More

    ಖ್ಯಾತ ನಟಿಯ ಜೊತೆ ಕುಣಿದು ಕುಪ್ಪಳಿಸಿದ ಸಲ್ಮಾನ್ ಖಾನ್! ಧೂಳೆಬ್ಬಿಸಿದ ವಿಡಿಯೋ…

    ಮುಂಬೈ: ಬಾಲಿವುಡ್ ಭಾಯ್ ಜಾನ್ ನಟ ಸಲ್ಮಾನ್ ಖಾನ್ ಡಿಸೆಂಬರ್ 27, ಸೋಮವಾರದಂದು ತಮ್ಮ 56 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸೂಪರ್‌ಸ್ಟಾರ್ ಅಭಿಮಾನಿಗಳು ಮತ್ತು ಪ್ರಪಂಚದಾದ್ಯಂತದ ಪ್ರಸಿದ್ಧ ಸೆಲೆಬ್ರಿಟಿಗಳಿಂದ ಶುಭಾಶಯಗಳನ್ನು ನಟ ಸ್ವೀಕರಿಸಿದರು. ಇನ್ನು, ಸಲ್ಮಾನ್ ಅವರ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು, ಅವರ ಚಲನಚಿತ್ರ ಬಂಧುಬಳಗದ ಸ್ನೇಹಿತರು ಸಾಮಾಜಿಕ ಮಾಧ್ಯಮದಲ್ಲಿ ನಟನ ಜೀವನ ಕುರಿತು ಹಲವು ವಿಷಯಗಳನ್ನು ನೆನಪಿಸಿಕೊಳ್ಳುತ್ತಾ ವಿಶೇಷವಾದ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಹಾಗೆ ಶುಭಾಶಯಗಳು ತಿಳಿಸಿದವರಲ್ಲಿ ಸೌತ್ ಮತ್ತು ಬಾಲಿವುಡ್​ನ ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಕೂಡ ಒಬ್ಬರು. ನಟಿ ಜೆನಿಲಿಯಾ ಅವರು ಸಲ್ಮಾನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹಂಚಿಕೊಂಡು, ತಮ್ಮ ಪೋಸ್ಟ್‌ನಲ್ಲಿ ನಟನ ಒಂದು ಅತ್ಯಂತ ಅಪರೂಪದ ವಿಡಿಯೋ ಶೇರ್ ಮಾಡಿದ್ದಾರೆ

    ಖ್ಯಾತ ನಟಿಯ ಜೊತೆ ಕುಣಿದು ಕುಪ್ಪಳಿಸಿದ ಸಲ್ಮಾನ್ ಖಾನ್! ಧೂಳೆಬ್ಬಿಸಿದ ವಿಡಿಯೋ...

    ಮರೂನ್ ಫುಲ್ ಸ್ಲೀವ್ ಟಿಶರ್ಟ್‌ಗಳು ಮತ್ತು ಡೆನಿಮ್ ಜೀನ್ಸ್‌ನಲ್ಲಿ ನಟನ ಜೊತೆ ಟ್ವಿನಿಂಗ್ ಆಗಿರುವ ನಟಿ ಜೆನಿಲಿಯಾ, ಸಲ್ಮಾನ್ ಜೊತೆ ತುಂಬಾನೆ ಉತ್ಸಾಹದಿಂದ ಒಟ್ಟಿಗೆ ನೃತ್ಯ ಮಾಡಿರುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ, ಪನ್ವೆಲ್‌ನಲ್ಲಿರುವ ಸಲ್ಮಾನ್‌ನ ಫಾರ್ಮ್‌ಹೌಸ್‌ನಲ್ಲಿ ಅವರ ಹುಟ್ಟುಹಬ್ಬದಂದು ತೆಗೆದಿರುವ ವಿಡಿಯೋ ಇದು. ಒಂದೊಳ್ಳೆ ಟ್ರ್ಯಾಕ್‌ಗೆ ಸಲ್ಮಾನ್, ಜೆನಿಲಿಯಾ ಹೆಜ್ಜೆ ಹಾಕಿರುವುದು ಕಂಡುಬಂದಿದೆ. ವಿಡಿಯೋದ ಜೊತೆಗೆ ಜೆನಿಲಿಯಾ, “ಒಳ್ಳೆಯ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಸಂತೋಷ, ಪ್ರೀತಿ, ಉತ್ತಮ ಆರೋಗ್ಯವನ್ನು ನೀಡಲಿ.” ಎಂಬ ಕ್ಯಾಪ್ಷನ್ ನೀಡಿದ್ದಾರೆ. ಈ ವಿಡಿಯೋದಲ್ಲಿ ಸಲ್ಮಾನ್ ದಿಲ್ ಖುಷ್ ಆಗಿ ಕುಣಿದಿರುವುದು ಕಂಡ ಕಟ್ಟಾಭಿಮಾನಿಗಳು, ಎಲ್ಲರಿಗೂ ಸಂತೋಷ ತಂದಿದೆ. ಇದಲ್ಲದೇ, ಈ ವಿಡಿಯೋದೇ ಈಗ ಸೋಶಿಯಲ್ ಮೀಡಿಯಾದಲ್ಲಿ ಹವಾ. ವಿಡಿಯೋ ಮೇಲೆ ಬರೋಬ್ಬರಿ 1 ಮಿಲಿಯನ್​ಗೂ ಹೆಚ್ಚು ಲೈಕ್ಸ್​​ ಇದ್ದು, ವಿಡಿಯೋ ವೀಕ್ಷಣೆಗಳು ಅಂತೂ 4 ಮಿಲಿಯನ್​ಗೂ ಹೆಚ್ಚು ಇದೆ

    100 ಜನ್ರಿಗೆ 10 ಲಕ್ಷ ರೂ. ಹಂಚುತ್ತಾರೆ ವಿಜಯ್: ನೀವೂ ಹಣ ಪಡೆಯಬಹುದು… ಹೇಗೆ?

    ವಿಚ್ಛೇದನದ ಬಳಿಕ ಸಮಂತಾ ದಿಲ್ ಖುಷ್? ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಹಾಟ್ ನಟಿ!

    ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಜೀವನ ಹೇಗಿತ್ತು ಗೊತ್ತಾ? ವಿಡಿಯೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts