More

    ದುಡ್ಡಿಗಾಗಿ ಎಲ್ಲವನ್ನೂ ಮಾಡಿಬಿಟ್ಟೆ, ನಂತ್ರ ಬೇಡಿಕೊಳ್ತಿದ್ದೆ: ನೀನಾ ಗುಪ್ತಾ

    ಮುಂಬೈ: ಬಾಲಿವುಡ್​ ನಟಿ ನೀನಾ ಗುಪ್ತಾ ಬೋಲ್ಡ್ ಮತ್ತು ರೆಬೆಲ್ ನಟಿ. ತಮ್ಮ ವೃತ್ತಿಜೀವನದಲ್ಲಿ ಹಲವಾರು ಅತ್ಯುತ್ತಮ ಪಾತ್ರಗಳನ್ನು ನಿರ್ವಹಿಸುವ ಮೂಲಕ ಹೆಸರು ಗಳಿಸಿದ್ದಾರೆ. ನಟಿ ತಮ್ಮ ಹೋರಾಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ನಟಿ ಫುಲೇರಾ ಚಿತ್ರದ ನಾಯಕಿ ಮಂಜು ದೇವಿಯಾಗಿ ಮತ್ತೊಮ್ಮೆ ಪುನರಾಗಮನ ಮಾಡುತ್ತಿದ್ದಾರೆ. ‘ಪಂಚಾಯತ್ 3’ ಈ ವೆಬ್ ಸೀರಿಸ್​ಗೆ ಮೂರನೇ ಸೀಸನ್ ಬರುತ್ತಿದೆ. ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಮುಂಬೈಗೆ ಹೋದಾಗ, ಹಣ ಸಂಪಾದಿಸಲು ತಾನು ಬಯಸದ ಅನೇಕ ಪಾತ್ರಗಳನ್ನು ಮಾಡಬೇಕಾಯಿತು, ಅಶ್ಲೀಲ ಚಿತ್ರಗಳನ್ನೂ ಒಪ್ಪಿಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿ, ಅವಶ್ಯಕತೆಗೆ ತಕ್ಕಂತೆ ಎಲ್ಲವೂ ಬದಲಾಗಿದೆ, ಹಣದ ಅವಶ್ಯಕತೆ ಹೆಚ್ಚಾದಾಗ ನಾನು ತುಂಬಾ ಕೆಟ್ಟ ಪಾತ್ರಗಳನ್ನು ಮಾಡಬೇಕಾಗಿತ್ತು. ನಂತರ ಪಶ್ಚಾತ್ತಾಪ ಪಡುತ್ತಿದ್ದೆ. ಆ ಚಿತ್ರ ರಿಲೀಸ್​ ಆಗದೇ ಇರಲಪ್ಪ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಆದರೆ ಈಗ ಕಾಲ ಬದಲಾಗಿದೆ. ನಾನು ತುಂಬಾ ಇಷ್ಟಪಡುವ ಸ್ಕ್ರಿಪ್ಟ್ ಮಾಡುತ್ತೇನೆ, ನನಗೆ ಇಷ್ಟವಿಲ್ಲದಿದ್ದರೆ ನಾನು ಮಾಡುವುದಿಲ್ಲ ಎನ್ನುವ ಹೇಳುವ ಧೈರ್ಯವಿದೆ ಎಂದಿದ್ದಾರೆ.

    ನನ್ನನ್ನು ರೆಬೆಲ್ ಎಂದು ಏಕೆ ಕರೆಯುತ್ತಾರೆ. ನಾನು ಮುಗ್ಧ ಪಾತ್ರಗಳನ್ನು ಮಾಡಿದ್ದೇನೆ. ಮೇಜ್ ಕ್ರಿಯೇಟ್ ಆಯಿತು ಹೀಗಾಗಿ ಆ ರೀತಿಯ ಪಾತ್ರ ಸಿಕ್ಕಿಲ್ಲ. ನಾನು ಸತ್ತ ಬಳಿಕವೂ ಅವರು ಬಿಡಲ್ಲ. ಬೋಲ್ಡ್ ನೀನಾ ಗುಪ್ತಾ ಇನ್ನಿಲ್ಲ ಎಂದೇ ಬರೆಯುತ್ತಾರೆ ಎಂದು ಹೇಳಿದ್ದಾರೆ.

    ಕಾರಿನಿಂದ ಮನೆಯ ತನಕ ಹಾರ್ದಿಕ್​ ಎಲ್ಲಾ ಆಸ್ತಿಯೂ ಅಮ್ಮನ ಹೆಸರಿನಲ್ಲಿದೆ; ನತಾಶಾಗೆ 70% ಅಲ್ಲ 7% ಕೂಡಾ ಸಿಗಲ್ಲ…

    ಊರ್ವಶಿ ರೌಟೇಲಾ ಧರಿಸಿದ ಈ ಎರಡು ಡ್ರೆಸ್​​ ಬೆಲೆ 105 ಕೋಟಿ ರೂ.! ಅಬ್ಬಬ್ಬಾ ಬೆಲೆ ಕೇಳಿ ಸುಸ್ತಾಯ್ತು ಎಂದ್ರು ಫ್ಯಾನ್ಸ್..​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts