ್​ ಕೂಡ ಈ ಬಗ್ಗೆ ಒಲವು ತೋರಿದೆ. ಎಸ್​ಎಂಎಸ್​, ವಾಟ್ಸ್​ಆ್ಯಪ್​, ಇಮೇಲ್ ಮೂಲಕ ಸಮನ್ಸ್ ಜಾರಿಗೊಳಿಸುವ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್​ ಮಂಗಳವಾರ ಒಲವು ತೋರಿಸಿ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಈ ಬಗ್ಗೆ ಎಲ್ಲ ಹೈಕೋರ್ಟ್ ಮತ್ತು ರಾಜ್ಯ ಡಿಜಿಪಿಗಳಿಂದ ಪ್ರತಿಕ್ರಿಯೆಯನ್ನು ಬಯಸಿದೆ.

    ಮುಖ್ಯನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ಮತ್ತು ನ್ಯಾಯಮೂರ್ತಿ ಎಲ್​. ನಾಗೇಶ್ವರ ರಾವ್​ ಅವರನ್ನು ಒಳಗೊಂಡ ನ್ಯಾಯಪೀಠ ಕ್ರಿಮಿನಲ್ ವಿಚಾರಣೆಗಳಲ್ಲಿರುವ ಕೊರತೆಗಳನ್ನು ನಿವಾರಿಸುವುದು ಮತ್ತು ಕ್ರಿಮಿನಲ್​ ಕೇಸ್​ಗಳ ವಿಚಾರಣೆಯಲ್ಲಿ ಪ್ರಗತಿಯನ್ನು ಖಾತರಿಪಡಿಸುವುದಕ್ಕಾಗಿ ಸಾಧ್ಯವಿರುವ ವಿವಿಧ ಕ್ರಮಗಳನ್ನು ಪರಿಶೀಲಿಸುತ್ತಿದ್ದ ವೇಳೆ ಕೋರ್ಟ್ ಈ ಸೂಚನೆ ನೀಡಿದೆ.

    ಇದನ್ನೂ ಓದಿ: ರಕ್ಷಣಾ ಸಂಬಂಧಕ್ಕೆ ಬಲ: ಭಾರತ-ಅಮೆರಿಕ ನಡುವೆ 2+2 ಸಭೆ, ಮಹತ್ವದ ನಿರ್ಧಾರ

    ಚೆಕ್​ಬೌನ್ಸ್ ಕೇಸ್ ಮತ್ತು ಇತರೆ ಪ್ರಕರಣಗಳಿಗೆ ಸಂಬಂಧಿಸಿ ಸಮನ್ಸ್ ಜಾರಿಗೊಳಿಸುವುದಕ್ಕೆ ಡಿಜಿಟಲ್ ಪ್ಲಾಟ್​ಫಾರಂ ಬಳಸುವುದಕ್ಕೆ ಅಮಿಕಸ್ ಕ್ಯೂರಿಯೂ ಆಗಿರುವ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಲೂತ್ರಾ ಮತ್ತು ವಕೀಲ ಕೆ.ಪರಮೇಶ್ವರ್​ ಸಲ್ಲಿಸಿದ್ದ ವರದಿಯನ್ನು ಗಮನಿಸಿ ನಾಲ್ಕು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಪೀಠ, ಹೈಕೋರ್ಟ್ ಮತ್ತು ರಾಜ್ಯಗಳ ಡಿಜಿಪಿಗಳಿಗೆ ಸೂಚಿಸಿದೆ. (ಏಜೆನ್ಸೀಸ್)

    ಜಮ್ಮು-ಕಾಶ್ಮೀರದ ಬದ್ಗಾಂನಲ್ಲಿ ಇಬ್ಬರು ಉಗ್ರರ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts