

ಬೆಂಗಳೂರು: ಕೋವಿಡ್ ಸೋಂಕು ಮಣಿಸುವ ಹೋರಾಟಕ್ಕೆ ಈಗ ಡ್ರೋನ್ ಎಂಟ್ರಿ ಕೊಟ್ಟಿದೆ.
ರಾಜ್ಯ ರಾಜಧಾನಿಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಡ್ರೋನ್ ಮೂಲಕ ಸಾವಯವ ಔಷಧ ಸಿಂಪಡಣೆ ಮಾಡುವ ಕಾರ್ಯಕ್ಕೆ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಶನಿವಾರ ಚಾಲನೆ ನೀಡಿದ್ದು, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಡ್ರೋನ್ ಹೊರಾಟ ಆರಂಭವಾಗಿದೆ.
ಭಾನುವಾರದಿಂದ ಪೂರ್ಣ ಪ್ರಮಾಣದಲ್ಲಿ ಇಡೀ ಕ್ಷೇತ್ರದಾದ್ಯಂತ ಸಾವಯವ ಔಷಧವನ್ನು ಡ್ರೋನ್ ಮೂಲಕ ಸಿಂಪಡಣೆ ಮಾಡಲಾಗುವುದು. ಇದರಿಂದ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಬಹುದು ಎಂದು ಡಿಸಿಎಂ ಹೇಳಿದರು.
ಕರೊನಾ ಸೋಂಕಿನ ಕಾಯಿಲೆ ಆಗಿರುವುದರಿಂದ ಇದನ್ನು ತಡೆಯುವ ನಿಟ್ಟಿನಲ್ಲಿ ತಾಂತ್ರಿಕವಾಗಿ ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಾವು ಮುಕ್ತವಾಗಿ ಪ್ರಯತ್ನಿಸಬೇಕು ಎಂದರು.
ಟೀಮ್ ದಕ್ಷ ಮತ್ತು ಸುಗಾರ್ಧನ ಸಂಸ್ಥೆ ಜಂಟಿಯಾಗಿ ಡ್ರೋನ್ಗಳನ್ನು ಒದಗಿಸಿದ್ದು, ಔಷಧ ಸಿಂಪಡಣೆಗೆ ನೆರವಾಗಿವೆ. ನಾಳೆ ಇಡೀ ದಿನ ಮಲ್ಲೇಶ್ವರ ಕ್ಷೇತ್ರದ ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಔಷಧ ಸಿಂಪಡಣೆ ನಡೆಯಲಿದೆ.