More

    ವಾಟ್ಸ್‌ಆ್ಯಪ್ ಥರದ್ದೇ ಬೇರೆ ಸುರಕ್ಷಿತ ಆ್ಯಪ್ ಅಭಿವೃದ್ಧಿಪಡಿಸಿದ ಸೇನೆ; ಇದು ಸೈನಿಕರಿಗೆ ಮಾತ್ರ!

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಚಾಟ್ ಮಾಡಲುಇರುವ ವಾಟ್ಸ್‌ಆ್ಯಪ್ ಮಾದರಿಯಲ್ಲಿ ‘ಅಸಿಗ್ಮಾ’ (ಆರ್ಮಿ ಸೆಕ್ಯೂರ್ ಇಡಿಜಿನಿಸ್ ಮೆಸೇಜಿಂಗ್ ಅಪ್ಲಿಕೇಷನ್-) ಎಂಬ ಸುರಕ್ಷಿತ ಆ್ಯಪ್ ಅಭಿವೃದ್ಧಿ ಪಡಿಸಿರುವುದಾಗಿ ಭಾರತೀಯ ಸೇನೆ ತಿಳಿಸಿದೆ. ಇದು ಸೇನೆಯ ಆಂತರಿಕ ಬಳಕೆಗೆ ಮಾತ್ರ ಇರುವಂತಹ ಆ್ಯಪ್ ಆಗಿದೆ. ಆ್ಯಪ್ ಸ್ಟೋರ್‌ನಲ್ಲಿ ಅನ್ಯರಿಗೆ ಸಿಗುವುದಿಲ್ಲ.

    ಈ ಆ್ಯಪ್ ಅನ್ನು ಸೇನೆಯ ಸಿಗ್ನಿಲ್ ಕಾರ್ಪ್ಸ್ ವಿಭಾಗ ಅಭಿವೃದ್ಧಿ ಪಡಿಸಿದ್ದು, ಸದ್ಯ ಸೇನೆಯಲ್ಲಿ 15 ವರ್ಷಗಳಿಂದ ಬಳಕೆಯಲ್ಲಿರುವ ‘ಆರ್ಮಿ ವೈಡ್ ಏರಿಯಾ ನೆಟ್‌ವೆರ್ಕ್’ ಎಂಬ ಆ್ಯಪ್ ಅನ್ನು ಅಸಿಗ್ಮಾ ಬದಲಿಸಲಿದೆ.

    ಅಸಿಗ್ಮಾ ಅತ್ಯಾಧುನಿಕ ತಂತ್ರಜ್ಞಾನದ ಬೆಂಬಲವನ್ನು ಹೊಂದಿದ್ದು, ಅನೇಕ ಹೊಸ ಫೀಚರ್‌ಗಳು ಇದರಲ್ಲಿ ಹೀಗಾಗಿ ಭವಿಷ್ಯದ ಅವಶ್ಯಕತೆಯನ್ನು ಇದು ಒದಗಿಸಲಿದೆ. ಮುಖ್ಯವಾಗಿ ಸಂವಹನದ ಸುರಕ್ಷತೆಗೆ ಗರಿಷ್ಠ ಒತ್ತು ನೀಡಲಾಗಿದೆ. ಉಳಿದಂತೆ ಸಾಮಾಜಿಕ ಜಾಲತಾಣದ ಆ್ಯಪ್‌ಗಳಲ್ಲಿ ಇರುವಂತೆ ಗ್ರೂಪ್ ಚಾಟ್, ವಿಡಿಯೋ ಮ್ತು ಇಮೇಜ್ ಹಂಚಿಕೊಳ್ಳುವಿಕೆ, ಧ್ವನಿ ಸಂವಹನಗಳು ಇದರಲ್ಲಿ ಇವೆ ಎಂದು ಸೇನೆಯ ಹೇಳಿಕೆ ತಿಳಿಸಿದೆ.

    VIDEO: ಚಿತ್ರದುರ್ಗದಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ದರೋಡೆ: ಕೊನೆಗೂ ಸಿಕ್ಕಿಬಿದ್ದ ಬೆಂಗಳೂರಿನ ಖತರ್ನಾಕ್‌ ಗ್ಯಾಂಗ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts