More

    ‘ಉದ್ಯೋಗ ಕೊಟ್ಟರೂ ಬೇಡವೆಂದವರು ಅವರೇ..’: ಕುಸ್ತಿಪಟು ಸಾಕ್ಷಿ ಮಲ್ಲಿಕ್​ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಸಚಿವ

    ಚಂಡಿಗಢ್​: ರಿಯೊ ಒಲಂಪಿಕ್ಸ್​​ನಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದ ಮಹಿಳಾ ಕುಸ್ತಿಪಟು ಸಾಕ್ಷಿ ಮಲ್ಲಿಕ್​ ಮತ್ತು ಹರ್ಯಾಣ ಸರ್ಕಾರದ ಮಧ್ಯೆ ಅಸಮಾಧಾನದ ಹೊಗೆ ಎದ್ದಿದೆ.

    ನಿನ್ನೆ ಮಾತನಾಡಿದ್ದ ಸಾಕ್ಷಿ ಮಲ್ಲಿಕ್​, ನಾನು ಪದಕ ಗೆದ್ದ ಸಂದರ್ಭ (2016)ದಲ್ಲಿ ರಾಜ್ಯ ಸರ್ಕಾರ ನನಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ ಈವರೆಗೆ ಕೆಲಸವಾಗಲೀ, ಭೂಮಿಯಾಗಲೀ ನನಗೆ ಸಿಕ್ಕಿಲ್ಲ. ನಾನು ಇದೇ ವಿಚಾರಕ್ಕೆ ಹಲವು ಬಾರಿ ಕ್ರೀಡಾ ಸಚಿವರನ್ನು, ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೇನೆ. ಆದರೆ ಭರವಸೆ ಕೊಡುತ್ತಲೇ ಬಂದಿದ್ದಾರೆ ಹೊರತು ಇನ್ನೇನೂ ಮಾಡಿಲ್ಲ ಎಂದು ಹೇಳಿದ್ದರು.

    ಸಾಕ್ಷಿ ಅವರ ಈ ಆರೋಪಕ್ಕೆ ಇಂದು ಹರ್ಯಾಣ ಆರೋಗ್ಯ ಸಚಿವ ಅನಿಲ್​ ವಿಜ್​ ಖಡಕ್​ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಸರ್ಕಾರಿ ಉದ್ಯೋಗ ಕೊಡಲು ಮುಂದಾದಾಗ ಸಾಕ್ಷಿ ಮಲ್ಲಿಕ್​ ಅದನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಸಾಕ್ಷಿ ಮಲ್ಲಿಕ್​ ಅವರು ಪದಕ ಗೆದ್ದು ವಾಪಸ್​ ಬರುತ್ತಿದ್ದಂತೆ 2.5 ಕೋಟಿ ರೂ.ಚೆಕ್​​ನ್ನೂ ನೀಡಿದ್ದೇವೆ. ಅವರ ಕೋರಿಕೆಯ ಮೇರೆಗೆ ಇಬ್ಬರು ಕೋಚ್​​ಗಳಿಗೂ ತಲಾ 10 ಲಕ್ಷ ರೂ.ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ

    ಹಾಗೇ, ಕೆಲಸ ನೀಡುವುದಾಗಿ ಹೇಳಿದಾಗ ಸಾಕ್ಷಿ ಮಲ್ಲಿಕ್​ ಅವರು, ರೈಲ್ವೆ ಡಿಪಾರ್ಟ್​ಮೆಂಟ್​ ಕೆಲಸದಲ್ಲೇ ಇದೀಗ ಪ್ರಮೋಶನ್​ ಸಿಕ್ಕಿದೆ. ಅಲ್ಲಿಯೇ ಮಾಡುತ್ತೇನೆ ಎಂದು ಹೇಳಿದರು.

    ಇದೀಗ ಆರೋಗ್ಯ ಸಚಿವರಾಗಿರುವ ವಿಜ್​ ಅವರು, 2014ರಿಂದ 2019ರವರೆಗೆ ಕ್ರೀಡಾ ಸಚಿವರಾಗಿದ್ದರು. ನಮ್ಮ ಸರ್ಕಾರ ಕ್ರೀಡಾಪಟುಗಳ ವಿಚಾರದಲ್ಲಿ ಪಾರದರ್ಶಕ ನೀತಿಯನ್ನು ಹೊಂದಿದೆ. ಅವರ ಸಾಧನೆಯ ಅನುಸಾರ ಅವಾರ್ಡ್​ ನೀಡಲಾಗುತ್ತದೆ ಎಂದು ತಿಳಿಸಿದರು.(ಏಜೆನ್ಸೀಸ್​)

    ಚುನಾವಣಾ ಕಣದಲ್ಲಿ ಪ್ರತಿಸ್ಪರ್ಧಿಗಳಾಗಲಿದ್ದಾರೆ ಪತಿ-ಪತ್ನಿ !; ಪ್ರತಿಷ್ಠಿತ ಕುಟುಂಬದ ‘ಬಹಿರಂಗ’ ರಾಜಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts