More

    ‘ಕೆಟ್ಟ ವಾಹನ ಖರೀದಿಸಬೇಡಿ’: ನೆಟ್ಟಿಗರನ್ನು ರಂಜಿಸಿದ ಆಟೋರಿಕ್ಷಾ ಹಿಂಬದಿ ಸಂದೇಶ

    ಬೆಂಗಳೂರು: ಸಾಮಾನ್ಯವಾಗಿ ಆಟೋರಿಕ್ಷಾಗಳ ಹಿಂಭಾಗದಲ್ಲಿ ಜನರನ್ನು ಸನ್ಮಾರ್ಗದಲ್ಲಿ ನಡೆಸುವ ಸಂದೇಶಗಳನ್ನು ಕಾಣಬಹುದು. ಇನ್ನೂ ಕೆಲವು ಆಟೋಗಳ ಹಿಂಭಾಗ ಜಾಹೀರಾತು ಮಾಡುವ ಚಮತ್ಕಾರಿ ಘೋಷಣೆಗಳನ್ನು ಸಹ ನೋಡಿರಬಹುದು. ಆದರೆ ಇಲ್ಲೊಬ್ಬ ಚಾಲಕ ತನ್ನ ಇನ್‌ಸ್ಟಾಗ್ರಾಮ್ ಖಾತೆಗೆ ಅನುಯಾಯಿಗಳನ್ನು ಆಕರ್ಷಿಸಲು ತನ್ನ ಆಟೋರಿಕ್ಷಾವನ್ನು ಬಳಸಿ ಯಶಸ್ವಿಯಾಗಿದ್ದಾನೆ. ಬೆಂಗಳೂರಿನಲ್ಲಿ ಸಂಚರಿಸುತ್ತಿರುವ ಆಟೋರಿಕ್ಷಾವೊಂದರ ಹಿಂಭಾಗ “ಕಚಡಾ ಗಾಡಿ ತಗೋಬೇಡಿ” ಎಂದು ಬರೆದಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

    ಇದನ್ನೂ ಓದಿ: ಮುಂದಿನ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಧಾರಾಕಾರ ಮಳೆ; 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ
    ಇಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಎಂದರೆ ಜನ ಅಲ್ಲೇ ಹೇಗೆ ಮೂತ್ರ ವಿಸರ್ಜನೆ ಮಾಡುತ್ತಾರೋ..ಹಾಗೆ ಈ ವಾಹನವನ್ನು ಖರೀದಿಸಬೇಡಿ ಎಂದು ಇತರರನ್ನು ಎಚ್ಚರಿಸುವ ಬರಹ ಬರೆದರೆ ನೆಟ್ಟಿಗರು ಅದನ್ನೇ ಹೆಚ್ಚಿಗೆ ವೀಕ್ಷಿಸಿದ್ದಾರೆ. ಕುತೂಹಲಕ್ಕಾಗಿ ಖರೀದಿಸದಿರುವ ಅಂಶ ಇದರಲ್ಲೇನಿದೆ ಎಂದು ಹೆಚ್ಚು ಜನ ಇನ್‌ಸ್ಟಾಗ್ರಾಮ್ ಖಾತೆ ವೀಕ್ಷಿಸಿದ್ದಾರೆ.

    ಬೆಂಗಳೂರಿನ ವಕೀಲ ಆಶಿಶ್ ಕೃಪಾಕರ್ ಈ ಬರಹವಿರುವ ಫೋಟೋವನ್ನು X(ಟ್ವಿಟರ್‌)ನಲ್ಲಿ ಪೋಸ್ಟ್ ಮಾಡಿದ್ದಾರೆ. “ಕೆಟ್ಟ ಉತ್ಪನ್ನವನ್ನು ಖರೀದಿಸಬೇಡಿ ಎಂದು ಇತರರಿಗೆ ಹೇಳಲು ಇದು ನವೀನ ಮಾರ್ಗವಾಗಿದೆ. ಇನ್ನು ಬರಹ ಕನ್ನಡದಲ್ಲಿರುವುದರಿಂದ “ಭಾಷಾಭಿಮಾನ” ತೋರಿಸಲೂ ಅನುಕೂಲವಾಗಿದೆ ಎಂದು ಅವರು ಬರೆದಿದ್ದಾರೆ.

    ಇದಕ್ಕೆ ಎಕ್ಸ್ ಬಳಕೆದಾರರು ವಿಭಿನ್ನ ರೀತಿಯಲ್ಲಿ ಕಾಮೆಂಟ್​ಗಳನ್ನು ಹಾಕಿದ್ದಾರೆ. ಇದು ಕಸದ ವಾಹನ, ಖರೀದಿಸಬೇಡಿ ಒಬ್ಬ ಬಳಕೆದಾರನರಂದರೆ, “ಭಾರತದಲ್ಲಿ ವಿಶಿಷ್ಟ, ಸುಂದರವಾದ ಇಟಾಲಿಯನ್ ಆಟೋಮೋಟಿವ್ ಉತ್ಪನ್ನಗಳು ಇವೆ. ಅವುಗಳಲ್ಲಿನ ಸೇವಾ ಸಮಸ್ಯೆ ಪರಿಹರಿಸಲು ಕನಿಷ್ಠ ಕಾಳಜಿ ತೋರಿ ಎಂದು ಇನ್ನೊಬ್ಬರು ಹೇಳಿದ್ದಾರೆ. ಆಟೊರಿಕ್ಷಾವನ್ನು ತಯಾರಿಸುವ ಕಂಪನಿಯಾದ ಪಿಯಾಜಿಯೊವನ್ನು ಟ್ಯಾಗ್ ಮಾಡುವಾಗ ಮತ್ತೊಬ್ಬ ಬಳಕೆದಾರನು “ಪ್ಲೀಸ್ ಅದಕ್ಕೆ ಹಾಜರಾಗಿ, ಎಷ್ಟು ಸಮಯದವರೆಗೆ ಅವನನ್ನು ನೋವಿನಿಂದ ಅಳಲು ಬಿಡುತ್ತೀರಿ” ಎಂದು ಬರೆದಿದ್ದಾನೆ.

    ‘ನಮ್ಮ ಮೆಟ್ರೋ’ದಲ್ಲಿ ಕಿರುಕುಳ: ಯುವತಿ ಕಿರುಚುತ್ತಿದ್ದರೂ ಕ್ಯಾರೇ ಎನ್ನದ ಸಹ ಪ್ರಯಾಣಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts