More

    ಸಂಬಳ ಹೆಚ್ಚಳಕ್ಕಾಗಿ ಪಟ್ಟುಹಿಡಿದ ಸಾರಿಗೆ ನೌಕರರು: ಸಾರಿಗೆ ಸಚಿವರ ಮಹತ್ವದ ಸಭೆ; ಏನೇನಾಯ್ತು?

    ಬೆಂಗಳೂರು: ಸರ್ಕಾರಿ ನೌಕರರ ವೇತನ ಹೆಚ್ಚಳವಾದ ಬೆನ್ನಿಗೇ ಸಾರಿಗೆ ನೌಕರರು ಕೂಡ ತಮ್ಮ ಸಂಬಳವನ್ನು ಹೆಚ್ಚಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಸಂಘ ಮತ್ತು ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ಸಾರಿಗೆ ಸಚಿವ ಶ್ರೀರಾಮುಲು ಸಭೆ ನಡೆಸಿ ಚರ್ಚಿಸಿದ್ದಾರೆ.

    ಸಭೆ ಬಳಿಕ ಶ್ರೀರಾಮುಲು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದು, ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ಸಭೆ ನಡೆಸಿದ್ದಾನೆ. 2017ರಿಂದ ವೇತನ ಪರಿಷ್ಕರಣೆ ಆಗಿರಲಿಲ್ಲ. ಅವರ ಬೇಡಿಕೆಯನ್ನು ನಾಳೆ ಮುಖ್ಯಮಂತ್ರಿಯವರಿಗೆ ತಿಳಿಸುತ್ತೇನೆ. ಇನ್ನೆರಡು ದಿನದಲ್ಲಿ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂಬುದಾಗಿ ತಿಳಿಸಿದ್ದಾರೆ.

    ನಮ್ಮ ಎಲ್ಲ ನಿಗಮಗಳಲ್ಲಿ ಎಲ್ಲ ನೌಕರರಿಗೆ ಸಂಬಳ ನಿಲ್ಲದಂತೆ ನೋಡಿಕೊಂಡಿದ್ದೇವೆ. ಶೇ.25ರಷ್ಟು ವೇತನ ಪರಿಷ್ಕರಣೆಗೆ ಅವರು ಬೇಡಿಕೆ ಇಟ್ಟಿದ್ದಾರೆ. ಆದರೆ ನಮ್ಮ ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ. ಅದನ್ನು ಸಭೆಯಲ್ಲಿ ವಿವರಿಸಿದ್ದು, ಇನ್ನು ಎರಡು ದಿನಗಳಲ್ಲಿ ಸಿಎಂ ಬೊಮ್ಮಾಯಿ ಜೊತೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಇದನ್ನೂ ಓದಿ: ಪದವೀಧರ ಶಿಕ್ಷಕರ ಅಂತಿಮ ಆಯ್ಕೆ ಪಟ್ಟಿ ಪ್ರಕಟ: 13,352 ಅಭ್ಯರ್ಥಿಗಳು ಆಯ್ಕೆ; ನೂತನ ಶಿಕ್ಷಕರಿಗೆ ಯಾವಾಗ ನೇಮಕಾತಿ?

    ಮತ್ತೊಂದೆಡೆ ಸಚಿವರ ಭರವಸೆಗೆ ಒಪ್ಪದ ನೌಕರರ ಸಂಘ, ಇಂದಿನ ಸಭೆಯಲ್ಲಿ ಯಾವುದೇ ಒಮ್ಮತದ ನಿರ್ಧಾರವಾಗಿಲ್ಲ. ಮುಖ್ಯವಾಗಿ ವೇತನ ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಚರ್ಚೆ ಮಾಡಲಾಗಿತ್ತು. ಎಂಟು ವರ್ಷಗಳಿಂದ ವೇತನ ಹೆಚ್ಚಳ ಆಗಿಲ್ಲ. ನೌಕರರು ಶೇ. 25 ಪರಿಷ್ಕರಣೆ ಮಾಡುವಂತೆ ಆಗ್ರಹಿಸಲಾಗಿದೆ. ಆದರೆ ಸರ್ಕಾರ ಶೇ. 10 ಮಾತ್ರ ಹೆಚ್ಚಳ ಮಾಡುವುದಾಗಿ ಹೇಳುತ್ತಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅನಂತಸುಬ್ಬರಾವ್ ತಿಳಿಸಿದ್ದಾರೆ.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

    ಇಂದಿನ ಸಭೆಯಲ್ಲಿ ನಡೆದಿದ್ದು ಬರೀ ಚೌಕಾಸಿ, ನಮ್ಮ ಬೇಡಿಕೆಗಳಿಗೆ ಅಧಿಕಾರಿಗಳು ಒಪ್ಪಿಲ್ಲ ಎಂದು ಬಿಎಂಟಿಸಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ. ಸರ್ಕಾರಿ ನೌಕರರು ಮುಷ್ಕರ ಮಾಡಿದರೆ ಬೇಡಿಕೆ ಈಡೇರಿಸುತ್ತಾರೆ. ಆದರೆ ಸಾರಿಗೆ ನೌಕರರಿಗೆ ಶೇ.7ರಿಂದ 10 ಪರಿಷ್ಕರಣೆ ಎನ್ನುತ್ತಿದ್ದಾರೆ. ಅದಕ್ಕೆ ನಮ್ಮ ಸಹಮತವಿಲ್ಲ. ಒಂದು ವೇಳೆ ವೇತನ ಪರಿಷ್ಕರಣೆ ಆಗದಿದ್ದಲ್ಲಿ, ಮತ್ತೆ ಬೀದಿಗಿಳಿದು ಮುಷ್ಕರ ನಡೆಸುವುದಾಗಿ ಚಂದ್ರಶೇಖರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts