More

    ಎರಡು ವರ್ಷಗಳ ಕಾಲ ಅತ್ಯಂತ ಬ್ಯುಸಿಯಾಗಿದ್ದ ವಿಜಯ್​ …

    ಬೆಂಗಳೂರು: ಸಂಚಾರಿ ವಿಜಯ್​ ಇತ್ತೀಚಿನ ದಿನಗಳಲ್ಲಿ ಅಷ್ಟೇನೂ ಬ್ಯುಸಿಯಾಗಿಲ್ಲದಿರಬಹುದು. ಆದರೆ, ‘ನಾನು ಅವನಲ್ಲ ಅವಳು’ ಚಿತ್ರದ ನಂತರ ಅವರು ಒಂದು ಹಂತದಲ್ಲಿ ಅದೆಷ್ಟು ಬ್ಯುಸಿಯಾಗಿದ್ದರೆಂದರೆ, ಎರಡು ವರ್ಷಗಳ ಕಾಲ ಅವರ ಐದೈದು ಚಿತ್ರಗಳು ಬಿಡುಗಡೆಯಾಗಿದ್ದವು.

    ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್​, ಅಂಗಾಂಗ ದಾನದಿಂದ 7 ಜನರಿಗೆ ಹೊಸ ಬದುಕು

    ‘ನಾನು ಅವನಲ್ಲ ಅವಳು’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬರುವವರೆಗೂ ಸಂಚಾರಿ ವಿಜಯ್​ ಯಾರೆಂಬುದೇ ಗೊತ್ತಿರಲಿಲ್ಲ. ಆ ನಂತರ, ಅವರು ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟರಾದರು. ‘ನಾನು ಅವನಲ್ಲ ಅವಳು’ ನಂತರ ‘ಕಿಲ್ಲಿಂಗ್​ ವೀರಪ್ಪನ್​’, ‘ಸಿನಿಮಾ ಮೈ ಡಾರ್ಲಿಂಗ್’, ‘ಸಿಪಾಯಿ’, ‘ಅಲ್ಲಮ’ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ವಿಜಯ್​, ‘ನನ್​ ಮಗಳೇ ಹೀರೋಯಿನ್​’ ಮೂಲಕ ನಾಯಕರಾದರು.

    ‘ನನ್​ ಮಗಳೇ ಹೀರೋಯಿನ್​’ ಚಿತ್ರದ ನಂತರದ ದಿನಗಳಲ್ಲಿ ‘ವರ್ತಮಾನ’, ‘ಕೃಷ್ಣ ತುಳಸಿ’, ‘6ನೇ ಮೈಲಿ’, ‘ಪಾದರಸ’, ‘ನಾತಿಚರಾಮಿ’, ‘ಆಡುವ ಗೊಂಬೆ’ ಮುಂತಾದ ಚಿತ್ರಗಳಲ್ಲಿ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ವಿಜಯ್​ ನಾಯಕರಾಗಿ ಅಭಿನಯಿಸಿದ ಚಿತ್ರಗಳು ಪ್ರೇಕ್ಷಕರ ಗಮನಸೆಳೆದರೂ, ದೊಡ್ಡ ಮಟ್ಟಿಗೆ ಯಶಸ್ವಿಯಾಗದ ಕಾರಣ, ಅವರು ಮತ್ತೆ ಪೋಷಕ ಪಾತ್ರಗಳತ್ತ ಶಿಫ್ಟ್​ ಆದರು.

    ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಬರೋದಕ್ಕಿಂತ ಮುನ್ನ ವಿಜಯ್​ ಲೆಕ್ಚರರ್​ ಆಗಿದ್ದ ವಿಷಯ ಗೊತ್ತಾ?

    ನಾಯಕನಿಂದ ಪೋಷಕ ಪಾತ್ರಗಳತ್ತ ಜಿಗಿದ ಅವರು, ‘ಜೆಂಟಲ್​ಮ್ಯಾನ್​’ ಮತ್ತು ‘ಆಕ್ಟ್​ 1978’ ಚಿತ್ರಗಳಲ್ಲೇ ಮಿಂಚಿದ್ದಾರೆ. ಈ ಎರಡೂ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು, ಕಳೆದ ವರ್ಷದ ಕೊನೆಯಲ್ಲಿ ‘ಅವಸ್ಥಾಂತರ’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು, ಈ ಚಿತ್ರದ ಮುಹೂರ್ತ ಸಹ ಆಗಿತ್ತು.

    ವಿಜಯ್​, ಸಂಚಾರಿ ವಿಜಯ್​ ಆಗಿದ್ದು ಹೇಗೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts