More

    ಸೋಷಿಯಲ್​ ಮೀಡಿಯಾದಲ್ಲಿ ಆರ್​. ಅಶ್ವಿನ್​-ಸಂಜಯ್​ ಮಂಜ್ರೇಕರ್​ ನಡುವೆ ವಾರ್​!

    ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಸ್ಪಿನ್ನರ್​ ಆರ್​. ಅಶ್ವಿನ್​ ಮತ್ತು ಖ್ಯಾತ ವೀಕ್ಷಕ ವಿವರಣೆಕಾರ ಸಂಜಯ್​ ಮಂಜ್ರೇಕರ್​ ನಡುವೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ವಾಕ್ಸಮರ ಕ್ರಿಕೆಟ್​ ಪ್ರೇಮಿಗಳಿಗೆ ಪುಕ್ಕಟೆ ಮನರಂಜನೆ ನೀಡುತ್ತಿದೆ. ಆರ್​. ಅಶ್ವಿನ್​ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಗೆ ಸೇರಿಸಲಾರೆ ಎಂದು ಸಂಜಯ್​ ಮಂಜ್ರೇಕರ್​ ಇತ್ತೀಚೆಗೆ ಹೇಳಿಕೆ ನೀಡಿದ ಬಳಿಕ ಈ ವಾರ್​ ಶುರುವಾಗಿದ್ದು, ತಮಿಳು ಸಿನಿಮಾದ ಡೈಲಾಗ್​ಗಳ ಮೀಮ್ಸ್​ ಬಳಕೆಯೊಂದಿಗೆ ಇವರಿಬ್ಬರ ನಡುವೆ ವಾಗ್ಯುದ್ಧ ಮುಂದುವರಿದಿದೆ.

    ಅಶ್ವಿನ್​ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರರು ಎಂದು ಜನರು ಕರೆಯುವಾಗ ನನಗೆ ಸಮಸ್ಯೆ ಎದುರಾಗುತ್ತದೆ. ಅಶ್ವಿನ್​ ಬೌಲಿಂಗ್​ನ ಒಂದು ಪ್ರಮುಖ ಸಮಸ್ಯೆ ಎಂದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​, ನ್ಯೂಜಿಲೆಂಡ್​ ಮತ್ತು ಅಸ್ಟ್ರೆಲಿಯಾದಲ್ಲಿ ಅವರು ಒಮ್ಮೆಯೂ 5 ವಿಕೆಟ್​ ಗೊಂಚಲು ಪಡೆದಿಲ್ಲ. ಇನ್ನು ಕಳೆದ 4 ವರ್ಷಗಳಲ್ಲಿ ಭಾರತೀಯ ಪಿಚ್​ಗಳಲ್ಲಿ ಅವರ ನಿರ್ವಹಣೆ ನೋಡಿದರೆ, ರವೀಂದ್ರ ಜಡೇಜಾ ಕೂಡ ಅವರ ಸಾಮರ್ಥ್ಯಕ್ಕೆ ಸರಿಸಮಾನ ನಿರ್ವಹಣೆ ತೋರಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್​ ವಿರುದ್ಧ ತವರಿನ ಸರಣಿಯಲ್ಲಿ ಅರ್​ ಪಟೇಲ್​ ಅಂಥದ್ದೇ ಪಿಚ್​ನಲ್ಲಿ ಅಶ್ವಿನ್​ಗಿಂತ ಹೆಚ್ಚು ವಿಕೆಟ್​ ಕಬಳಿಸಿದ್ದರು ಎಂದು ಸಂಜಯ್​ ಮಂಜ್ರೇಕರ್​ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ಅಶ್ವಿನ್​ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

    ಇದನ್ನೂ ಓದಿ: ಒಲಿಂಪಿಕ್ಸ್​ ವೇಳೆ ಕ್ರೀಡಾಪಟುಗಳಿಗೆ 1.60 ಲಕ್ಷ ಕಾಂಡೋಮ್​ ವಿತರಣೆ, ಆದರೆ ಬಳಸುವಂತಿಲ್ಲ!

    ಆಗ ಟ್ವಿಟರ್​ನಲ್ಲೂ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಂಜಯ್​ ಮಂಜ್ರೇಕರ್​, ಸಾರ್ವಕಾಲಿಕ ಶ್ರೇಷ್ಠ ಎನ್ನುವುದು ಕ್ರಿಕೆಟಿಗನೊಬ್ಬನಿಗೆ ನೀಡಲಾಗುವ ಅತ್ಯುನ್ನತ ಪ್ರಶಂಸೆ. ಡಾನ್​ ಬ್ರಾಡ್ಮನ್​, ಸೋಬರ್ಸ್​, ಗಾವಸ್ಕರ್​, ತೆಂಡುಲ್ಕರ್​, ವಿರಾಟ್​ ಕೊಹ್ಲಿ ಮುಂತಾದವರು ನನ್ನ ಪುಸ್ತಕದಲ್ಲಿ ಸಾರ್ವಕಾಲಿಕ ಶ್ರೇಷ್ಠರು. ಅಪಾರ ಗೌರವದೊಂದಿಗೆ ನಾನು ಹೇಳುವುದೇನೆಂದರೆ, ಅಶ್ವಿನ್​ ಇನ್ನೂ ಸಾರ್ವಕಾಲಿಕ ಶ್ರೇಷ್ಠರೆನಿಸುವ ಎತ್ತರಕ್ಕೆ ಏರಿಲ್ಲ ಎಂದು ಟ್ವೀಟಿಸಿದ್ದರು.

    ಮಂಜ್ರೇಕರ್​ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದ ಅಶ್ವಿನ್​, ತಮಿಳು ಸಿನಿಮಾ ಅನ್ನಿಯನ್​ನ ಮೀಮ್ಸ್​ ಅನ್ನು ಟ್ವೀಟಿಸಿದ್ದರು. ದಯವಿಟ್ಟು ಹಾಗೆ ಹೇಳಬೇಡ, ಹೃದಯಕ್ಕೆ ನೋವಾಗುತ್ತದೆ ಎಂದು ಸಿನಿಮಾದಲ್ಲಿ ನಾಯಕನಟ ವಿಕ್ರಮ್​, ಸಹನಟ ವಿವೇಕ್​ಗೆ ಹೇಳುವ ತಮಿಳು ಡೈಲಾಗ್​ ಅನ್ನು ಅದರಲ್ಲಿತ್ತು. ಟ್ವಿಟರ್​ನಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ಮಂಜ್ರೇಕರ್​, ಇತ್ತೀಚೆಗಿನ ದಿನಗಳಲ್ಲಿ ನೇರಮಾತಿನ ಕ್ರಿಕೆಟ್​ ವಿಶ್ಲೇಷಣೆಗಳಿಗೆ ಗಲಾಟೆ ಶುರುವಾದಾಗ ನನ್ನ ಹೃದಯಕ್ಕೂ ನೋವಾಗುತ್ತದೆ ಎಂದು ಟ್ವೀಟಿಸಿದ್ದಾರೆ. ಈ ವಾಗ್ವಾದ ಮುಂದೆಯೂ ಮುಂದುವರಿಯಲಿದೆಯೇ ಎಂಬುದನ್ನು ಕ್ರಿಕೆಟ್​ ಪ್ರೇಮಿಗಳು ಕಾದು ನೋಡಬೇಕಾಗಿದೆ.

    ಕೊಹ್ಲಿ-ಅನುಷ್ಕಾ ದಂಪತಿಯ ಪುತ್ರಿ ವಾಮಿಕಾ ಫೋಟೋ ಸೋರಿಕೆಯಾಯಿತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts