More

    ದೆಹಲಿ ಶಾಸಕರ ಸಂಬಳ ಹೆಚ್ಚಳ; ಯಾರಿಗೆ ಎಷ್ಟು ವೇತನ? ಇಲ್ಲಿದೆ ಸಂಪೂರ್ಣ ಮಾಹಿತಿ…

    ನವದೆಹಲಿ: ನಮ್ಮ ಜನನಾಯಕರಿಗೆ ತಿಂಗಳಿಗೆ ಎಷ್ಟು ವೇತನ ಸಿಗಬಹುದು ಎಂಬ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲ ಇದ್ದೇ ಇರುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ಕೊರತೆ ಇರುವುದರ ಮಧ್ಯೆಯೇ ದೆಹಲಿ ಶಾಸಕರು ವೇತನ ಹೆಚ್ಚಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಸಕರ ವೇತನವನ್ನು ಭಾರೀ ಹೆಚ್ಚಳ ಮಾಡಲಾಗಿದೆ.

    ದೆಹಲಿ ಶಾಸಕರ ವೇತನ ಭತ್ಯೆ, ಪಿಂಚಣಿ ತಿದ್ದುಪಡಿಗೆ ದೆಹಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕಾಯಿದೆ ಅಂಗೀಕಾರದ ಬಳಿಕ ದೆಹಲಿ ವಿಧಾನಸಭೆಯ ಶಾಸಕರು ತಮ್ಮ ಮಾಸಿಕ ವೇತನ ಹಾಗೂ ಭತ್ಯೆಗಳಲ್ಲಿ ಶೇ.66.7 ರಷ್ಟು ಹೆಚ್ಚಳವನ್ನು ಪಡೆಯಲಿದ್ದಾರೆ. ಹೀಗಾಗಿ ದೆಹಲಿ ಶಾಸಕರ ವೇತನ ತಿಂಗಳಿಗೆ 54,000 ರೂ. ಯಿಂದ 90,000 ರೂ.ಗೆ ಏರಿಕೆಯಾಗಿದೆ.

    ಇದನ್ನೂ ಓದಿ:  ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವಾಗ ಕಾಲು ಜಾರಿ ಬಿದ್ದು ಪ್ರಾಣ ಬಿಟ್ಟ ಯುವಕ!

    ದೆಹಲಿ ಸರ್ಕಾರದ ಕಾನೂನು, ನ್ಯಾಯ ಮತ್ತು ಶಾಸಕಾಂಗ ವ್ಯವಹಾರಗಳ ಇಲಾಖೆ ಗುರುವಾರ ಹೊರಡಿಸಿದ ಅಧಿಸೂಚನೆಯಲ್ಲಿ ಈ ಬದಲಾವಣೆಗಳನ್ನು ಪ್ರಕಟಿಸಿದೆ. 2011ರ ಬಳಿಕ ದೆಹಲಿ ಶಾಸಕರ ವೇತನದಲ್ಲಿ ಮಾಡಲಾಗಿರುವ ಮೊದಲ ಪರಿಷ್ಕರಣೆ ಇದಾಗಿದೆ. ಈ ಕ್ರಮಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದ್ದು, ಈ ಬದಲಾವಣೆಗಳು ಫೆಬ್ರವರಿ 14ರಿಂದ ಜಾರಿಗೆ ಬಂದಿದೆ ಎನ್ನಲಾಗಿದೆ.

    ಮುಖ್ಯಮಂತ್ರಿ, ಸಚಿವರು, ಸ್ಪೀಕರ್, ಉಪಸಭಾಪತಿ ಸಂಬಳ ಮಾಸಿಕವಾಗಿ 72,000 ರೂ. ಯಿಂದ 1,70,000 ರೂ.ಗೆ ಏರಿಕೆಯಾಗಿದೆ. ಶಾಸಕರ ವೇತನ ತಿಂಗಳಿಗೆ 54,000 ರೂ. ಯಿಂದ 90,000 ರೂ.ಗೆ ಏರಿಕೆಯಾಗಿದೆ.

    ಇದನ್ನೂ ಓದಿ:  ಬೇರೊಬ್ಬಳ ಜತೆ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಕರ; ಕುದಿಯುವ ಎಣ್ಣೆ ಸುರಿದ ಯುವತಿ !

    2015 ರಲ್ಲಿ, ಎಎಪಿ ಸರ್ಕಾರವು ಎಲ್ಲಾ ಭತ್ಯೆಗಳನ್ನು ಒಳಗೊಂಡಂತೆ ಶಾಸಕರ ವೇತನವನ್ನು ತಿಂಗಳಿಗೆ ಸುಮಾರು 2.10 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಿ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತ್ತು, ಆದರೆ ಅದನ್ನು ತಿರಸ್ಕರಿಸಲಾಗಿತ್ತು.

    ಕಾಂಗ್ರೆಸ್​​ ಸಿಡಿ, ಬ್ಲ್ಯಾಕ್​ ಮೇಲ್ ಪಾರ್ಟಿಯಾಗಿದೆ; ಅಶ್ವಥ್ ನಾರಾಯಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts