More

    ಮೆಟ್ರೊ ಸ್ಟೇಷನ್​ಗಳಲ್ಲಿ ಸಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್ ಅಳವಡಿಕೆ

    ಚೆನ್ನೈ: ಮಹಿಳೆಯರಿಗೆ ರೈಲು ಪ್ರಯಾಣದಲ್ಲಿ ಅನುಕೂಲಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿ ಚೆನ್ನೈ ಮೆಟ್ರೊ ರೈಲ್ ಲಿಮಿಟೆಡ್(ಸಿಎಂಆರ್​ಎಲ್) ಚೆನ್ನೈ ನಗರದ 39 ರೈಲು ನಿಲ್ದಾಣಗಳಲ್ಲಿ ಸಾನಿಟರಿ ಪಾಡ್ ವೆಂಡಿಂಗ್ ಮೆಷಿನ್​ಗಳನ್ನು ಅಳವಡಿಸುತ್ತಿದೆ. ಜಿಯೊ ಇಂಡಿಯ ಫೌಂಡೇಶನ್ ಮತ್ತು ರೋಟರಿ ಇಂಟರ್​ನ್ಯಾಷನಲ್ ಸಹಯೋಗದೊಂದಿಗೆ ಸಿಎಂಆರ್​ಎಲ್​ ಈ ಯೋಜನೆಯನ್ನು ಕೈಗೊಂಡಿದೆ.

    ಕೆಲವು ತಿಂಗಳ ಹಿಂದೆ ಸಿಎಂಆರ್​ಎಲ್ ಮೆಟ್ರೋ ರೈಲಿನಲ್ಲಿ ಹಾಲಿ ಇರುವ ಮಹಿಳಾ ಬೋಗಿಗಳೊಂದಿಗೆ ಎಲ್ಲಾ ಫಸ್ಟ್​ ಕ್ಲಾಸ್​ ಬೋಗಿಗಳನ್ನು ಮಹಿಳೆಯರಿಗೇ ಮೀಸಲಾದ ಬೋಗಿಗಳನ್ನಾಗಿ ಪರಿವರ್ತಿಸಿತ್ತು. ಇದೀಗ ಮಹಿಳಾ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವನ್ನು ಕಲ್ಪಿಸಲು ಮುಂದಾಗಿದೆ. ತಮಿಳುನಾಡು ಕೈಗಾರಿಕಾ ಸಚಿವ ಎಂ.ಸಿ.ಸಂಪತ್ ಈ ವ್ಯವಸ್ಥೆಯನ್ನು ಚೆನ್ನೈ ಮುಖ್ಯ ಮೆಟ್ರೋ ನಿಲ್ದಾಣದಲ್ಲಿ ಮಂಗಳವಾರ ಉದ್ಘಾಟಿಸಿದರು.

    ಇದನ್ನೂ ಓದಿ: ಡ್ಯೂಟಿ ಮಧ್ಯೆ ಮುಟ್ಟಾದರೆ…?! ಮಹಿಳಾ ಪೊಲೀಸರಿಗೆ ಸಿಕ್ಕಿದೆ ಪರಿಹಾರ

    ಸದರಿ ವೆಂಡಿಂಗ್ ಮೆಷಿನ್​ಗಳಲ್ಲಿ ಒಮ್ಮೆಗೆ 20 ಪ್ಯಾಡ್​ಗಳನ್ನು ಶೇಖರಿಸಿಡುವ ಅವಕಾಶವಿದ್ದು, ರೀಫಿಲ್​ಗಾಗಿ ಪ್ರತಿ ನಿಲ್ದಾಣದ ಅಧಿಕಾರಿಗಳಿಗೆ 1,000 ಪ್ಯಾಡ್​ಗಳನ್ನು ಒದಗಿಸಲಾಗಿರುತ್ತದೆ. ಮಹಿಳಾ ಶೌಚಾಲಯಗಳ ಬಳಿ ಅಳವಡಿಸಲಾಗುವ ಈ ಮೆಷಿನ್​ಗಳಲ್ಲಿ ಪ್ರಯಾಣಿಕರು ಅವಶ್ಯಕತೆ ಬಿದ್ದಾಗ ನಾಣ್ಯವನ್ನು ಹಾಕಿ, ಪ್ಯಾಡ್ ಪಡೆಯಬಹುದು ಎನ್ನಲಾಗಿದೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ

    ಉನ್ನತ ಪೊಲೀಸ್ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

    ದೆಹಲಿಗೆ ಹೋಗುವ ಪ್ರಯಾಣಿಕರಿಗೆ ಬೇಕು ಕರೊನಾ ನೆಗೆಟೀವ್ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts