More

    ಬಾಲ್ಯದಲ್ಲೇ ಪರಕಾಯ ಪ್ರವೇಶ ಮಾಡಿದ್ದರಂತೆ ಸಂಚಾರಿ ವಿಜಯ್​!

    ಬೆಂಗಳೂರು: ಸಂಚಾರಿ ವಿಜಯ್​ ಚಿತ್ರಗಳ ಬಗ್ಗೆ, ಅವರ ಅಭಿನಯದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ, ವಿಜಯ್ ಎಂಬ ಸಾಮಾನ್ಯ ಯುವಕ ಸಂಚಾರಿ ವಿಜಯ್​ ಆಗಿದ್ದು ಹೇಗೆ? ಮತ್ತು ಅವರಿಗೆ ರಂಗಭೂಮಿ ಹಾಗೂ ನಟನೆಯ ಗೀಳು ಹತ್ತಿದ್ದು ಹೇಗೆ ಎಂಬ ಪ್ರಶ್ನೆ ಬರುವುದು ಸಹಜವೇ.

    ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್​, ಅಂಗಾಂಗ ದಾನದಿಂದ 7 ಜನರಿಗೆ ಹೊಸ ಬದುಕು

    ವಿಜಯ್​ ಅವರ ಮೂಲ ಇರುವುದು ಕಡೂರು ತಾಲೂಕಿನ ಪಂಚನಳ್ಳಿಯಲ್ಲಿ. ಅಪ್ಪ ವಿಲೇಜ್ ಅಕೌಂಟೆಂಟ್ ಆಗಿ, ಅಮ್ಮ ದಾದಿಯಾಗಿ ಕೆಲಸ ಮಾಡುತ್ತಿದ್ದರಂತೆ. ವಿಜಯ್​ಗೆ ನಟನೆ, ಸಂಗೀತದತ್ತ ಒಲವು ಮೂಡಲು ಕಾರಣ ಅವರ ತಂದೆ. ಬಹುಮುಖ ಪ್ರತಿಭೆಯಾಗಿದ್ದ ತಂದೆ, ನಟನೆ ಜತೆಗೆ ಕೆಲವು ಸಂಗೀತೋಪಕರಣಗಳನ್ನೂ ನುಡಿಸುತ್ತಿದ್ದರಂತೆ. ಇನ್ನು ಅವರಮ್ಮ ಹಾಡುಗಾರ್ತಿಯಾಗಿದ್ದರಂತೆ. ಅಪ್ಪ ಇನ್‌ಸ್ಟ್ರುಮೆಂಟ್ ನುಡಿಸುತ್ತಿದ್ದರೆ ಅಮ್ಮ ಹಾಡುತ್ತಿದ್ದರು. ಸಂಚಾರಿ ವಿಜಯ್‌ಗೆ ಮೊದಲ ಪಾಠ ಸಿಕ್ಕಿದ್ದು ಅವರಿಂದಲೇ.

    ಇದನ್ನೂ ಓದಿ: ಇಂದು ಮುಂಜಾನೆ 3.34ಕ್ಕೆ ಸಂಚಾರಿ ವಿಜಯ್​ ನಿಧನ, ವೈದ್ಯರ ಘೋಷಣೆ

    ಅದೊಮ್ಮೆ ವಿಜಯ್​ ಅವರ ಊರನಲ್ಲಿ ಒಂದು ನಾಟಕವಿತ್ತಂತೆ. ಅದರಲ್ಲಿ ಬಾಲನಟನಾಗಿ ಕಾಣಿಸಿಕೊಂಡ ವಿಜಯ್​, ಅಲ್ಲೇ ಮೊದಲ ಬಾರಿಗೆ ಎಲ್ಲರ ಗಮನಸೆಳೆದಿದ್ದರಂತೆ. ನಾಟಕದಲ್ಲಿ ವಿಜಯ್​ ಅವರ ಪಾತ್ರ ಮಾಡುತ್ತಿದ್ದ ತೀರಿಕೊಳ್ಳುತ್ತದೆ. ಉಳಿದವರೆಲ್ಲಾ ಸೇರಿಕೊಂಡು ಅವನನ್ನು ಹೊತ್ತುಕೊಂಡು ಹೋಗಬೇಕು. ಹಾಗೆ ಹೋಗುತ್ತಿದ್ದಾಗ ಅರ್ಧದಲ್ಲೇ ವಿಜಯ್ ಮೇಲೆ ಏನೋ ಬಿದ್ದಂತಾಗಿದೆ. ಅದೇನು ಅಂತ ನೋಡಿದರೆ, ಅವರ ಅಭಿನಯ ಮೆಚ್ಚಿಕೊಂಡ ಜನ ಕಾಸು ಎಸೆಯುತ್ತಿದ್ದರಂತೆ. ವಿಜಯ್​ ಪಾತ್ರದೊಳಕ್ಕೆ ಪರಕಾಯ ಪ್ರವೇಶ ಮಾಡಿಬಿಡುತ್ತಾನೆ ಅಂತ ಊರವರೆಲ್ಲ ಮಾತಾಡಿಕೊಂಡರಂತೆ.

    ರವೀಂದ್ರ ಕಲಾಕ್ಷೇತ್ರಕ್ಕೆ ಬಂದ ವಿಜಯ್​ ಪಾರ್ಥಿವ ಶರೀರ, ಸ್ನೇಹಿತನ ತೋಟದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts