More

  ಎರಡನೇ ಮದುವೆ ವಿಚಾರದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡ ಸಮಂತಾ.. ತಾಯಿಯಾಗುವ ಆಸೆ ಈಡೇರುವುದು ಹೇಗೆ?

  ಹೈದರಾಬಾದ್: ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಕಳೆದ ಕೆಲವು ವರ್ಷಗಳಿಂದ ಮಯೋಸಿಟಿಸ್​ನಿಂದ ಬಳಲುತ್ತಿದ್ದಾರೆ. ಚಲನಚಿತ್ರಗಳಿಂದ ದೂರವಿರುವ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಪೋಸ್ಟ್‌ಗಳೊಂದಿಗೆ ತಮ್ಮ ಅಭಿಮಾನಿಗಳಿಗೆ ಯಾವಾಗಲೂ ಲಭ್ಯವಿರುತ್ತಾರೆ. ಅಲ್ಲದೆ ಹಲವು ಜಾಹೀರಾತು ಶೂಟ್ ಗಳಲ್ಲಿ ಭಾಗವಹಿಸಿ ಕೈತುಂಬಾ ಸಂಪಾದಿಸುತ್ತಿದ್ದಾರೆ. ಆದರೆ ಬಹಳ ದಿನಗಳ ನಂತರ ಸಮಂತಾ ತಮ್ಮ ಜೀವನದಲ್ಲಿ ನಡೆದ ಇತ್ತೀಚಿನ ಘಟನೆಗಳು ಮತ್ತು ವಿಫಲ ದಾಂಪತ್ಯದ ಬಗ್ಗೆ ಭಾವನಾತ್ಮಕ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಮಧ್ಯಮ ವರ್ಗದ ಹುಡುಗಿ ಸಮಂತಾ ಸೂಪರ್ ಸ್ಟಾರ್ ಆದರು. ಆಕೆ ಭಾರತದಾದ್ಯಂತ ಖ್ಯಾತಿ ಗಳಿಸಿದಳು. 14 ವರ್ಷ ವೃತ್ತಿ ಜೀವನದಲ್ಲಿ ಸಮಂತಾ ಹಿಂತಿರುಗಿ ನೋಡಿಲ್ಲ. ಇದು ಅನೇಕ ಬ್ಲಾಕ್‌ಬಸ್ಟರ್‌ ಚಿತ್ರಗಳನ್ನು ಮತ್ತು ಉದ್ಯಮಕ್ಕೆ ಸೂಪರ್​ಹಿಟ್‌ ಚಿತ್ರಗಳನ್ನು ನೀಡಲು ಕಾರಣವಾಯಿತು.

  ಇದನ್ನೂ ಓದಿ: ‘ಕೆಟ್ಟ ವಾಹನ ಖರೀದಿಸಬೇಡಿ’: ನೆಟ್ಟಿಗರನ್ನು ರಂಜಿಸಿದ ಆಟೋರಿಕ್ಷಾ ಹಿಂಬದಿ ಸಂದೇಶ
  ಇತ್ತೀಚೆಗೆ ಸಮಂತಾಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ಎರಡನೇ ಮದುವೆಯಾಗುವಂತೆ ಸಮಂತಾ ಮೇಲೆ ಆಕೆಯ ಪಾಲಕರು ಒತ್ತಡ ಹೇರುತ್ತಿದ್ದಾರೆ ಎಂಬ ಮಾತು ಟಾಲಿವುಡ್​ನಲ್ಲಿ ಕೇಳಿ ಬರುತ್ತಿದೆ.

  ನೀನು ಜೀವನದಲ್ಲಿ ಅನೇಕ ಯಶಸ್ಸನ್ನು ಪಡೆದಿರುವೆ. ಮದುವೆಯಾಗಲು ಮತ್ತು ಸಂತೋಷವಾಗಿರಲು ಪ್ರಯತ್ನಿಸಬಹುದಲ್ಲಾ ಎಂದು ಅವರು ಸಲಹೆ ನೀಡುತ್ತಿದ್ದಾರೆ ಎಂಬ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುತ್ತಿವೆ. ಆದರೆ ಸಮಂತಾಗೆ ಜೀವನದಲ್ಲಿ ಮದುವೆಯಾಗುವ ಯೋಚನೆ ಇಲ್ಲವಂತೆ. ಇದನ್ನು ಆಕೆ ಪಾಲಕರಿಗೂ ಕಡ್ಡಿ ಮುರಿದಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದೂ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
  ಇನ್ಮುಂದೆ ಆಕೆ ಒಂಟಿಯಾಗಿರಲು ಬಯಸಿದಂತೆ ತೋರುತ್ತದೆ. ಉಳಿದ ಜೀವನವನ್ನು ನಟನೆ ಮತ್ತು ಸಮಾಜಸೇವೆಗೆ ತೊಡಗಿಸಿಕೊಳ್ಳುವ ನಿರೀಕ್ಷೆಯಿದೆ. ಎರಡು ಮಕ್ಕಳನ್ನು ದತ್ತು ಪಡೆದು ತಾಯಿಯಾಗುವ ಬಯಕೆ ಹೊಂದಿದ್ದಾಳಂತೆ. ಆಕೆ ಈ ಆಶಯವನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಅಳಂತೆ. ಇದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ, ಆದರೆ ಈ ಸುದ್ದಿ ತಿಳಿದವರು ಶಾಕ್ ಆಗಿದ್ದಾರೆ. ಅಲ್ಲದೆ, ಸಮಂತಾ ಅವರ ಕೆಲವು ಅಭಿಮಾನಿಗಳು ಅವರನ್ನು ಇದು ಸರಿಯಾದ ನಿರ್ಧಾರ ಎಂದು ಹೊಗಳುತ್ತಿದ್ದಾರೆ.

  5.9 ಅಡಿ ಕಟೌಟ್! ‘ಬ್ಯಾಡ್ ಮ್ಯಾನರ್ಸ್‌’ ಮೂಲಕ ಚಿತ್ರರಂಗಕ್ಕೆ ಪ್ರಿಯಾಂಕಾ ಎಂಟ್ರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts