More

    ಅಯೋಧ್ಯೆಗೆ ಬಂತು ರಾಮಶಿಲೆ; ಶ್ರೀರಾಮನ ಮೂರ್ತಿಗೂ ಸಾಲಿಗ್ರಾಮ ಶಿಲೆಗೂ ಸಂಬಂಧವೇನು?

    ಉತ್ತರಪ್ರದೇಶ: ಇದೀಗ ಅಯೋಧ್ಯೆಗೆ ನೇಪಾಳದ ಗಂಡಕಿ ನದಿಯಲ್ಲಿ ಲಭ್ಯವಾಗುವ ಸಾಲಿಗ್ರಾಮ ಶಿಲೆಯನ್ನು ತಂದಿದ್ದು ದಾರಿಯಲ್ಲಿ ಸಾಧ್ಯ ಆದಲ್ಲೆಲ್ಲ ಜನರು ಭಕ್ತಿಭಾವದಿಂದ ಶಿಲೆಯನ್ನು ನಮಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

    ನೇಪಾಳದ ಪೋಖರಾದಿಂದ ಅಯೋಧ್ಯೆಗೆ ಭಾರಿ ಬಿಗಿ ಭದ್ರತೆಯಲ್ಲಿ ರಾಮಶಿಲೆಯನ್ನು ರಸ್ತೆ ಮಾರ್ಗವಾಗಿ ಸಾಗಣೆ ಮಾಡಿದ್ದು ಭಾರಿ ವಿಜೃಂಭಣೆಯಿಂದ ಅಯೋಧ್ಯೆಗೆ ತರಲಾಗಿದೆ. ಇದರ ತೂಕವೂ ಬರೋಬ್ಬರಿ 127 ಕ್ವಿಂಟಾಲ್​ ಆಗಿದ್ದು ಈ ಬೃಹತ್​ ಶಿಲೆಯಿಂದ ಶ್ರೀರಾಮನ ಮೂರ್ತಿ ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲ ಜನರಲ್ಲಿ ಮೂಡಿದೆ.

    ಗಂಡಕಿ ನದಿಯಿಂದ ತೆಗೆದ ಈ ಶಿಲೆಯಿಂದ ಶ್ರೀರಾಮನ ವಿಗ್ರಹವನ್ನು ಕೆತ್ತಲಾಗುತ್ತದೆ. ನಂತರ ಅಯೋಧ್ಯೆಯ ನೂತನವಾಗಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಸನಾತನ ಧರ್ಮದಲ್ಲಿ ಸಾಲಿಗ್ರಾಮ ಶಿಲೆಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ರಾಮನ ವಿಗ್ರಹವನ್ನು ಮಾಡಲು ಶಿಲೆಯನ್ನು ನೇಪಾಳದಿಂದಲೇ ಏಕೆ ತರಬೇಕು? ಈ ಪ್ರಾಚೀನ ಕಲ್ಲಿನ ವಿಶೇಷತೆ ಏನು?

    ಅಯೋಧ್ಯೆಗೆ ಬಂತು ರಾಮಶಿಲೆ; ಶ್ರೀರಾಮನ ಮೂರ್ತಿಗೂ ಸಾಲಿಗ್ರಾಮ ಶಿಲೆಗೂ ಸಂಬಂಧವೇನು?

     

    ಗಂಡಕೀ ನದಿಗೂ ಮಹಾವಿಷ್ಣುಗೂ ಇದೆ ಪ್ರಾಚೀನ ಸಂಬಂಧ!
    ಹಿಂದೆ ಶಿವನ ಮೂರನೇ ಕಣ್ಣಿನ ಕೆನ್ನಾಲಗೆಯಿಂದ ಜಲಂಧರ ಎನ್ನುವ ರಾಕ್ಷಸ ಹುಟ್ಟಿದ್ದ. ಆತನ ಪತ್ನಿ ವೃಂದಾ ಎಂದು. ಆಕೆಯ ಪಾತಿವ್ರತ್ಯದಿಂದ ಬಲ ಪಡೆದ ರಾಕ್ಷಸ ಮೂರು ಲೋಕಗಳಲ್ಲಿ ಹಾವಳಿ ನಡೆಸುತ್ತಿದ್ದ. ಇದರಿಂದಾಗಿ ಸ್ವಯಂ ಈಶ್ವರನಿಗೂ ಆತನನ್ನು ಸೋಲಿಸಲು ಸಾಧ್ಯ ಆಗುತ್ತಿರಲಿಲ್ಲ.

    ಅದಲ್ಲದೇ ಈ ವೃಂದಾ ಮಹಾವಿಷ್ಣುವಿನ ಪರಮಭಕ್ತೆ ಕೂಡ ಹೌದು. ಆದರೂ ಮಹಾವಿಷ್ಣು ಆಕೆಯ ಪಾತಿವ್ರತ್ಯವನ್ನು ನಾಶ ಮಾಡಲು ಜಲಂಧರನ ವೇಶ ಧರಿಸಿ ವೃಂದಾಳ ಮುಂದೆ ನಿಂತನು. ಜಲಂಧರ, ಶಿವನ ಜೊತೆ ಯುದ್ಧವನ್ನು ಮುಗಿಸಿ ಮರಳಿದ್ದಾನೆ ಎಂದು ಭಾವಿಸಿದ ವೃಂದಾ, ಮಹಾವಿಷ್ಣುವನ್ನು ತನ್ನ ಗಂಡ ಎಂದುಕೊಂಡು ಆಲಂಗಿಸಿದಳು. ತಕ್ಷಣ ಮುಂದೆ ನಿಂತಿರುವವನು ತನ್ನ ಪತಿ ಅಲ್ಲ, ಮಹಾವಿಷ್ಣು ಎಂದು ಆಕೆಗೆ ತಿಳಿಯಿತು. ಅಷ್ಟರಲ್ಲಿ ಆಕೆಯ ಪಾತಿವ್ರತ್ಯವೂ ಮುರಿದುಹೋದ ಕಾರಣ ಶಿವ ಜಲಂಧರನ ವಧೆ ಮಾಡುತ್ತಾರೆ.

    ತನ್ನ ಆರಾಧ್ಯ ದೇವರ ಮೇಲೆ ಸಿಟ್ಟಾದ ಆಕೆ ಮಹಾವಿಷ್ಣುವಿಗೆ ಕಲ್ಲಾಗಿ ಹೋಗುವಂತೆ ಶಾಪ ನೀಡುತ್ತಾಳೆ. ಈ ಶಾಪವನ್ನು ನಗುಮೊಗದಿಂದ ಸ್ವೀಕರಿಸಿದ ಮಹಾವಿಷ್ಣು, ಆಕೆಗೆ ತುಳಸಿಯ ರೂಪದಲ್ಲಿ ಪುನರ್ಜನ್ಮ ನೀಡುತ್ತಾನೆ. ವೃಂದಾಳ ಶಾಪದಿಂದಾಗಿ ಮಹಾವಿಷ್ಣು ಗಂಡಕಿ ನದಿಯಲ್ಲಿ ಸಾಲಿಗ್ರಾಮ ರೂಪದ ಕಪ್ಪು ಕಲ್ಲಾಗುತ್ತಾನೆ ಎನ್ನುವುದು ಪುರಾಣಗಳ ಕಥೆ.

    ದೇಶದ ಪ್ರತಿಯೊಂದು ದೇವಾಲಯ ಮತ್ತು ಮಠಗಳಲ್ಲಿ, ಸಾಲಿಗ್ರಾಮ ಶಿಲೆಯನ್ನು ಪ್ರತಿಮೆಗಳನ್ನು ಕೆತ್ತಲು ಬಳಸಲಾಗುತ್ತದೆ. ನಂಬಿಕೆಗಳ ಪ್ರಕಾರ, ಈ ಕಲ್ಲು ಪವಿತ್ರವಾಗಿಲ್ಲ. ಇತರ ಕಲ್ಲುಗಳಿಗಿಂತ ಭಿನ್ನವಾಗಿ, ಇಲ್ಲಿ ವಿಷ್ಣು ವಾಸಿಸುತ್ತಾನೆ ಎಂದು ಪರಿಗಣಿಸಲಾಗಿದೆ. ಈ ಶೀಲವು ತುಳಸಿಗೆ ಸಂಬಂಧಿಸಿದೆ, ಅದಕ್ಕಾಗಿಯೇ ಇದನ್ನು ದೇವಾಲಯಗಳಲ್ಲಿ ಪೂಜಿಸಲಾಗುತ್ತದೆ.

    ಹೀಗಾಗಿ ಪ್ರತಿಯೊಂದು ವಿಷ್ಣು ಮಂದಿರದಲ್ಲೂ ಗಂಡಕಿ ನದಿಯಿಂದ ತರಲಾದ ಸಾಲಿಗ್ರಾಮ ಶಿಲೆಯನ್ನೇ ಮುಖ್ಯ ಮೂರ್ತಿಗಾಗಿ ಬಳಸಲಾಗುತ್ತದೆ. ಶ್ರೀರಾಮನೂ ಮಹಾವಿಷ್ಣುವಿನ ಅವತಾರಗಳಲ್ಲಿ ಒಬ್ಬನಾದ ಕಾರಣ ನೇಪಾಳದ ಗಂಡಕಿ ನದಿಯಿಂದ ಸಾಲಿಗ್ರಾಮ ಶಿಲೆಯನ್ನು ಮೂರ್ತಿಯ ನಿರ್ಮಾಣಕ್ಕಾಗಿ ತರಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts