More

    ಸಮಂತಾ ರುತ್ ಪ್ರಭು ‘ಟೇಕ್ 20’ ಪಾಡ್‌ಕಾಸ್ಟ್; ಮೊದಲ ಸಂಚಿಕೆಯಲ್ಲಿ ಚರ್ಚೆಯಾದ ವೈಯಕ್ತಿಕ ವಿಚಾರಗಳು

    ಮುಂಬೈ: ತಮಿಳು, ತೆಲುಗು ಮತ್ತು ಬಾಲಿವುಡ್​​​​​ನಲ್ಲಿ ತನ್ನ ಅಭಿನಯದ ಮೂಲಕ ಜನಪ್ರಿಯತೆ ಗಳಿಸಿದ ನಟಿ ಸಮಂತಾ ರುತ್ ಪ್ರಭು, ಈಗ ತಮ್ಮ ಹೃದಯಕ್ಕೆ ಹತ್ತಿರವಿರುವ ವಿಷಯಗಳನ್ನು, ವಿಶೇಷವಾಗಿ ಆರೋಗ್ಯ ಮತ್ತು ಕ್ಷೇಮದ ಬಗ್ಗೆ ಹೇಳಿಕೊಳ್ಳಲು ಮೊದಲ ‘ಪಾಡ್‌ಕಾಸ್ಟ್’ ಆರಂಭಿಸಿದ್ದಾರೆ. ಈ ಕಾರ್ಯಕ್ರಮದ ಮೊದಲ ಸಂಚಿಕೆಯನ್ನು ತಮ್ಮ ಯೂಟ್ಯೂಬ್ ಚಾನಲ್​​​​​ನಲ್ಲಿ ಹಂಚಿಕೊಂಡಿರುವ ಸಮಂತಾ “ಅಂಡರ್‌ಸ್ಟ್ಯಾಂಡಿಂಗ್ ಆಟೊಇಮ್ಯೂನಿಟಿ” ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.

    ‘ಪಾಡ್‌ಕಾಸ್ಟ್’ ನಲ್ಲಿ, ಸಮಂತಾ ತನ್ನ ವೈಯಕ್ತಿಕ ಆರೋಗ್ಯದ ಪ್ರಯಾಣದ ಬಗ್ಗೆ ಪ್ರಾಮಾಣಿಕವಾಗಿ ಹಂಚಿಕೊಂಡರು. ಇವರೊಂದಿಗೆ ಪೌಷ್ಟಿಕತಜ್ಞ ಅಲ್ಕೇಶ್ ಶರೋತ್ರಿ ಸಹ ಇದ್ದರು. 2022 ರಲ್ಲಿ, ಸಮಂತಾ ಯಶೋದಾ ಬಿಡುಗಡೆಯ ಮೊದಲು ಮೈಯೋಸಿಟಿಸ್‌ನಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದರು. ಅಂದಹಾಗೆ ‘ಪಾಡ್‌ಕಾಸ್ಟ್’ ಸಮಂತಾಗೆ ಸ್ವಯಂ ನಿರೋಧಕ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಅಭಿಮಾನಿಗಳೊಂದಿಗೆ ಸಹ ಸಂಪರ್ಕ ಸಾಧಿಸುತ್ತಾರೆ.

    ಮೊದಲ ಸಂಚಿಕೆಯಲ್ಲಿ ಚರ್ಚೆಯಾದ ವಿಷಯಗಳು
    1.) ಶುದ್ಧ ಆಹಾರವನ್ನು ಸೇವಿಸಿ, ಸಂಸ್ಕರಿಸಿದ ಆಹಾರವನ್ನು ತಪ್ಪಿಸಿ. ಈ ಮೂಲಕ ಹಿರಿಯರಂತೆ ಆಹಾರ ಪದ್ಧತಿ ಅಳವಡಿಸಿಕೊಂಡು ಟಾಕ್ಸಿನ್ ಕಡಿಮೆ ಮಾಡಿಕೊಳ್ಳಿ.
    2) ಶುದ್ಧವಾದ, ಫಿಲ್ಟರ್ ಮಾಡಿದ ನೀರನ್ನು ಕುಡಿಯಿರಿ, ಹಿಮಾಲಯನ್ ಪಿಂಕ್ ಸಾಲ್ಟ್​​​​ನೊಂದಿಗೆ ಅದನ್ನು ಮರು-ಖನಿಜೀಕರಣಗೊಳಿಸಿ. ಲೀಟರ್‌ಗೆ ಒಂದು ಚಿಟಿಕೆ ಸಾಕು.
    3) ಗುಣಮಟ್ಟದ ಡಿಯೋಡರೆಂಟ್‌ಗಳು ಮತ್ತು ಮೇಕಪ್​​​ ಕಿಟ್‌ ಗಳು, ಶುದ್ಧ, ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಬಳಸಿ.
    4) ಒತ್ತಡವನ್ನು ನಿರ್ವಹಿಸಿ.
    6) ಉತ್ತಮ ನಿದ್ರೆ ಮಾಡಿ

    ಹೀಗೆ ಕೆಲವು ಆರೋಗ್ಯ ಸಂಬಂಧಿ ವಿಷಯಗಳು ಹಾಗೂ ವೈಯಕ್ತಿಕ ವಿಷಯಗಳು ಚರ್ಚೆಯಾದವು. ವಿಡಿಯೋ ಲಿಂಕ್ ಇಲ್ಲಿದೆ ನೋಡಿ…

    ಸಮಂತಾ ಶೀಘ್ರದಲ್ಲೇ ಸಿಟಾಡೆಲ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ವರುಣ್ ಧವನ್ ನಾಯಕನಾಗಿ ನಟಿಸಿದ್ದು, ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ತಮ್ಮ ಕೌಶಲ ಪ್ರದರ್ಶಿಸಿದ್ದಾರೆ. ಸಿಟಾಡೆಲ್ ಹೊರತಾಗಿ, ಸಮಂತಾ ಕೊನೆಯದಾಗಿ ಖುಷಿ ಚಿತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ವಿಜಯ್ ದೇವರಕೊಂಡ ಅವರೊಂದಿಗೆ ಜೋಡಿಯಾಗಿದ್ದರು. ಈ ತೆಲುಗು ಚಲನಚಿತ್ರವು ಸೆ.1 ರಂದು ಬಿಡುಗಡೆಯಾಯಿತು. ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಲಭ್ಯವಿದೆ. ಚಿತ್ರದಲ್ಲಿ ಜಯರಾಮ್, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಮತ್ತು ಶರಣ್ಯ ಸೇರಿದಂತೆ ಅನೇಕರ ತಾರಾಗಣವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts