More

    ಉನ್ನತ ಹುದ್ದೆ ಏರುವ ಯೋಗವಿದೆ ಎಂದು ಹೇಳಿ ನ್ಯಾಯಾಧೀಶೆಗೂ ಟೋಪಿ ಹಾಕಿದ ಯುವರಾಜ!

    ಬೆಂಗಳೂರು: ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಆ ಪಕ್ಷದ ನಾಯಕರ, ಧುರೀಣರ ಜತೆ ಫೋಟೋ ತೆಗೆಸಿಕೊಂಡು ಅವರ ಹೆಸರಿನಲ್ಲಿ ಕೋಟಿ ಕೋಟಿ ಪಂಗನಾಮ ಹಾಕುತ್ತಿರುವ ಯುವರಾಜ್​ ಅಲಿಯಾಸ್​ ಸ್ವಾಮಿಯ ಭಯಾನಕ ಚಟುವಟಿಕೆಗಳು ಅಗೆದಷ್ಟೂ ಬಗೆದಷ್ಟೂ ಹೊರಕ್ಕೆ ಬರುತ್ತಿವೆ.

    ರಾಜಕೀಯ ಧುರೀಣರು ಸೇರಿದಂತೆ ಎಲ್ಲಾ ಕ್ಷೇತ್ರದ ಗಣ್ಯರ ಜತೆ ಪೋಸ್​ ಕೊಟ್ಟು ನಿಂತುಕೊಂಡು ಸರ್ಕಾರಿ ಉದ್ಯೋಗದ ಆಮಿಷ ಒಡ್ಡಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷದಿಂದ ಕೋಟಿಗಟ್ಟಲೆ ಹಣವನ್ನು ಗುಳುಂ ಮಾಡಿ ಸದ್ಯ ಬಂಧನಕ್ಕೆ ಒಳಗಾಗಿರುವ ಈ ಸ್ವಾಮಿಯ ಕಥೆಗಳು ಒಂದಲ್ಲ… ಎರಡಲ್ಲ… ಈತನ ಬಲೆಗೆ ಬಿದ್ದವರು ಅದೆಷ್ಟೋ ಮಂದಿ.

    ಇದಾಗಲೇ ನಟಿ ರಾಧಿಕಾ ಕುಮಾರಸ್ವಾಮಿಯರ ಜತೆ ಈ ಕಳ್ಳಸ್ವಾಮಿಯ ಹೆಸರು ಥಳಕು ಹಾಕಿಕೊಂಡು ಅಚ್ಚರಿ ಮೂಡಿಸಿದೆ. ಇದರ ಬೆನ್ನಲ್ಲೇ ಇದೀಗ ನಿವೃತ್ತ ನ್ಯಾಯಾಧೀಶೆಯೂ ಮೋಸ ಹೋಗಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ನ್ಯಾಯಾಧೀಶೆ ಇಂದ್ರಕಲಾ ಅವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

    ತನಗೆ ಬಿಜೆಪಿ ಮತ್ತು ಆರ್​ಎಸ್​ಎಸ್​ನ ಪ್ರಮುಖ ವ್ಯಕ್ತಿಗಳು ತಿಳಿದಿದ್ದು, ತನ್ನ ಮಾತು ಎಲ್ಲೆಡೆ ನಡೆಯುತ್ತದೆ ಎಂದು ನ್ಯಾಯಾಧೀಶೆಗೆ ತಿಳಿಸಿದ್ದ ಈ ಯುವರಾಜ, ಅವರ ಬಳಿಯಿಂದ ಸುಮಾರು ನಾಲ್ಕೂವರೆ ಕೋಟಿ ರೂಪಾಯಿ ಹಣ ವಸೂಲಿ ಮಾಡಿದ್ದಾನಂತೆ.

    ಇದನ್ನೂ ಓದಿ: ಕೋಟಿ ಕೋಟಿ ಟೋಪಿ ಹಾಕಿದ್ದಾನೆ ಈ ಯುವರಾಜ! ನೀವೂ ಮೋಸಹೋಗಿರಬಹುದು, ನೋಡಿಕೊಳ್ಳಿ…

    ನನಗೆ ಶಾಸ್ತ್ರ ನೋಡಲು ಬರುತ್ತದೆ. ಅದರ ಪ್ರಕಾರ ನೀವು ಈ ರಾಜ್ಯದ ಉನ್ನತ ಹುದ್ದೆಯನ್ನು ಏರಲಿದ್ದೀರಿ. ಅದಕ್ಕೆ ಅವಕಾಶ ಬೇಕಷ್ಟೇ ಎಂದು ನ್ಯಾಯಾಧೀಶೆಗೇ ಮಂಕುಬೂದಿ ಎರೆಚಿರುವ ಈ ಕಳ್ಳಸ್ವಾಮಿ, ಅವರಿಂದ ಹಣವನ್ನು ಲಪಟಾಯಿಸಲು ಯಶಸ್ವಿಯಾಗಿದ್ದಾನೆ.

    ನನಗೆ ಮೋಸ ಮಾಡಿ ಹಣವನ್ನು ಕೇಳಿದ್ದ. ಅವನು ಕೇಳಿದಷ್ಟು ಹಣ ನನ್ನ ಬಳಿ ಇರಲಿಲ್ಲ. ಆದ್ದರಿಂದ ನಾನು ಸ್ನೇಹಿತರು, ಹಿತೈಷಿಗಳನ್ನು ಸಂಪರ್ಕಿಸಿದ್ದೆ. ನಂತರ ಅವನೇ ನೇರವಾಗಿ ಅವರೆಲ್ಲರ ಬಳಿ ಹೋಗಿ ಹಣವನ್ನು ಪಡೆದುಕೊಂಡು ಬಂದಿದ್ದಾನೆ. ಆದರೆ ಇದುವರೆಗೂ ಯಾವುದೇ ಹುದ್ದೆಯಾಗಲೀ, ಹಣವನ್ನಾಗಿ ಕೊಟ್ಟಿಲ್ಲ. ಅವನು ಮೋಸ ಮಾಡಿರುವುದು ಈಗ ತಿಳಿದಿದೆ. ಆದ್ದರಿಂದ ಈತನ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ನ್ಯಾಯಾಧೀಶೆ ದೂರಿನಲ್ಲಿ ಹೇಳಿದ್ದಾರೆ.

    ನಾನು ಹಣಕ್ಕಾಗಿ ಆತನ ಮನೆಗೆ ಹೋಗಿದ್ದಾಗ ಏನೇನೋ ಸಬೂಬು ಹೇಳಿ ಸಾಗಹಾಕಿದ್ದಾನೆ. ಇದುವರೆಗೂ ಏನೂ ಕೊಡದೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಅವರು ಬರೆದಿದ್ದಾರೆ.

    ಯಾರೀ ಕಳ್ಳಸ್ವಾಮಿ?
    ಎಲ್ಲಾ ಧುರೀಣರ ಜತೆ ಫೋಟೊ ತೆಗೆಸಿಕೊಳ್ಳುವ ಈತ ಎಲ್ಲರೂ ತನಗೆ ಪರಿಚಯವಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಅಲ್ಲಿಯ ನಾಯಕರನ್ನು ಅದ್ಹೇಗೋ ಮರಳು ಮಾಡಿ ಫೋಟೋ ತೆಗೆಸಿಕೊಳ್ಳುವಲ್ಲಿ ಈತ ನಿಸ್ಸೀಮನಾಗಿದ್ದ. ಇವನ ಫೋಟೋ ನೋಡಿದ ಜನ ಸರ್ಕಾರಿ ನೌಕರಿ ಸಿಗಬಹುದು ಎಂಬ ಆಸೆಯಲ್ಲಿ ಲಕ್ಷಾಂತರ ರೂಪಾಯಿ ದುಡ್ಡು ಸುರಿಯುತ್ತಿದ್ದರು. ಉಮೇಶ್​ ಎಂಬುವವರು ಈತನ ಬಳಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಉಮೇಶ್​ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆಸಿದ್ದ ಯುವರಾಜ್ ಆತನಿಂದ ನೂರು ಚೆಕ್ ಗಳನ್ನು ಪಡೆದು ಸಹಿ ಹಾಕಿಸಿಕೊಂಡಿದ್ದ. ಇದರಿಂದ ಅನುಮಾನಗೊಂಡ ಉಮೇಶ್, ಹಾರಿಕೆ ಉತ್ತರ ಕೊಟ್ಟಿದ್ದ.
    ನಂತರ ತನಿಖೆ ನಡೆಸಿದಾಗ ಉಮೇಶ್​ ಅವರ ಬ್ಯಾಂಕ್​ ಖಾತೆಯಿಂದ 1.3 ಕೋಟಿ ರೂಪಾಯಿಯಷ್ಟು ವ್ಯವಹಾರ ನಡೆಸಿದ್ದು ಬೆಳಕಿಗೆ ಬಂದಿದೆ. ಮೊದಲು 20 ಲಕ್ಷ, ನಂತರ 30 ಲಕ್ಷ ಹಾಗೂ ನಂತರ 80 ಲಕ್ಷದಂತೆ ಉಮೇಶ್ ಖಾತೆಗೆ ಹಣ ಜಮಾವಣೆಯಾಗಿದೆ. ನಂತರ ಖಾತೆಯಿಂದ ಹಣ ಡ್ರಾ ಮಾಡಿದ್ದಾನೆ.

    ಚಾಲಕನೊಬ್ಬನ ಬ್ಯಾಂಕ್​ ಖಾತೆಯಿಂದ ಇಷ್ಟೊಂದು ಹಣ ಜಮಾವಣೆಯಾಗಿದ್ದು ಹಾಗೂ ಹಣ ವಿತ್​ಡ್ರಾ ಆಗಿರುವುದು ಐಟಿ ಇಲಾಖೆಯ ಸಂದೇಹಕ್ಕೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆ ಕೇಳಿ ಉಮೇಶ್​ಗೆ ನೋಟಿಸ್​ ಕಳುಹಿಸಲಾಗಿದೆ.
    ನೋಟಿಸ್​ ನೋಡಿ ಕಂಗಾಲಾದ ಉಮೇಶ್​, ಈ ಬಗ್ಗೆ ಯುವರಾಜ್​ಗೆ ಕೇಳಿದ್ದಾನೆ. ಇಷ್ಟೆಲ್ಲಾ ಆಗುತ್ತದೆ ಎಂಬ ಅರಿವು ಇರದ ಯುವರಾಜ್​, ಉಮೇಶ್​ ಮೇಲೆ ಹಲ್ಲೆ ಮಾಡಿ ಪೊಲೀಸರಿಗೆ ಈ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆಧರಿಕೆ ಹಾಕಿದ್ದಾನೆ.

    ಇದಕ್ಕೆ ಸೊಪ್ಪು ಹಾಕದ ಉಮೇಶ್ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿಬಿ ದಾಳಿ ಮಾಡಲಾಗಿದ್ದು, ಮೋಸ ಬೆಳಕಿಗೆ ಬಂದಿದೆ. ಸದ್ಯ ಈತನ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡ ಸಿಸಿಬಿ ಬೆಳಗ್ಗೆ ಈತನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇನ್ನೂ ಎಷ್ಟು ಮಂದಿಗೆ ಈತ ಮೋಸ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸರ್ಕಾರಿ ಉದ್ಯೋಗದ ಹಿಂದೆ ಬಿದ್ದು ನೀವೂ ಈತನಿಗೇನಾದರೂ ದುಡ್ಡು ಕೊಟ್ಟಿದ್ದೀರಾ ನೋಡಿಕೊಂಡು ಬಿಡಿ.

    ಬಳಸಿದ ಕಾಂಡೋಮ್​ ಒಳಗೆ ವಿಲವಿಲ ಒದ್ದಾಡಿದ ವಿಷಕಾರಕ ಹಾವು! 

    ಮೂರು ಮಕ್ಕಳ ತಂದೆಯ ಪ್ರೀತಿಗೆ ಬಿದ್ದು ಮದುವೆಯಾಗಲಾರದೇ ತೊಳಲಾಡುತ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿ

    ನೆಹರೂ ದೊಡ್ಡ ತಪ್ಪು ಮಾಡಿಬಿಟ್ರು- ಇಲ್ಲದಿದ್ರೆ ಹೀಗಾಗುತ್ತಿರಲಿಲ್ಲ: ಪ್ರಣಬ್​ ಪುಸ್ತಕದಲ್ಲಿ ನೇಪಾಳದ ಉಲ್ಲೇಖ

    ನನ್ನ ನೆಚ್ಚಿನ ಪಕ್ಷ ಹೀಗೆಕಾಯ್ತು? ಅಂತಿಮ ಪುಸ್ತಕದಲ್ಲಿ ಪ್ರಣಬ್​ ಮುಖರ್ಜಿಯ ನೋವಿನ ನುಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts