More

    ಜಿಲ್ಲಾದ್ಯಂತ ಶ್ರೀರಾಮ ನವಮಿ ಸಂಭ್ರಮ

    ದಾವಣಗೆರೆ : ಜಿಲ್ಲಾದ್ಯಂತ ಬುಧವಾರ ಶ್ರೀರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
     ರಾಮ ಮಂದಿರಗಳು ವಿಶೇಷ ಅಲಂಕಾರದಿಂದ ಕಳೆಗಟ್ಟಿದ್ದವು. ದಶರಥ ನಂದನನ ದರ್ಶನಕ್ಕಾಗಿ ಭಕ್ತರು ಬೆಳಗ್ಗೆಯಿಂದಲೆ ಸಾಲುಗಟ್ಟಿ ನಿಂತಿದ್ದರು. ಎಲ್ಲೆಲ್ಲೂ ರಾಘವನದೇ ಧ್ಯಾನ. ಪೂಜೆ, ಹೋಮ, ಭಜನೆ ಎಲ್ಲದರಲ್ಲೂ ಆತನದೇ ಸ್ಮರಣೆ.
     ನಗರದ ಜಯದೇವ ವೃತ್ತದ ಕೂಡಲಿ ಶೃಂಗೇರಿ ಶಂಕರ ಮಠದ ಆವರಣದಲ್ಲಿರುವ ಶ್ರೀರಾಮ ಮಂದಿರದಲ್ಲಿ ಬೆಳಗ್ಗೆಯಿಂದ ಪಂಚಾಮೃತ ಅಭಿಷೇಕ ನಡೆಯಿತು. ಶ್ರೀರಾಮನ ಉತ್ಸವ ಮೂರ್ತಿಗೆ ಭಕ್ತರಿಂದ ಕ್ಷೀರಾಭಿಷೇಕದ ವ್ಯವಸ್ಥೆ ಮಾಡಲಾಗಿತ್ತು. ಸಾಲಾಗಿ ಬಂದ ಭಕ್ತರು ಒಬ್ಬೊಬ್ಬರಾಗಿ ಅಭಿಷೇಕ ನೆರವೇರಿಸಿದರು.
     ಮಂದಿರದ ಪರಿಸರದಲ್ಲಿ ರಾಮತಾರಕ ಹೋಮವನ್ನು ಆಯೋಜಿಸಲಾಗಿತ್ತು. ಶ್ರೀರಾಮನ ತೊಟ್ಟಿಲು ಉತ್ಸವ ವಿಶೇಷ ಆಕರ್ಷಣೆಯಾಗಿತ್ತು. ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು.
     ಬೆಳಗ್ಗೆಯಿಂದ ವಿವಿಧ ಭಜನಾ ಮಂಡಳಿಗಳ ಸದಸ್ಯರು ಭಜನೆಯ ಮೂಲಕ ರಘುಕುಲ ತಿಲಕನ ಗುಣಗಾನ ಮಾಡಿದರು. ಶ್ರೀರಾಮ ಮಂದಿರ ಸೇವಾ ಸಮಿತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಸಾದ ವ್ಯವಸ್ಥೆಯ ಜತೆಗೆ ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.
     ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನದಲ್ಲೂ ರಾಮನವಮಿ ಅಂಗವಾಗಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
     ಶಾಮನೂರಿನ ಶ್ರೀರಾಮ ಮಂದಿರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎಂಸಿಸಿ ‘ಎ’ ಬ್ಲಾಕ್‌ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀರಾಮನಿಗೆ ವಿಶೇಷ ಲಂಕಾರ, ಪೂಜೆ, ಮಂಗಳಾರತಿ ನೆರವೇರಿಸಿ ಭಕ್ತರಿಗೆ ಪಾನಕ, ಕೋಸಂಬರಿ ನೀಡಲಾಯಿತು.
     …
     * ಖಮಿತ್ಕರ್ ರಾಮಮಂದಿರ
     ಪಿಜೆ ಬಡಾವಣೆಯ ಖಮಿತ್ಕರ್ ಈಶ್ವರಪ್ಪನವರ ಶ್ರೀರಾಮ ದೇವಸ್ಥಾನದಲ್ಲಿ ಶ್ರೀರಾಮ, ಸೀತಾದೇವಿ, ಲಕ್ಷ್ಮಣ ಮತ್ತು ಹನುಮಂತ ದೇವರ ವಿಗ್ರಹಗಳಿಗೆ ಪುಷ್ಪಾಲಂಕಾರ ಮಾಡಲಾಗಿತ್ತು.
     ಬೆಳಗ್ಗೆ 7 ಗಂಟೆಯಿಂದಲೆ ಮೂಲ ರಾಮದೇವರ ಮೂರ್ತಿಗೆ ಅಭಿಷೇಕ ನೆರವೇರಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ತೊಟ್ಟಿಲು ಕಾರ್ಯಕ್ರಮ ನಡೆಯಿತು. ಭಕ್ತರಿಗೆ ಪ್ರಸಾದ ವಿನಿಯೋಗದ ಜತೆಗೆ ಪಾನಕ, ಕೋಸಂಬರಿ ನೀಡಲಾಯಿತು.
     ಭಗವಂತನ ದರ್ಶನ ಪಡೆಯಲು ಭಕ್ತರು ಬೆಳಗ್ಗೆ 6.30 ರಿಂದಲೇ ದೇವಸ್ಥಾನಕ್ಕೆ ಬರತೊಡಗಿದರು. ಶ್ರೀರಾಮ ಸಂಗೀತ ಸೇವಾ ಮಂಡಳಿಯಿಂದ ಸಂಜೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವಸ್ಥಾನದ ವಹಿವಾಟುದಾರರಾದ ರಾಜಾರಾಮ್ ಆರ್. ಖಮಿತ್ಕರ್, ಪುರೋಹಿತರಾದ ಅನಂತ ಭಟ್ ದುಗ್ಗಾವತಿ, ಶ್ರೀರಾಮ ಸಂಗೀತ ಸೇವಾ ಮಂಡಳಿಯ ಶ್ರೀಕಾಂತ ಭಟ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts