More

    ನಟಿಯರ ಹಸಿರು ಪ್ರೀತಿ: ಹಿತ್ತಲು, ತಾರಸಿಯಲ್ಲಿ ಫಲ-ಪುಷ್ಪಗಳ ಘಮ

    ನಟಿಯರೆಂದರೆ ನಟನೆ ಬಗ್ಗೆ ಮಾತ್ರ ಆಸಕ್ತಿ ಹೊಂದಿರುತ್ತಾರೆ ಎಂಬುದು ಕೆಲವರ ಅಭಿಪ್ರಾಯ. ನಟನೆ ಹೊರತಾಗಿ ಅವರ ಆಸಕ್ತಿ ಕ್ಷೇತ್ರಗಳು ಸಾಕಷ್ಟು ಇರುತ್ತವೆ. ಅಂತಹದರಲ್ಲಿ ಕೆಲವು ಅಡುಗೆ, ನೃತ್ಯ, ಯೋಗ, ತಂತ್ರಜ್ಞಾನ ಇತ್ಯಾದಿ. ಇವುಗಳ ನಡುವೆ ಸಾಕಷ್ಟು ನಟ-ನಟಿಯರಿಗೆ ಗಾರ್ಡನಿಂಗ್ ಬಗ್ಗೆ ವಿಶೇಷ ಆಸಕ್ತಿ, ಕಾಳಜಿ, ಒಲವು ಇರುತ್ತದೆ. ಶೂಟಿಂಗ್ ಇಲ್ಲದ ವೇಳೆ ಮನೆಯಲ್ಲಿ ಗಾರ್ಡನಿಂಗ್ ಕೆಲಸ ಮಾಡುವ ನಟಿಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

    | ಕೆ.ಬಿ. ಶುಭ ಬೆಂಗಳೂರು

    ಗಾರ್ಡನ್ ಬೇಕೇ ಬೇಕು ಸುಲಭವಾಗಿ ಬೆಳೆಯಬಹುದು

    ನಟಿಯರ ಹಸಿರು ಪ್ರೀತಿ: ಹಿತ್ತಲು, ತಾರಸಿಯಲ್ಲಿ ಫಲ-ಪುಷ್ಪಗಳ ಘಮ‘ಗಿಡಗಳನ್ನು ಬೆಳೆಯುವಾಗ ಪ್ರಮುಖವಾಗಿ ಯಾವ ಗಿಡಗಳಿಗೆ ಎಷ್ಟು ಬೆಳಕು, ಬಿಸಿಲು, ನೀರು ಬೇಕು ಎಂಬುದನ್ನು ಅರಿತು ಬೆಳೆಯಬೇಕು. ಮನೆ ಒಳಗೆ ಹಾಗೂ ಹೊರಗೆ ಬೆಳೆಯುವ ಗಿಡಗಳ ಆರೈಕೆ ಬೇರೆ ಬೇರೆ ರೀತಿಯಾಗಿರುತ್ತದೆ. ಎಷ್ಟು ಜಾಗ ಇದೆ, ಎಷ್ಟು ದಿನದಲ್ಲಿ ಏನೆಲ್ಲ ಬೆಳೆಸಬಹುದು, ಎಷ್ಟು ದಿನದಲ್ಲಿ ಹಾರ್ವೆಸ್ಟ್ ಮಾಡಬಹುದು ಎನ್ನುವ ಕೆಲ ಬೇಸಿಕ್ ಟಿಪ್ಸ್ ಇಟ್ಟುಕೊಂಡು ಸುಲಭವಾಗಿ ಗಿಡ ಬೆಳೆಯಬಹುದು’ ಎನ್ನುತ್ತಾರೆ ಶ್ವೇತಾ.

    ಶಿವಮೊಗ್ಗದ ಹುಡುಗಿ ಶ್ವೇತಾ ಪ್ರಸಾದ್, ಬಾಲ್ಯದಿಂದಲೂ ತೋಟ, ಗಿಡಗಳ ನಡುವೆ ಬೆಳೆದವರು. ಹಾಗಾಗಿ ಕೈ ತೋಟದ ಬಗ್ಗೆ ತಮಗೆ ವಿಶೇಷ ಆಸಕ್ತಿ ಎನ್ನುತ್ತಾರೆ ಅವರು. ‘ಕಾಲೇಜು ದಿನಗಳಲ್ಲಿ ಪಿಜಿಯಲ್ಲಿ ನೆಟ್ಟ ಗಿಡಗಳು ಇಂದಿಗೂ ಗಂಡನ ಮನೆಯಲ್ಲಿ ಇವೆ. ಮದುವೆಗೆ ಮುನ್ನ ಗಾರ್ಡನ್ ಬೇಕು ಎನ್ನುವುದೇ ಮೊದಲ ಕಂಡೀಷನ್ ಆಗಿತ್ತು. ಅವು ನನಗೆ ಮಕ್ಕಳು ಇದ್ದ ಹಾಗೆ. ನನ್ನ ಗಾರ್ಡನ್ ಪ್ರೇಮ ಕಂಡು ಸಾಕಷ್ಟು ಜನ ಸ್ಪೂರ್ತಿ ಪಡೆದು ಅವರ ಮನೆಯಲ್ಲೂ ಗಿಡಗಳನ್ನು ನೆಟ್ಟಿದ್ದಾರೆ. ಇನ್ನು ಕೆಲವರು ಕೆಲ ಗಿಡದ ಪಾಟ್ ತಂದು ನಮ್ಮ ಮನೆಯಲ್ಲಿ ಜಾಗ ಇಲ್ಲ, ನಿಮ್ಮ ಮನೆಯಲ್ಲಿ ನನ್ನ ಹೆಸರಲ್ಲಿ ಬೆಳೆಯಿರಿ ಅಂತ ಹೇಳಿದ್ದೂ ಇದೆ’ ಎನ್ನುತ್ತಾರೆ ಶ್ವೇತಾ.

    ಮನೆಗೆ ಬೇಕಾದ ಸೊಪು್ಪ, ತರಕಾರಿಗಳನ್ನು ಬೆಳೆಯುವ ಶ್ವೇತಾ, ಗಾರ್ಡನ್​ಗೆ ಇದುವರೆಗೂ ಯಾವುದೇ ರೀತಿಯ ರಾಸಾಯನಿಕ ಗೊಬ್ಬರವನ್ನು ಹಾಕಿಲ್ಲವಂತೆ. ಮನೆಯಲ್ಲೇ ತರಕಾರಿ ವೇಸ್ಟೇಜ್​ನಿಂದ ಗೊಬ್ಬರ ತಯಾರಿಸಿ 2 ತಿಂಗಳಿಗೊಮ್ಮೆ ಅದನ್ನು ಹಾಕುತ್ತಾರಂತೆ. ನಿತ್ಯ ಕನಿಷ್ಟ ಒಂದು ಗಂಟೆ ಗಾರ್ಡನ್​ನಲ್ಲಿ ಕಾಲ ಕಳೆಯುತ್ತಾರೆ ಶ್ವೇತಾ.

    ಗಾರ್ಡನ್​ನಲ್ಲಿ ಅಡಗಿದೆ ಕಲಿಕೆ

    ನಟಿಯರ ಹಸಿರು ಪ್ರೀತಿ: ಹಿತ್ತಲು, ತಾರಸಿಯಲ್ಲಿ ಫಲ-ಪುಷ್ಪಗಳ ಘಮ‘ಗಾರ್ಡನ್​ಗೆ ಮನಸ್ಸು-ಮನೆಗಳನ್ನು ಒಂದುಗೂಡಿಸುವ, ಸಂಬಂಧಗಳನ್ನು ಗಟ್ಟಿ ಮಾಡುವ ಶಕ್ತಿ ಇದೆ. ಅದರಿಂದ ಆಹಾರ ಮೌಲ್ಯ ತಿಳಿದುಕೊಳ್ಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಅದೊಂದು ನಿರಂತರ ಕಲಿಕೆ’ ಎನ್ನುತ್ತಾರೆ ಶ್ವೇತಾ ಶ್ರೀವಾತ್ಸವ್. ಶ್ವೇತಾಗೆ ಮೊದಲಿನಿಂದಲೂ ಗಾರ್ಡನಿಂಗ್ ಬಗ್ಗೆ ಆಸಕ್ತಿಯಂತೆ. ಮಗಳು ಹುಟ್ಟಿದ ಮೇಲೆ ಅದಿನ್ನೂ ಜಾಸ್ತಿಯಾಗಿರುವುದಾಗಿ ಅವರು ಹೇಳುತ್ತಾರೆ. ‘ಗಾರ್ಡನ್​ನಲ್ಲಿ ಸಮಯ ಕಳೆಯುವುದರಿಂದ ಪ್ರತಿಯೊಂದು ವಿಷಯ, ವಸ್ತುಗಳಿಗೂ ಬೆಲೆ ಕೊಡುವುದನ್ನು ಕಲಿಯುತ್ತಾಳೆ. ಹೂವಿನ ಮೇಲೆ ಚಿಟ್ಟೆ ಕೂತರೆ ಮಗಳು ಪ್ರಶ್ನಿಸುತ್ತಾಳೆ. ಅದರ ವಿವರಣೆ ನೀಡಿದ ಮೇಲೆ ಇನ್ನೊಂದು ಪ್ರಶ್ನೆ ಕೇಳುತ್ತಾಳೆ. ಇದರಿಂದ ಎಮೋಷನ್ಸ್, ಸೆಂಟಿಮೆಂಟ್ಸ್ ಬೆಳೆಯುತ್ತೆ. ಕೇವಲ ಗಿಡ-ಮರ ಬೆಳೆಸಬೇಕು, ಗಾಳಿ-ಬೆಳಕು ಸಿಗುತ್ತೆ ಅನ್ನೋದಷ್ಟೆ ಅಲ್ಲದೇ, ನಾಲ್ಕೆ ಪಾಟ್​ನಲ್ಲಿ ಗಿಡ ನೆಟ್ಟರೆ ಪರಿಸರದ ಬಗ್ಗೆ ತಿಳಿದುಕೊಳ್ಳಬಹುದು. ಆಗ ಮಾತ್ರ ನಮ್ಮನ್ನ ನಾವು ಅರ್ಥಮಾಡಿಕೊಂಡ ಹಾಗೆ ಆಗುತ್ತದೆ. ಹಾಗಾಗಿ ಗಾರ್ಡನಿಂಗ್ ಬಹಳ ಮುಖ್ಯ’ ಎನ್ನುತ್ತಾರೆ ಸಿಂಪಲ್ ಹುಡುಗಿ ಶ್ವೇತಾ.

    ಆಸೆ ಈಡೇರಿಸಿಕೊಂಡೆ

    ಹಬ್ಬ-ಹರಿದಿನಕ್ಕೆ ಬೇಕಾದ ಹಣ್ಣು, ಹೂವನ್ನು ಮನೆಯಲ್ಲೇ ಬೆಳೆಯಬೇಕು ಎಂಬ ಆಸೆ ಶ್ವೇತಾಗೆ ಇತ್ತಂತೆ. ಅದಕ್ಕೆ ಸರಿಯಾಗುವ ರೀತಿ ಮನೆಯಲ್ಲೇ ತೋಟ ಮಾಡಿಕೊಂಡು, ಅಲ್ಲಿ ಹಲವು ವಿಧದ ಹಣ್ಣು ಮತ್ತು ಹೂವಿನ ಗಿಡಗಳನ್ನು ಬೆಳೆಸಿದ್ದಾರಂತೆ. ಜತೆಗೆ ಪಾಲಾಕ್, ನವಿಲುಕೋಸು, ಎಲೆಕೋಸು, ಟ್ಯೊಮ್ಯಾಟೊ, ಕೊತ್ತಂಬರಿ, ನಿಂಬು ಇನ್ನಿತರ ಗಿಡಗಳನ್ನು ಬೆಳೆಸಿದ್ದಾಗಿ ಅವರು ಹೇಳಿದ್ದಾರೆ.

    ಟೆರೆಸ್ ಗಾರ್ಡನಿಂಗ್ ಮಾಡಿದ್ದೇನೆ

    ನಟಿಯರ ಹಸಿರು ಪ್ರೀತಿ: ಹಿತ್ತಲು, ತಾರಸಿಯಲ್ಲಿ ಫಲ-ಪುಷ್ಪಗಳ ಘಮಮನೆಯಲ್ಲಿದ್ದಾಗ ಹೆಚ್ಚಾಗಿ ಟೆರೆಸ್​ನಲ್ಲೇ ಇರುವ ಸಿಂಧು ಲೋಕನಾಥ್, ಅಲ್ಲೊಂದು ಪುಟ್ಟ ಗಾರ್ಡನ್ ಮಾಡಿಕೊಂಡಿದ್ದಾರಂತೆ. ಮನೆಗೆ ಬೇಕಾದ ಸಣ್ಣ ಪುಟ್ಟ ತರಕಾರಿ, ಸೊಪು್ಪಗಳನ್ನು ಅಲ್ಲೇ ಬೆಳೆಯುತ್ತಾರಂತೆ. ‘ಇದಕ್ಕೆ ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ತರಕಾರಿಯ ವೇಸ್ಟ್ ಪದಾರ್ಥಗಳನ್ನು ಸಂಗ್ರಹಿಸಿ ಮನೆಯಲ್ಲೇ ಗೊಬ್ಬರ ತಯಾರಿಸಿ ಹಾಕುತ್ತೇವೆ. ಇದು ನನಗೆ ಬಹಳ ಸಂತೋಷ ನೀಡುವ ಕೆಲಸ. ಗಾರ್ಡನ್ ನೋಡಿಕೊಳ್ಳಲು ನನಗೆ ಅಮ್ಮ ಸಹಾಯ ಮಾಡುತ್ತಾರೆ. ನಾವು ಬೆಳೆದ ತರಕಾರಿಯಲ್ಲೆ ಅಡುಗೆ ಮಾಡಿ ಸೇವಿಸುವಾಗ ಸಿಗುವ ಸಂತೋಷ ಹೇಳತೀರದು’ ಎನ್ನುತ್ತಾರೆ ಅಮ್ಮನ ಮುದ್ದಿನ ಮಗಳು ಸಿಂಧು. ‘ಮನೆಯಲ್ಲಿ ಏನೇ ಹಣ್ಣು ತಿಂದರೂ ಅದರ ಬೀಜ ತೆಗೆದುಕೊಂಡು ಪಾಟ್​ಗೆ ಹಾಕುತ್ತೇನೆ. ಈ ಹಣ್ಣಿನ ಬೀಜ ನೆಟ್ಟರೆ ಗಿಡ ಬೆಳೆಯುತ್ತಾ ಇಲ್ವಾ ಅಂತ ಪರೀಕ್ಷಿಸುತ್ತಿರುತ್ತೇನೆ. ಅದಕ್ಕೆ ಅಮ್ಮ ಯಾವಾಗಲೂ ಹೇಳುತ್ತಿರುತ್ತಾರೆ, ‘ಅಪ್ಪನಿಗೆ 2 ಎಕರೆ ಜಮೀನು ತೆಗೆದುಕೊಡಲು ಹೇಳು’ ಅಂತ.

    ಅಜ್ಜಿ ತಯಾರಿಸುತ್ತಿದ್ದ ಹೇರ್ ಆಯಿಲ್

    ಅಮ್ಮ, ಅಜ್ಜಿ ತಲೆಗೆ ಹಚ್ಚಲು ಬಳಸುತ್ತಿದ್ದ ಎಣ್ಣೆ ಸದಾ ಘಮಗುಡುತ್ತಿತ್ತು. ಇದರ ಬಗ್ಗೆ ಅಜ್ಜಿಗೆ ಕೇಳಿದಾಗ ಅದನ್ನು ಮಾಡುವ ವಿಧಾನ ಹೇಳಿದರು. ಇಂದಿಗೂ ನಾನು ಅದೇ ಹೇರ್ ಆಯಿಲ್ ಬಳಸುತ್ತೇನೆ. ಇದರ ಬಗ್ಗೆ ಕೆಲವರು ಕೇಳಿದರು. ಅವರಿಗೂ ಆ ರೀತಿಯ ಎಣ್ಣೆ ಮಾಡಿಕೊಟ್ಟೆ. ಅದು ಎಲ್ಲರಿಗೂ ಇಷ್ಟವಾಯಿತು. ಹಾಗಾಗಿ ಹೇರ್ ಆಯಿಲ್ ಜತೆ ಕೆಲ ಹರ್ಬಲ್ ಫೇಸ್ ಫ್ಯಾಕ್​ಗಳನ್ನು ಮಾಡುತ್ತೇನೆ. ಇದಕ್ಕೆ ಬೇಕಾದ ಗಿಡ, ಬೇರು ಇತರ ವಸ್ತುಗಳ ಬಗ್ಗೆ ಅಧ್ಯಯನ ಮಾಡುತ್ತಿರುತ್ತೇನೆ.

    ಚಿನ್ನಾರಿ ಮುತ್ತನ ಬರ್ತ್​ಡೇಗೆ ಪುನೀತ್​ ನೀಡಿದ ಹಾಡಿನ ಉಡುಗೊರೆ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts