More

    ಯೆಸ್​ ಬ್ಯಾಂಕ್​ ಗ್ರಾಹಕರೇ ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ: ಎಸ್​ಬಿಐ ಅಧ್ಯಕ್ಷರಿಂದ ಭರವಸೆ

    ನವದೆಹಲಿ: ಯೆಸ್​ ಬ್ಯಾಂಕ್​ ಆರ್ಥಿಕವಾಗಿ ದಿವಾಳಿಯಾಗಿದ್ದು, ಭಾರತೀಯ ರಿಸರ್ವ್​ ಬ್ಯಾಂಕ್​ ಅದರ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಬ್ಯಾಂಕ್​ನ ಸುಪರ್ದಿಗೆ ತೆಗೆದುಕೊಂಡಿದೆ. ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ(ಎಸ್​ಬಿಐ)ಕ್ಕೆ ಯೆಸ್​ ಬ್ಯಾಂಕ್​ನ ಮೇಲೆ ಹೂಡಿಕೆ ಮಾಡುವಂತೆ ಆರ್​ಬಿಐ ತಿಳಿಸಿದೆ. ಹಾಗಾಗಿ ಯೆಸ್​ ಬ್ಯಾಂಕ್​ನ ಗ್ರಾಹಕರು ಹೆದರುವ ಅವಶ್ಯಕತೆ ಇಲ್ಲ ಎಂದು ಎಸ್​ಬಿಐನ ಮುಖ್ಯಸ್ಥ ರಜನೀಶ್​ ಕುಮಾರ್​ ತಿಳಿಸಿದ್ದಾರೆ.

    ಖಾಸಗಿ ಸುದ್ದಿ ವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ರಜನೀಶ್​ ಕುಮಾರ್​, “ಎಸ್​ಬಿಐ ಹೆಜ್ಜೆ ಇಟ್ಟಿದೆ ಎಂದರೆ ಅಲ್ಲಿ ಗ್ರಾಹಕರು ಹೆದರುವ ಅವಶ್ಯಕತೆ ಇರುವುದಿಲ್ಲ. ಯೆಸ್​ ಬ್ಯಾಂಕ್​ನ ಆಡಳಿತ ವ್ಯವಸ್ಥೆಯನ್ನು ನಾವು ಸುಧಾರಿಸುತ್ತೇವೆ. ಗ್ರಾಹಕರು ಹೆದರಬೇಡಿ.” ಎಂದು ಹೇಳಿದ್ದಾರೆ.

    ಆರ್​ಬಿಐ ತಮಗೆ ಯೆಸ್​ ಬ್ಯಾಂಕ್​ನ ಮೇಲೆ 10,000 ಕೋಟಿ ಹಣವನ್ನು ಹೂಡಿಕೆ ಮಾಡಲು ಹೇಳಿದೆ. ಆದರೆ ಯೆಸ್​ ಬ್ಯಾಂಕ್​ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕನಿಷ್ಠ 20ರಿಂದ 22 ಸಾವಿರ ಕೋಟಿ ಹಣದ ಅಗತ್ಯತೆ ಇದೆ. ಅದಕ್ಕೆ ಹೂಡಿಕೆ ಮಾಡಲು ಅನೇಕ ಹೂಡಿಕೆದಾರರು ಸಿದ್ಧರಾಗಿದ್ದಾರೆ. ನಾವು, ಆರ್​ಬಿಐ ಮತ್ತು ಸರ್ಕಾರ ಮೂವರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಆರ್​ಬಿಐ ಜತೆ ನಿಕಟ ಸಂಬಂಧ ಹೊಂದಿರುವ ನಾವು ಸಮಸ್ಯೆಯನ್ನು ಬಗೆಹರಿಸುತ್ತೇವೆ. ಇನ್ನು ಒಂದು ವಾರದಲ್ಲಿ ಹಣ ಮರುಪಡೆಯುವಿಕೆಯ ಮೇಲಿರುವ ನಿರ್ಬಂಧವನ್ನು ತೆಗೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಯೆಸ್​ ಬ್ಯಾಂಕ್​ ಸಂಸ್ಥಾಪಕನ ಬೆನ್ನತ್ತಿದ ಇ.ಡಿ., ಸಿಬಿಐ ಅಧಿಕಾರಿಗಳು; ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ ಪುತ್ರಿ ರೋಶಿಣಿ ಕಪೂರ್​

    ಗ್ರಾಹಕರೇ ಎಚ್ಚರ, ಮಾ.16ರ ನಂತರ ನಿಮ್ಮ ಡೆಬಿಟ್​, ಕ್ರೆಡಿಟ್​ ಕಾರ್ಡ್​ ನಿಷ್ಕ್ರಿಯಗೊಳ್ಳಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts