ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಉಗ್ರನ ಬಳಿ ಪತ್ತೆಯಾಯ್ತು ಹೊಸ ಮಾದರಿಯ ಬಾಂಬ್​!

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಹೊಸ ರೀತಿಯ ಬಾಂಬ್​ ವಶಪಡಿಸಿಕೊಳ್ಳಲಾಗಿದ್ದು ಅದು ಪಕ್ಕಾ ಸುಗಂಧದ್ರವ್ಯದ ರೂಪದಲ್ಲಿ ಇದೆ. ಆದರೆ ವಿಷೇಶ ಇರುವುದು ಕೇವಲ ಈ ಬಾಂಬ್​ನಲ್ಲಿ ಮಾತ್ರವಲ್ಲ, ಇದನ್ನು ಹೊಂದಿದ್ದ ಉಗ್ರನೂ ವಿಶೇಷ ವ್ಯಕ್ತಿಯೇ. ಆತ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ! ಪೊಲೀಸ್ ಮುಖ್ಯಸ್ಥರು ಕೇಂದ್ರಾಡಳಿತ ಪ್ರದೇಶದಲ್ಲಿ ಇಂತಹ ಬಾಂಬ್ ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಹೇಳಿದ್ದಾರೆ. ವೈಷ್ಣೋದೇವಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ನಲ್ಲಿ ಸ್ಫೋಟ ಸೇರಿದಂತೆ ಹಲವು ಸ್ಫೋಟಗಳನ್ನು ನಡೆಸಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕ-ಭಯೋತ್ಪಾದಕನನ್ನು ಬಂಧಿಸಲಾಗಿದೆ … Continue reading ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಉಗ್ರನ ಬಳಿ ಪತ್ತೆಯಾಯ್ತು ಹೊಸ ಮಾದರಿಯ ಬಾಂಬ್​!