More

    ಚಿತ್ರರಂಗಕ್ಕೆ ಗುಡ್​ಬೈ ಹೇಳುವುದಕ್ಕೆ ಸನಾ ಖಾನ್​ ತೀರ್ಮಾನ … ಕಾರಣ ಏನು?

    ಮುಂಬೈ: 10 ವರ್ಷಗಳ ಹಿಂದೆ ಬಿಡುಗಡೆಯಾದ ಗಣೇಶ್​ ಅಭಿನಯದ ‘ಕೂಲ್​ – ಸಖತ್​ ಹಾಟ್​ ಮಗ’ ಎಂಬ ಚಿತ್ರ ನೆನಪಿರಬಹುದು. ಈ ಚಿತ್ರದಲ್ಲಿ ಗಣೇಶ್​ ಎದುರು ನಾಯಕಿಯಾಗಿ ಸನಾ ಖಾನ್​ ಎಂಬ ಬಾಲಿವುಡ್​ ನಟಿ ನಟಿಸಿದ್ದರು. ಆ ನಂತರ ಸಲ್ಮಾನ್​ ಅಭಿನಯದ ‘ಜೈ ಹೋ’ ಮತ್ತು ‘ಬಿಗ್​ ಬಾಸ್​’ನಲ್ಲೂ ಕಾಣಿಸಿಕೊಂಡಿದ್ದ ಸನಾ, ಇದೀಗ ಚಿತ್ರರಂಗಕ್ಕೆ ಗುಡ್​ಬೈ ಹೇಳಿದ್ದಾರೆ.

    ಇದನ್ನೂ ಓದಿ: ನಾಲ್ಕನೇ ಮದುವೆಯಾದ್ರಾ ಖ್ಯಾತ ಗಾಯಕ ಅನೂಪ್​ ಜಲೋಟ?

    ಸನಾ ಕಳೆದ ಕೆಲವು ವರ್ಷಗಳಿಂದ ನೃತ್ಯ ನಿರ್ದೇಶಕ ಮೆಲ್ವಿನ್​ ಲೂಯಿಸ್​ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗುತ್ತಾರೆ ಎಂಬ ಸುದ್ದಿ ಸಹ ಕೇಳಿ ಬಂದಿತ್ತು. ಆದರೆ, ಫೆಬ್ರವರಿಯಲ್ಲಿ ಅವರಿಬ್ಬರ ನಡುವೆ ಬ್ರೇಕ್​ಅಪ್​ ಆಗಿತ್ತು. ಅಲ್ಲಿಂದ ಸ್ವಲ್ಪ ದಿನಗಳ ಕಾಲ ಸನಾ ಡಿಪ್ರೆಶನ್​ಗೆ ಒಳಗಾಗಿದ್ದರು ಎಂದು ಹೇಳಲಾಗುತ್ತದೆ.

    ಇದೀಗ ಸನಾ ತಾವು ಚಿತ್ರರಂಗಕ್ಕೆ ಗುಡ್​ಬೈ ಹೇಳುತ್ತಿರುವುದಾಗಿ ಸೋಷಿಯಲ್​ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಿರ್ಗತಿಕರ ಮತ್ತು ಅಸಹಾಯಕರ ಸೇವೆಯಲ್ಲಿ ತಮ್ಮ ಜೀವನವನ್ನು ಸಾಗಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: Photos: ಮಾಲ್ಡೀವ್ಸ್​ನಲ್ಲಿ ತಾಪ್ಸಿ ಏನ್ಮಾಡ್ತಿದ್ದಾರೆ? ನೀವೇ ನೋಡಿ …

    ‘ಈ ಮನರಂಜನಾ ಕ್ಷೇತ್ರವು ನನಗೆ ಎಲ್ಲವನ್ನೂ ಕೊಟ್ಟಿದೆ. ಹಣ, ಖ್ಯಾತಿ, ಗೌರವ ಎಲ್ಲವೂ ನನಗೆ ಇಲ್ಲಿಂದ ಸಿಕ್ಕಿದೆ. ಆದರೆ, ಜೀವನದ ಉದ್ದೇಶ ಖ್ಯಾತಿ ಮತ್ತು ಸಂಪತ್ತು ಮಾತ್ರವಲ್ಲ ಎಂಬುದು ನನ್ನ ನಂಬಿಕೆ. ಹಾಗಾಗಿ ಈ ಕ್ಷೇತ್ರವನ್ನು ಬಿಟ್ಟು, ನಿರ್ಗತಿಕರ ಸೇವೆಯಲ್ಲಿ ತೊಡಗಿಸಿಕೊಳ್ಳುವದಕ್ಕೆ ಯೋಚಿಸಿದ್ದೇನೆ. ಮನುಷ್ಯ ಸತ್ತ ನಂತರ ಏನಾಗುತ್ತಾನೆ ಎಂಬ ಪ್ರಶ್ನೆ ನನ್ನನ್ನು ಹಲವು ದಿನಗಳಿಂದ ಕಾಡುತಿತ್ತು. ಈ ಪ್ರಶ್ನೆಗೆ ನನ್ನ ಧರ್ಮದಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಿದೆ. ಸೃಷ್ಟಿಕರ್ತನ ಆಜ್ನೆಯಂತೆ ಜೀವಿಸಬೇಕೆಂಬ ಪ್ರೇರೇಪಣೆಯಾಗಿದೆ. ಅದೇ ಕಾರಣಕ್ಕೆ, ಇದೆಲ್ಲವನ್ನೂ ಬಿಟ್ಟು ಬದುಕುವುದಕ್ಕೆ ನಿರ್ಧರಿಸಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

    ನಷ್ಟ ಭರಿಸಿಕೊಡುವಂತೆ ವಿಶಾಲ್​ಗೆ ಆದೇಶ ಕೊಟ್ಟ ಮದ್ರಾಸ್ ಹೈಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts